ಸದೃಢ, ಆರೋಗ್ಯವಂತರಾಗಿಲು ಯೋಗ ಅಂದೋಲನವಾಗಬೇಕು,

Spread the love

ಬೆಂಗಳೂರು:
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಭಾಷ್ಯಂ ಸರ್ಕಲ್ ವೃತ್ತದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶ್ರೀಪತಂಜಲಿ ಯೋಗ ಶಿಕ್ಷಣ, ಕರ್ನಾಟಕ ಸಹಯೋಗ ಯೋಗ ಪ್ರದರ್ಶನ ಕಾರ್ಯಕ್ರಮ‌ ನಡೆಯಿತು.
ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮತ್ತು ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯವರು ಮತ್ತು ಸಾರ್ವಜನಿಕರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ನಮ್ಮ ದೇಶದ ಯೋಗ ವಿಶ್ವಕ್ಕೆ ಕೊಟ್ಟ ಕೊಡುಗೆ. ಇಂದು 170ಕ್ಕೂ ಹೆಚ್ಚು ದೇಶದಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ.
ಇಂದಿನ ಪರಿಸರ,ಕಲುಷಿತ ವಾತವರಣ ಮತ್ತು ಮಾನಸಿಕ ಒತ್ತಡ, ಆಹಾರ ಪದ್ದತಿಯಿಂದ ಆನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಮನುಷ್ಯ ತನ್ನ ಜೀವನವನ್ನು ಆರೋಗ್ಯವಂತರಾಗಿರಲು ಪ್ರತಿ ದಿನ ಒಂದು ಘಂಟೆ ಯೋಗಕ್ಕೆ ಮೀಸಲು ಇಡಬೇಕು.
ಯೋಗದ ಬಗ್ಗೆ ಜನಜಾಗೃತಿ ಮತ್ತು ಅರಿವು ಮೂಡಿಸಲು ಸಾರ್ವಜನಿಕ ಸ್ಥಳದಲ್ಲಿ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು.
ಆರೋಗ್ಯವಂತ ಸಮಾಜ, ಸದೃಢ ಮತ್ತು ಸಮರ್ಥ ಭಾರತ ನಿರ್ಮಾಣ ಮಾಡಲು ಪ್ರತಿಯೊಂದು ಮನೆ ಯೋಗ ಕೇಂದ್ರಗಳಾಬೇಕು ಎಂದು ಹೇಳಿದರು.
ರಾಜಾಜಿನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ರಾಘವೇಂದ್ರರಾವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ದೀಪಾ ನಾಗೇಶ್, ಬಿಜೆಪಿ. ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಸತೀಶ್ ಭಗವಾನ್, ವೆಂಕಟೇಶ್ ಬಾಬು, ಕಿರಣ್ ರವರು ಪಾಲ್ಗೊಂಡಿದ್ದರು.

Right Click Disabled