ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ 5332 ಫಲಾನುಭವಿಗಳಿಗೆ ಗ್ರಾಮ ವಾಸ್ತವ್ಯದಲ್ಲಿ ಸವಲತ್ತು ವಿತರಿಸಿದ ಕಂದಾಯ ಸಚಿವ ಆರ್. ಅಶೋಕ್

Spread the love

.

ತುರುವೇಕೆರೆ: 5332 ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಖೆ ವತಿಯಿಂದ ಸರ್ಕಾರದ ಸವಲತ್ತುಗಳನ್ನು ಕಂದಾಯ ಸಚಿವ ಆರ್ ಅಶೋಕ್ ವಿತರಿಸಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ತುಮಕೂರು ಜಿಲ್ಲಾಡಳಿತ ವತಿಯಿಂದ ಮತ್ತು ತುರುವೇಕೆರೆ ತಾಲೂಕು ಆಡಳಿತ ಸಹಯೋಗದೊಂದಿಗೆ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದ ಅವರು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಗ್ರಾಮವಾಸ್ತವ್ಯ ವೆಂಬುದು ಪಾಠಶಾಲೆಯಿದ್ದಂತೆ ಜನರ ಹಾಗೂ ಅಧಿಕಾರಿಗಳ ನಡುವೆ ಇರುವ ಕಂದಕವನ್ನು ತೆಗೆದು ಹಾಕುವುದೇ ಗ್ರಾಮ ವಾಸ್ತವ್ಯ ಎಂದ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು ಮತ್ತು ಒಂದು ತಿಂಗಳಲ್ಲಿ 1252 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ನೀಡಲಾಗಿದ್ದು, ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಉಳಿದು ಅಲ್ಲಿನ ವಾಸ್ತವ ಸ್ಥಿತಿ ತಿಳಿದು ಶೀಘ್ರವೇ ಪರಿಹಾರ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಪಿಂಚಣಿದಾರರಿಗೆ ಸಾಕಷ್ಟು ಅನುಕೂಲವಾಗಿದೆ. ಇದರಿಂದ ಕಳೆದ ಎರಡು ಅಸೆಂಬ್ಲಿಯಲ್ಲಿ ಇದರ ಬಗ್ಗೆ ಒಂದು ಪ್ರಶ್ನೆಯೂ ಇಲ್ಲ ಎಂದರು. ಪ್ರತಿಪಕ್ಷದ ಶಾಸಕರಿಂದಲೂ ಈ ಕಾರ್ಯಕ್ರಮದ ಬಗ್ಗೆ ಉತ್ತಮ ಪ್ರಸಂಶೆ ವ್ಯಕ್ತವಾಗಿದೆ ಎಂದು ತಿಳಿಸಿದರು.
  ಹಲೋ ಕಂದಾಯ ಸಚಿವರೇ ಸಹಾಯವಾಣಿಗೆ ಕರೆ ಮಾಡಿದ 72 ಗಂಟೆಯೊಳಗೆ ಮನೆ ಬಾಗಿಲಿಗೆ ಕಂದಾಯ ಸೇವೆ ನೀಡುವ ಕಾರ್ಯ ಹಾಗೂ ಒಂದು ತಿಂಗಳಲ್ಲಿ5159 ಜನರಿಗೆ ಪಿಂಚಣಿ ಸೌಲಭ್ಯ ಕೊಟ್ಟಿರುವೆ. ಭೂ ಪರಿವರ್ತನೆ ಮಾಡಲು ಹೊಸ ಕಾಯ್ದೆ ಜಾರಿಗೆ ತರುತ್ತಿದ್ದು 3 ರಿಂದ 4 ದಿನದೊಳಗೆ ಕೆಲಸ ಸಂಪೂರ್ಣ ವಾಗುವ ಪ್ರಯತ್ನ ಮಾಡಲಾಗುತ್ತದೆ. ಗೊಲ್ಲರಟ್ಟಿ, ತಾಂಡ್ಯ, ಕುರುಬರಹಟ್ಟಿಗಳಿಗೆ ಗ್ರಾಮ ಎಂದು ಘೋಷಣೆ ಮಾಡಲಾಗುತ್ತದೆ ಎಂದರು, ಒಟ್ಟಾರೆ ಕಂದಾಯ ಇಲಾಖೆಯಲ್ಲಿ ನನ್ನ ಅವಧಿಯಲ್ಲಿ ಪರಿವರ್ತನೆ ತಂದಿದ್ದೇನೆ ಎಂದರು. ಕ್ಷೇತ್ರದ ಶಾಲೆ ಹಾಗೂ ಆಟದ ಮೈದಾನಕ್ಕೆ 13 ಶಾಲೆಗಳಿಗೆ ಜಮೀನು ಮಂಜೂರು ಆಗಿರುವ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರ ಮಾಡಿದ್ದು, ಇದರ ಜೊತೆಗೆ ಉಳಿದ ವಿವಿಧ ಫಲಾನುಭವಿಗಳಿಗೆ ಜಮೀನು ಮಂಜೂರಾದ ಪತ್ರವನ್ನು ನೀಡಲಾಗಿದ್ದು, ಈ ಕಾರ್ಯಕ್ರಮದ ಅಂಗವಾಗಿ ಒಂದು ಕೋಟಿ ರೂಪಾಯಿ ಅನುದಾನವನ್ನು ಮಾಯಸಂದ್ರ ಗ್ರಾಮದ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದು, ತಾಲೂಕಿನ ಮಾಯಸಂದ್ರ ನಾಡಕಛೇರಿ, ಶಿರಾ ತಾಲೂಕಿನ ಗೌಡನಕೆರೆ ನಾಡಕಛೇರಿ, ತಿಪಟೂರಿನ ನೊಣವಿನಕೆರೆ ನಾಡಕಛೇರಿ, ತುರುವೇಕೆರೆ ಆಡಳಿತ ಸೌಧಕ್ಕೆ 10 ಕೋಟಿ ಅನುದಾನದ ಅನುಮೋದನೆ ನೀಡಿದರು.

ಮಾಯಸಂದ್ರ ಗ್ರಾಮಕ್ಕೆ ನೀಡಿದ ಅನುದಾನವನ್ನು ಗ್ರಾಮಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಏನೆಲ್ಲ ಕಾರ್ಯ ಆಗಬೇಕಿದಿಯೋ ಅದಕ್ಕೆ ಈ ಅನುದಾನವನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಗ್ರಾಮ ವಾಸ್ತವ್ಯ ಎಂಬ ಕಾರ್ಯಕ್ರಮವು ಪಾಠಶಾಲೆಯಿದ್ದಂತೆ, ಕಾರ್ಯಕ್ರಮವು ಕೇವಲ ನೆಪ ಮಾತ್ರಕ್ಕೆ ಮಾಡುವುದು ಅಂದುಕೊಂಡಿದ್ದ ಸಾರ್ವಜನಿಕರು, ರೈತರಿಗೆ ಸ್ಥಳದಲ್ಲಿಯೇ ಸರ್ಕಾರವೇ ಖುದ್ದಾಗಿ ಗ್ರಾಮ ವಾಸ್ತವ್ಯ ಹೂಡುವ ಮುಖೇನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯವೂ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಎರಡನೇ ಹಂತದ ವಾಸ್ತವ್ಯವನ್ನು ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಡಳಿತ ಸೌಧದಲ್ಲಿದ್ದು, ಅಲ್ಲಿನ ಸಮಸ್ಯೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.
 ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ ರಾಜ್ಯಸಭಾ ಸದಸ್ಯನಾದ ಬಳಿಕ ಮೊಟ್ಟ ಮೊದಲಿಗೆ ನನ್ನ ಗ್ರಾಮಕ್ಕೆ ಆಗಮಿಸಿದ್ದು, ನಾನು ಓದಿದ ಶಾಲೆ, ಹುಟ್ಟಿದ ಊರನ್ನು ನನ್ನ ಅನುದಾನದಲ್ಲಿ ಅಭಿವೃದ್ಧಿಯನ್ನು ಮಾಡಲು ನಿರ್ಧಾರ ಮಾಡಿದ್ದು, ಇಡೀ 24 ಶಾಸಕರ ಕ್ಷೇತ್ರಕ್ಕೆ ನನ್ನ ಅನುದಾನವನ್ನು ಹಂಚಿಕೆ ಮಾಡಿದ್ದು, ಅದರಲ್ಲಿ ಮೊದಲ ಅನುದಾನವನ್ನು ಕರ್ಮ ಭೂಮಿಗೆ ಮೀಸಲಿಟ್ಟಿರುವುದಾಗಿ ತಿಳಿಸಿದರು.
  1600 ಕೋಟಿ ರೂಪಾಯಿ ಅನುದಾನವನ್ನು ತಂದಿದ್ದು, ಚುನಾವಣೆ ವೇಳೆಗೆ 400 ರಿಂದ 500 ಕೋಟಿ ರೂಪಾಯಿ ಅನುದಾನ ಬರಲಿದೆ. 5000 ಫಲಾನುಭವಿಗಳಿಗೆ ಜನರ ಹಾಗೂ ಅಧಿಕಾರಿಗಳ ನಡುವೆ ಇರುವ ಕಂದಕವನ್ನು ತೆಗೆದು ಹಾಕುವುದೇ ಗ್ರಾಮ ವಾಸ್ತವ್ಯ ಎಂದು ತಿಳಿಸಿದರು. ಜನಸ್ನೇಹಿ ಅಧಿಕಾರಿಗಳು ಆಗಬೇಕಿದೆ, ನಿರಂತರವಾಗಿ ಈ ಕಾರ್ಯಕ್ರಮ ನಡೆಯಬೇಕು ಎಂಬ ಅಭಿಲಾಷೆ‌ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಮಸಾಲ ಜಯರಾಮ್ ಮಾತನಾಡಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಜನತೆಗೆ ಅನುಕೂಲ ಆಗುವಂತಹ ನಿಟ್ಟಿನಲ್ಲಿ ಕಾರ್ಯಕ್ರಮ ಕೈಗೊಂಡಿದ್ದೇವೆ. ಮಾಯಸಂದ್ರ ಹೋಬಳಿಯಲ್ಲಿ ರೈತರು ಸಂತೃಪ್ತಿಯಾಗಿದ್ದು, ಬೋರ್ವೆಲ್ ಲಾರಿಗಳು ಕಾಣೆಯಾಗಿವೆ. ಹೇಮಾವತಿ ನೀರಿನ ಹರಿವಿನಿಂದ ಸಾಧ್ಯವಾದ ಈ ಕಾರ್ಯಕ್ಕೆ ಮುಖ್ಯಮಂತ್ರಿಗಳಿಗೆ ಸಚಿವರಿಗೆ ಕೃತಜ್ಞತೆ ತಿಳಿಸಿದರು. ಮಾಯಸಂದ್ರ ಹೋಬಳಿಯಲ್ಲಿ ಶೀಘ್ರವೇ ಶೆಟ್ಟಿಗೊಂಡನಹಳ್ಳಿ, ಸೀಗೆಹಳ್ಳಿ, ಹೋಬಳಿಯಾದ್ಯಂತ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಸದರಾದ ಜಿ‌.ಎಸ್. ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಡಾ.ರಾಜೇಶ್ ಗೌಡ, ಮಾಜಿ ಶಾಸಕ ನಂಜೇಗೌಡ, ಗ್ರಾಪಂ ಅಧ್ಯಕ್ಷೆ ಮಂಗಳ ಗೌರಮ್ಮ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಸಿಇಓ ವಿದ್ಯಾಕುಮಾರಿ, ಎಸ್.ಪಿ. ರಾಹುಲ್ ಕುಮಾರ್. ತಹಶೀಲ್ದಾರ್ ಗಳಾದ ನಯೀಂಉನ್ನೀಸಾ, ಆರತಿ, ಶ್ರೀಮತಿ ಪರಿಮಳ ಜಗ್ಗೇಶ್ ಮುಖಂಡರಾದ ಚಿದಾನಂದ್, ಸೋಮಶೇಖರ್, ವೆಂಕಟರಾಮಯ್ಯ, ವಿಶ್ವನಾಥ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ವಿವಿಧ ಗಣ್ಯರು, ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ -ಸಚಿನ್ ಮಾಯಸಂದ್ರ.

Right Click Disabled