ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಖಾಸಗಿ ವಲಯ, ಸ್ವಯಂ ಸೇವ ಸಂಘಟನೆಗಳ ಸಹಕಾರ ಮುಖ್ಯ- ಶ್ರೀಮತಿ ಭಾಗ್ಯವತಿ ಅಮರೇಶ್

Spread the love

ಬೆಂಗಳೂರು:
ಬಿಬಿಎಂಪಿ ಮತ್ತು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಖಾಸಗಿ ವಲಯ, ಸ್ವಯಂ ಸೇವಾ ಸಂಘಟನೆಗಳ ಸಹಕಾರ ಮುಖ್ಯ ಎಂದು ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾದ
ಶ್ರೀಮತಿ ಭಾಗ್ಯವತಿ ಅಮರೇಶ್ ಹೇಳಿದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹೊಂಬೇಗೌಡನಗರ ವಾರ್ಡ್ ನಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಪಾಠ ಶಾಲೆಯ ನೂರಾರು ಮಕ್ಕಳಿಗೆ ಊಟದ ತಟ್ಟೆ, ಲೋಟ ಮತ್ತು ಕುಡಿಯುವ ನೀರು ಸಂಗ್ರಹಿಸಲು ಕ್ಯಾನ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಬಿಬಿಎಂಪಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಖಾಸಗಿ ವಲಯ ಮತ್ತು ಸ್ವಯಂ ಸೇವಾ ಸಂಘಟನೆಗಳು ಮುಂದಾಗಬೇಕು ಮತ್ತು ಕೊಡುಗೆ ನೀಡಬೇಕು. ಆಗ ಶಿಕ್ಷಣದ ಗುಣಮಟ್ಟ ಮತ್ತು ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸೌಲಭ್ಯ ಸಿಗುತ್ತದೆ.
ಶ್ರೀಮಂತ ಕುಟುಂಬದ ಮಕ್ಕಳಿಗೆ ಹೈಟೆಕ್ ಶಾಲೆ, ಪುಸ್ತಕ ಉತ್ತಮ ಸೌಲಭ್ಯ ದೊರಕುತ್ತದೆ. ಅದರೆ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಮತ್ತು ಬಡತನ, ಸ್ಲಂ ಪ್ರದೇಶದ ಮಕ್ಕಳಿಗೆ ಇಂತಹ ಸೌಲಭ್ಯಗಳು ಲಭಿಸಬೇಕು.
ಅವರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂದು ಬಿಬಿಎಂಪಿ ಮತ್ತು ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಸ್ಲಂ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.
ಸ್ಲಂ ಸಂಸ್ಥೆ ಮತ್ತು ಗ್ಲೋಬಲ್ ಸೇವಾ ಟ್ರಸ್ಟ್ ಸಾಮಾಜಿಕ ಸೇವಾ ಸಂಘಟನೆ ಸಹಯೋಗದಲ್ಲಿ ಸ್ಲಂ ಪ್ರದೇಶದ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಾಲೆಯ ಶುಲ್ಕ ಭರಿಸುವುದು ಮತ್ತು ವಿದ್ಯಾರ್ಥಿ ವೇತನ, ಉಚಿತವಾಗಿ ಕಂಪ್ಯೂಟರ್ ಶಿಕ್ಷಣ, ಈಗಾಗಲೇ 20ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಗಿದೆ. ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ದಿ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇಂದು ಶಾಲೆಯ ಮಕ್ಕಳಿಗೆ ಊಟದ ತಟ್ಟೆ,ಲೋಟ ಮತ್ತು ಕುಡಿಯುವ ನೀರಿಗಾಗಿ 10ಕ್ಯಾನ್ ನೀಡಲಾಗಿದೆ. ಪ್ರತಿ ದಿನ 10ಕ್ಯಾನ್ ನೀರನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಮರೇಶ್ (ಅಂಬರೀಶ್), ರಾಜು, ಮಹೇಶ್, ಶಾಲಾ ಪ್ರಾಂಶುಪಾಲರು, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Right Click Disabled