ಮಾಯಸಂದ್ರದಲ್ಲಿ ಆಯೋಜಿಸಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮದ ಯಶಸ್ವಿಗಾಗಿ- ಶಾಸಕ ಮಸಾಲ ಜಯರಾಮ್ ಮನವಿ.

Spread the love

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ತುಮಕೂರು ಜಿಲ್ಲಾಡಳಿತ ವತಿಯಿಂದ ಮತ್ತು ತುರುವೇಕೆರೆ ತಾಲೂಕು ಆಡಳಿತ ಸಹಯೋಗದೊಂದಿಗೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಸಚಿವರ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲು ಅಂತಿಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಕಂದಾಯ ಇಲಾಖೆ ಸಚಿವರಾದ ಆರ್. ಅಶೋಕ್ ಅವರು ಮತ್ತು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಗ್ರಾಮದ ಜಗ್ಗೇಶ್ ರವರು, ಉಸ್ತುವಾರಿ ಸಚಿವರು, ಸಂಸದರು, ಹಲವು ಶಾಸಕರು ಆಗಮಿಸುತ್ತಿದ್ದು, ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ 18 ರ ಶನಿವಾರ ರಾತ್ರಿ ಗ್ರಾಮದಲ್ಲಿ ತಂಗುತ್ತಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ಸಚಿವರು ಆಗಮಿಸುತ್ತಿದ್ದು, ಮೊದಲಿಗೆ ಗ್ರಾಮದ ಗ್ರಾಮದೇವತೆಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಬಳಿಕ ಟ್ರ್ಯಾಕ್ಟರ್- ಎತ್ತಿನಗಾಡಿಯಲ್ಲಿ ಮೆರವಣಿಗೆಯ ಮೂಲಕ ಭವ್ಯ ಸ್ವಾಗತದೊಂದಿಗೆ ಶಾಲಾ ಆವರಣಕ್ಕೆ ಬರಮಾಡಿಕೊಳ್ಳುತ್ತಿದ್ದು, ಆರೋಗ್ಯ ಶಿಬಿರದ ಉದ್ಘಾಟನೆ ಮತ್ತು ವಿವಿಧ ಮಳಿಗೆಗಳ ವೀಕ್ಷಣೆಯನ್ನು ಮುಗಿಸಿ, ಮಧ್ಯಾಹ್ನ 12ಕ್ಕೆ ವೇದಿಕೆಗೆ ಆಗಮಿಸಲಿದ್ದಾರೆ.
ವೇದಿಕೆ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ನಾಡಗೀತೆ ಮತ್ತು ಮಸಾಲ ಜಯರಾಮ್ ರವರು ಪ್ರಾಸ್ತವಿಕ ನುಡಿಗಳನ್ನಾಡಲಿದ್ದಾರೆ. ನಂತರ ಕಾರ್ಯಕ್ರಮದ ಉದ್ಘಾಟನೆ ಮತ್ತು ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಿದ್ದು, ಸುಮಾರು ಹತ್ತು ಸಾವಿರ ಜನರು ಸೇರುವ ನಿರೀಕ್ಷೆಯಿದೆ, ಮಧ್ಯಾಹ್ನದ ಭೋಜನ ವಿರಾಮದ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಸಂಜೆ 6ರ ನಂತರ ಅನಡಗು ಗ್ರಾಮದಲ್ಲಿ ಅರಳಿಕಟ್ಟೆಯ ಆವರಣದಲ್ಲಿ ಗ್ರಾಮಸಭೆ ಹಾಗೂ 7 ಗಂಟೆಗೆ ಸರ್ಕಾರಿ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 9‌ಗಂಟೆಗೆ ಆಶ್ರಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ರಾತ್ರಿಯ ಊಟ ಸವಿದು ವಿಶ್ರಾಂತಿ ಪಡೆಯಲಿದ್ದಾರೆ.
ಮರುದಿನ ಭಾನುವಾರ ಬೆಳಗ್ಗೆ 7 ಗಂಟೆಗೆ ಗ್ರಾಮ ವಿಹಾರ ಮತ್ತು ಗ್ರಾಮಸ್ಥರ ಜೊತೆ ಸಂವಾದದಲ್ಲಿ ಪಾಲ್ಗೊಂಡು, ಬೆಳಗ್ಗಿನ ಉಪಹಾರವನ್ನು ಗ್ರಾಮದ ದಲಿತರ ಮನೆಯಲ್ಲಿ ಸವಿದು 11 ಗಂಟೆಯ ನಂತರ ನಿರ್ಗಮನ ಗೊಳ್ಳಲ್ಲಿದ್ದಾರೆ ಹಾಗೂ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಹಲವಾರು ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ನಿಯಮಾನುಸಾರ ಶಿಷ್ಟಾಚಾರವನ್ನು ಅನುಸರಿಸಲು ಜಿಲ್ಲಾಧಿಕಾರಿಗಳು ಸಹ ನಿರ್ದೇಶಿಸಿದ್ದಾರೆ.
ತಾಲೂಕಿನ ಸಮಸ್ತ ಜನತೆಯು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರೋಗ್ಯ ಶಿಬಿರದ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಲು ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಾಸಕ ಮಸಾಲೆ ಜಯರಾಮ್ ರವರು ತಾಲೂಕು ಆಡಳಿತ ಪರವಾಗಿ ಮನವಿ ಮಾಡಿದ್ದಾರೆ ಮತ್ತು ಜಿಲ್ಲೆಯಲ್ಲಿ ಪ್ರಥಮವಾಗಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು ಶ್ರಮಿಸುತ್ತಿದ್ದಾರೆ. ಗುಬ್ಬಿ ತಾಲೂಕಿನ ಸಿ.ಎಸ್.ಪುರ ಕಡಬ ಹೋಬಳಿಯ ಫಲಾನುಭವಿಗಳೂ ಸಹಾ ಆಗಮಿಸುತ್ತಿದ್ದಾರೆ. ಕ್ಷೇತ್ರದ ಸರ್ವರು ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಲು ಕೋರಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಯೀಂ ಉನ್ನೀಸಾ, ಆರತಿ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಮುಖಂಡರಾದ ವಿ.ಟಿ. ವೆಂಕಟರಾಮಯ್ಯ. ಅಜಿತ್, ಪಂಚಾಕ್ಷರಯ್ಯ, ಪಾರ್ಥಸಾರಥಿ, ಪ್ರಕಾಶ್, ಯಶೋಧರ ಮುಂತಾದ ಗ್ರಾ.ಪಂ.ಸದಸ್ಯರು. ಕಾಳಂಜಿಹಳ್ಳಿ ಸೋಮಶೇಖರ್, ಸಿದ್ದಲಿಂಗಪ್ಪ. ಸೇರಿದಂತೆ ಮುಂತಾದವರು
ಉಪಸ್ಥಿತರಿದ್ದರು.

ವರದಿ-ಸಚಿನ್ ಮಾಯಸಂದ್ರ.

Right Click Disabled