ನಾಳೆಯಿಂದ ಮೂರು ದಿನಗಳ ಕಾಲ “ಪ್ರಶಿಕ್ಷಣ ವರ್ಗ” – ಶ್ರೀಮತಿ ಗೀತಾ ವಿವೇಕಾನಂದ

ಚಾಮರಾಜನಗರ: ನಾಳೆಯಿಂದ ಮೂರುದಿನಗಳ ಕಾಲ ಚಾಮರಾಜನಗರದ ನಿಜಗುಣ ರೆಸಾರ್ಟ್ ನಲ್ಲಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ “ಪ್ರಶಿಕ್ಷಣ” ನಡೆಯಲಿದೆ ಎಂದು ಮಹಿಳಾ ಮೋರ್ಚಾ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀಮತಿ ಗೀತಾ ವಿವೇಕಾನಂದ ರವರು ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ರವರು “ಪ್ರಶಿಕ್ಷಣ” ವರ್ಗವನ್ನು ಉದ್ಘಾಟಿಸಲಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಹಾಲಪ್ಪ ಆಚಾರ್, ಶಾಸಕರಾದ ಮಹೇಶ್, ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷರು, ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
“ಪ್ರಶಿಕ್ಷಣ” ವರ್ಗದ ಬಗ್ಗೆ ಮಾತನಾಡಿದ ಶ್ರೀಮತಿ ಗೀತಾ ವಿವೇಕಾನಂದ ರವರು ಬಿಜೆಪಿ ಪಕ್ಷದ ಬಗ್ಗೆ ಮತ್ತು ಸಮಾಜದ ಬೆಳವಣಿಗೆಗೆ ಪಕ್ಷದ ವತಿಯಿಂದ ಮಾಡಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಪದಾಧಿಕಾರಿಗಳಿಗೆ ತರಬೇತಿ ನೀಡುವುದು. ಪಕ್ಷ ಸಂಘಟನೆಯ ಬಗ್ಗೆಯೂ ಈ ಪ್ರಶಿಕ್ಷಣ ವರ್ಗದಲ್ಲಿ ತಿಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ
ಚಾಮರಾಜನಗರ ಜಿಲ್ಲಾ ಅಧ್ಯಕ್ಷರಾದ ಸುಂದರ ರಾಜ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಸುವರ್ಣ, ಉಪಾಧ್ಯಕ್ಷರಾದ ಕು.ಲಲಿತಾ ಅನಪೂರ್, ಮಾಧ್ಯಮ ಸಂಚಾಲಕರಾದ ರಜನಿ.ವಿ.ಪೈ, ಕಾರ್ಯಕಾರಣಿ ಸಮಿತಿ ಸದಸ್ಯರಾದ ಶ್ರೀಮತಿ ಶೋಭಾ ನಗರಿ, ನಿಜಗುಣ ರೆಸಾರ್ಟ್ ನ ಮಾಲೀಕರಾದ ನಿಜಗುಣ ರಾಜು ಉಪಸ್ಥಿತರಿದ್ದರು.