ಸಂಸ್ಕಾರ, ಸಂಸ್ಕೃತಿಯ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸಬೇಕು- ನಾಡೋಜ ಡಾ.ಮಹೇಶ್ ಜೋಷಿ

Spread the love


ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ 2600 ಪುಟಗಳ ಕನ್ನಡ ಕಾವ್ಯಗಳ “ಗೆಜ್ಜೆನಾದ” ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನಂತರ ಗೆಜ್ಜೆನಾದ ಗ್ರಂಥವನ್ನು 2 ಸಾವಿರ ಹಣ ಕೊಟ್ಟು ಖರೀದಿ ಮಾಡಿದ ಮಹೇಶ್ ಜೋಷಿ ಪ್ರತಿ ಒಬ್ಬ ಕನ್ನಡಿಗರ ಮನೆಯಲ್ಲೂ ಇರಬೇಕಾದಂಥ ಇಂತಹ ಕೃತಿಯನ್ನು ರಚಿಸಿದ ಪ್ರೊ. ಸೂರ್ಯನಾರಾಯಣ ಸ್ವಾಮಿ ಹಾಗೂ ಗೋವಿಂದೇಗೌಡರನ್ನು ಅಭಿನಂದಿಸಿದರು. ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಮಾತನಾಡಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡುವುದಾಗಿ ಭರವಸೆ ನೀಡಿದರು. ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿ ನಾಡೋಜ ಡಾ ವೂಡೇ ಪಿ.ಕೃಷ್ಣ ಮಾತನಾಡಿ ಅತ್ಯುತ್ತಮ ಕೃತಿಗಳಲ್ಲಿ ಒಂದಾದ ಗೆಜ್ಜೆನಾದ ಎಲ್ಲರೂ ಓದಬೇಕು ಎಂದು ಹೇಳಿದರು. ಗ್ರಂಥ ಸಂಗ್ರಹಕಾರರಾದ ಹೆಚ್.ಎಸ್. ಗೋವಿಂದೇಗೌಡ ಮಾತನಾಡಿ ಗ್ರಂಥ ಸಂಗ್ರಹಣೆ ಹಾಗೂ ರಂಗಗೀತೆ ಕುರಿತಂತೆ ವಿವರಿಸಿದರು.
ಪ್ರೊ. ಎ.ವಿ. ಸೂರ್ಯನಾರಾಯಣ ಸ್ವಾಮಿ ಪ್ರಾಸಬದ್ಧವಾಗಿ ಮಾತನಾಡಿ ಕನ್ನಡ ನಾಡು ನುಡಿಯ ಸೇವೆ ಕುರಿತಂತೆ ಗಮನ ಸೆಳೆದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮಾತನಾಡಿ ಕನ್ನಡ ಬಳಕೆಯ ಜತೆಗೆ ಪ್ರತಿನಿತ್ಯ ಕನ್ನಡದ ಪತ್ರಿಕೆಯನ್ನು ಕೊಂಡು ಓದುವಂತೆ ಮನವಿ ಮಾಡಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಎಸ್.ಸುಧೀಂದ್ರ ಕುಮಾರ್ ಮಾತನಾಡಿ ಗ್ರಂಥ ಲೋಕಾರ್ಪಣೆಯ ಅತ್ಯುತ್ತಮ ಕಾರ್ಯದ ಜೊತೆಗೆ ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಕನ್ನಡ ಭವನಕ್ಕೆ ಯಶವಂತಪುರ ಕ್ಷೇತ್ರದಲ್ಲಿ 4 ಜಾಗಗಳನ್ನು ಗುರುತಿಸಿ ಸಚಿವರಿಗೆ ಮನವಿ ನೀಡಿದರು. ಸಮಾರಂಭದಲ್ಲಿ ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ,ಜಯರಾಮ್, ಪ್ರೊ, ಮಂಜುನಾಥ್, ಹಂಸಜ್ಯೋತಿ ಟ್ರಸ್ಟಿನ ಅಧ್ಯಕ್ಷ ಮುರಳೀಧರ್,
ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಆಶಾ ಹಾಗೂ ಶೋಭಾ,
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎ.ಎನ್. ಶಿವಸ್ವಾಮಿ, ಪದಾಧಿಕಾರಿಗಳಾದ ವಿ.ವಿ. ಸತ್ಯನಾರಾಯಣ, ಪಾರಿಜಾತ, ಶಿವರಾಂ, ತಮ್ಮಯ್ಯ, ಕೃಷ್ಣಮೂರ್ತಿ, ಚಂದ್ರಹಾಸ ಮುಂತಾದವರು ಉಪಸ್ಥಿತರಿದ್ದರು. ಯಶವಂತಪುರ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮಾರಂಭ ಹಂಸಜ್ಯೋತಿ ಟ್ರಸ್ಟ್ ಹಾಗೂ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

Right Click Disabled