ನಾಲ್ಕು ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ನಾಲ್ಕು ಲಕ್ಷ ಹಾನಿ
ನಾಲ್ಕು ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ನಾಲ್ಕು ಲಕ್ಷ ಹಾನಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹೈವೇ ಸರ್ಕಲ್ ಬಳಿ ಇಂದು ನಸುಕಿನಿ ಜಾವ ಅಗ್ನಿ ದುರಂತ ಸಂಭವಿಸಿದ್ದು ಅಗ್ನಿ ದುರಂತದಲ್ಲಿ ನಾಲ್ಕು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
ಬೆಳಗಿನ ಜಾವ ಅಂಗಡಿ ಮುಚ್ಚಿರುವುದರಿಂದ ಸ್ಥಳದಲ್ಲಿ ಯಾರು ಇರಲಿಲ್ಲ.ವಿಷಯ ತಿಳಿದ ಅಗ್ನಿಶಾಮಕ ದಳದವರು.ಬೆಂಕಿ ಅಕ್ಕ ಪಕ್ಕ ಹರಡದಂತೆ ಯಾವುದೆ ಹೆಚ್ಚಿನ ದುರಂತ ಆಗದಂತೆ ಬೆಂಕ್ಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಗಡಿ ಮಾಲಿಕರಾದ ಗಣಪತಿ. ಸೋಮಯ್ಯ.ನಾಯ್ಕ,ಅವರ ಹೂವಿನ ಅಂಗಡಿ, ಗೋವಿಂದ ಶೆಟ್ಟಿ, ಅವರ ತರಕಾರಿ ಅಂಗಡಿ, ಮಹೇಶ ನಾಗಪ್ಪ ನಾಯ್ಕ,ಅವರ ಹಣ್ಣಿನ ಅಂಗಡಿ. ಸಂಪೂರ್ಣ ಸುಟ್ಟು ಹೋಗಿದೆ.ವ್ಯಾಪಾರಿಗಳು ತ್ರೀವ ನಷ್ಟವನ್ನು ಅನುಭವಿಸುವಂತಾಗಿದೆ.