ತುಳುನಾಡಿನ ಅದ್ಭುತ ಇತಿಹಾಸ

Spread the love

ಕರಾವಳಿ ಪ್ರಾಂತ್ಯದಲ್ಲಿ ಕೋಲದ ಅಥವಾ ನೇಮದ ದಿನದಂದು ಊರಿನ ಭಕ್ತರೆಲ್ಲಾ ಒಟ್ಟುಗೂಡುತ್ತಾರೆ. ವೇದವು ತುಳುನಾಡಿನ ಜನರ ಜೀವನದ ಒಂದು ಭಾಗವಾಗಿದೆ. ೧೨೦೦ ರ‍್ಷಗಳ ಹಿಂದೆ ಕೊಲ್ಲೂರಿನಲ್ಲಿ ಶ್ರೀ ಮೂಕಾಂಬಿಕೆ ವಿಗ್ರಹವನ್ನು ಸ್ಥಾಪನೆ ಮಾಡಿದ ಶಂಕರಾಚರ‍್ಯರು ಅದ್ವೆತ ಸಿದ್ಧಾಂತದ ಸಾರವನ್ನು ತುಳುನಾಡಿನಲ್ಲಿ ಸಾರಿದ್ದಾರೆ. ೧೩ನೇ ಶತಮಾನದಲ್ಲಿ ದ್ವೆತ ಸಿದ್ಧಾಂತವನ್ನು ಪ್ರತಿಪಾದಿಸಿದ ಮಧ್ವಾಚರ‍್ಯರು ಸಹ ತುಳು ಜನಾಂಗದವರು. ಇವರು ಶ್ರೀಕೃಷ್ಣವ್ಮಠ ಹಾಗೂ ಅಷ್ಠಮಠಗಳನ್ನು ಉಡುಪಿಯಲ್ಲಿ ಸ್ಥಾಪಿಸಿದ್ದಾರೆ. ಇದು ತುಳುಜನರ ಆರಾಧ್ಯ ದೈವವಾಗಿದೆ.


ತುಳುನಾಡು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಸುಗ್ಗಿಯ ಕಾಲದಲ್ಲಿ ಇಲ್ಲಿ ಕೊಳಕೆಯನ್ನು ಬೆಳೆಯುತ್ತಾರೆ. ಇದನ್ನು ಕಂಡಕೋರಿ ಎನ್ನುತ್ತಾರೆ. ಕೃಷಿ ಮುಕ್ತಾಯದ ಹಂತದಲ್ಲಿ ಗದ್ದೆಗಳಿಗೆ ನೀರನ್ನು ತುಂಬಿಸಲಾಗುವುದು. ಗದ್ದೆಯಲ್ಲಿ ನಡೆಯಲು ಗದ್ದೆಯ ಮಧ್ಯೆ ಚಿಕ್ಕ ದಾರಿಯನ್ನು ಮಾಡಿರುತ್ತಾರೆ. ಇದನ್ನು ಕಂಡಪುಣಿ ಎನ್ನುತ್ತಾರೆ. ಇದನ್ನು ಜೇಡಿಮಣ್ಣಿನಿಂದ ಮಾಡಲಾಗಿಗೆ.
ಒಂದು ವಿಶೇಷವಾದ ಧ್ವಜಕ್ಕೆ “ಪುಕ್ಕರೆ” ಎಂದು ಕರೆಯುತ್ತಾರೆ. ಪುಕ್ಕರೆಯನ್ನು ಹೂವಿನಿಂದ ಅಲಂಕರಿಸಿ ಭತ್ತದ ಗದ್ದೆಯ ಮಧ್ಯೆ ನಿಲ್ಲಿಸಲಾಗುವುದು. ಹಾಗೂ ನಾಗಕಂಬಿಲವನ್ನು ಹತ್ತಿರದ ನಾಗಬನದಲ್ಲಿ ಆಚರಿಸಲಾಗುವುದು.


ತುಳುನಾಡಿನಲ್ಲಿ ಅನೇಕ ಸಂಸ್ಸೃತಿಯನ್ನು ನಾವು ಕಾಣಬಹುದು. ಇಲ್ಲಿ ಅನೇಕ ಹಬ್ಬಗಳನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ.ದೀಪಾವಳಿಯನ್ನು ಕರ‍್ತಿಕ ಮಾಸದ ಶುಕ್ಲ ಪಾಢ್ಯಮಿಯಂದು ಆಚರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಆಚರಿಸಲಾಗುವುದು. ದೀಪಾವಳಿಯ ರಾತ್ರಿಯಂದು ರಾಜ ಬಲೀಂಧ್ರನು ಗದ್ದೆಗೆ ಭೇಟಿ ನೀಡುತ್ತಾನೆ ಎಂಬ ನಂಬಿಕೆ ತುಳು ಜನರಿಗಿದೆ. ಆದ್ದರಿಂದ ಅವರು ಆ ದಿನ ಗದ್ದೆಯನ್ನು ಅಲಂಕರಿಸುತ್ತಾರೆ ಹಾಗೂ ಮನೆಯ ತುಳಸಿಕಟ್ಟೆಯ ಎದುರು ಹಾಲೀ ಮರದ ಕೊಂಬೆಯನ್ನು ನೆಟ್ಟು ಅದಕ್ಕೆ ಗೊಂಡೆ ಹೂ, ಕೇಪುಲ, ಹಾಗೂ ಪಾದೆ ಪು ಹೂಗಳಿಂದ ಶೃಂಗರಿಸುತ್ತಾರೆ. ಆ ರಾತ್ರಿಯಂದು ಮನೆಯವರೆಲ್ಲಾ ಸೇರಿ ಪೂಜೆ ಮಾಡುತ್ತಾರೆ ಹಾಗೂ ಬಲೀಂಧ್ರ ಬಲೀಂಧ್ರ ಹರಿಯೋ ಹರಿಯೋ ಎಂದು ಅಕ್ಷತೆಯನ್ನು ಹಾಕುತ್ತಾರೆ.


ದೀಪಾವಳಿಯ ಗೋಪ್ರಜೆ ದಿನದಂದು ಗೋವುಗಳಿಗೆ ಅರಿಶಿಣ ಹಾಗೂ ಕುಂಕುಮವನ್ನು ಹಚ್ಚುತ್ತಾರೆ ಹಾಗೂ ಹೂವಿನಿಂದ ಅಲಂಕಾರ ಮಾಡುತ್ತಾರೆ. ಅವುಗಳಿಗೆ ತಿನ್ನಲು ಬಾಳೆಹಣ್ಣು ಹಾಗೂ ದೋಸೆಗಳನ್ನು ನೀಡುತ್ತಾರೆ.
ಕಾವೇರಿ ನದಿ ತುಳುನಾಡಿನ ಜನರು ನಂಬುವ ಪವಿತ್ರ ನದಿಗಳಲ್ಲಿ ಒಂದಾಗಿದೆ. ಇಲ್ಲಿ ಕಾವೇರಿ ಸಂಕ್ರಾಂತಿಯನ್ನು ಆಚರಿಸುತ್ತಾರೆ.
ಇದಲ್ಲದೆ ತುಳು ಜನರು ಇಲ್ಲುಜಂಜಾವಲೆ ಹಬ್ಬವನ್ನು ಆಚರಿಸುತ್ತಾರೆ. ಇಲ್ಲುಜಂಜಾವಲೆ ಎಂದರೆ ಮನೆ ತುಂಬಿಸಿಕೊಳ್ಳುವುದು ಎಂರ‍್ಥ. ಸುಗ್ಗಿಯ ದಿನದಂದು ಮರದ ತುಂಡಿಗೆ ಭತ್ತದ ತೆನೆಯನ್ನು ಕಟ್ಟಿ ಇಡೀ ಮನೆಯನ್ನು ಶೃಂಗರಿಸುತ್ತಾರೆ.
ಹೊಸ ಭತ್ತವನ್ನು “ಕುದ್ವಾರ್” ಎಂದು ಕರೆಯುತ್ತಾರೆ. ಹೊಸ ಭತ್ತದಿಂದ ಅಡುಗೆಯನ್ನು ಮಾಡಿ ಹಬ್ಬವನ್ನು ಮಾಡುವುದು ತುಳು ಜನರ ಸಂಪ್ರದಾಯವಾಗಿದೆ.


ತುಳು ನಾಡಿನ ಜನರು ಎಪ್ರಿಲ್ ತಿಂಗಳಲ್ಲಿ “ಕೆದಸ” ಹಬ್ಬವನ್ನು ಆಚರಿಸುತ್ತಾರೆ. ಇದು ಭೂದೇವಿಯನ್ನು ಪವಿತ್ರಗೊಳಿಸುವ ಸಂಪ್ರದಾಯವಾಗಿದೆ. ಇದು ರೈತ ಸಮುದಾಯದವರಿಗೆ ಆಶರ‍್ವಾದ ನೀಡುವಂತೆ ಪ್ರರ‍್ಥನೆ ಮಾಡುವ ಸಂಪ್ರದಾಯವಾಗಿದೆ.
ಸೌರಹೊಸರ‍್ಷದಂದು ಅನೇಕ ಹಣ್ಣು ತರಕಾರಿಗಳಾದ ಗೋಡಂಬಿ, ಹಲಸಿನಹಣ್ಣು, ಮಾವಿನಹಣ್ಣು, ಬಾಳೆಹಣ್ಣು, ಗುಂಬಳಕಾಯಿ, ಮುಳ್ಳುಸೌತೆಕಾಯಿಗಳನ್ನು ಚಾವಡಿಯಲ್ಲಿಟ್ಟು ಅದರ ಜೊತೆ ಕನ್ನಡಿ ಹಾಗೂ ಕಾಲುದೀಪವನ್ನು ಹಾಗೂ ಅರಶಿಣ ಮತ್ತು ಕುಂಕುಮವನ್ನು ಮಧ್ಯೆ ಇಟ್ಟಿರುತ್ತಾರೆ. ಇದನ್ನು ಬಿಸುಕನಿ ಎನ್ನುತ್ತಾರೆ. ಈ ದಿನದಂದು ತುಳುನಾಡಿನವರು ಬೆಳಿಗ್ಗೆ ಎದ್ದ ತಕ್ಷಣ ಎಣ್ಣೆ ಸ್ನಾನ ಮಾಡಿ ಹೊಸಬಟ್ಟೆಯನ್ನು ತೊಡುತ್ತಾರೆ. ನಂತರ ಬಿಸುಕನಿಯನ್ನು ನೋಡುತ್ತಾರೆ. ಕಿರಿಯರು ಹಿರಿಯರ ಆಶರ‍್ವಾದವನ್ನು ಪಡೆಯುತ್ತಾರೆ. ನಂತರ ದೇವಸ್ಥಾನಕ್ಕೆ ತೆರಳುತ್ತಾರೆ.


ಈ ಹಿಂದೆ ಹಿಡುವಳಿದಾರರು ತನ್ನ ಜಮೀನುದಾರರಿಗೆ ಅನೇಕ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿತ್ತು. ಆದರೆ ಈಗ ಆ ಸಂಪ್ರದಾಯವು ತುಳುನಾಡಲ್ಲಿ ನಶಿಸಿಹೋಗಿದೆ.
ಹಿಂದಿನಿಂದ ತುಳುನಾಡಲ್ಲಿ ವಿಭಿನ್ನ ರೀತಿಯ ಜಾನಪದ ನೃತ್ಯಗಳನ್ನು ನಾವು ಕಾಣಬಹುದು. ಇಲ್ಲಿ ದೈವವನ್ನು ಉದ್ದೇಶಿಸಿ ಮಾಡುವ ನೃತ್ಯವು ಬಹಳ ವಿಭಿನ್ನ ಶೈಲಿಯದ್ದಾಗಿದೆ.


ಆಟಿಕಳೆಂಜ ನೃತ್ಯವನ್ನು ಲಲ್ಕಿ ಸಮುದಾಯದವರು ಆಟಿ ತಿನಗಳಲ್ಲಿ ಅಂದರೆ ಜೂನ್ ಜುಲೈ ತಿಂಗಳಲ್ಲಿ ಮಾಡುತ್ತಾರೆ. ಈ ನೃತ್ಯದ ಉಡುಗೆ ತೊಡುಗೆಗಳು ವಿಭಿನ್ನ ರೀತಿಯದ್ದಾಗಿದೆ. ಮಳೆಗಾಲದಿಂದ ಬೇಸತ್ತ ಜನರ ಮನೋರಂಜನೆಗಾಗಿ ಈ ನೃತ್ಯವನ್ನು ಮಾಡುತ್ತಾರೆ.


ಕಳೆಂಜಾ ಎಂಬ ಪದವು “ಕಳೆ”ಮತ್ತು “ಅಂಜೆವು” ಎಂಬ ಎರಡು ಪದ ಸೇರಿ ಆಗಿದೆ. “ಕಳೆ” ಎಂದರೆ “ಹೋಗಲಾಡಿಸು” ಹಾಗೂ “ಅಂಜೇವು” ಎಂದರೆ “ವ್ಯಕ್ತಿ” ಎಂರ‍್ಥ. ಹೀಗಾಗಿ ಕಷ್ಟಗಳನ್ನು ಹೋಗಲಾಡಿಸುವ ವ್ಯಕ್ತಿ ಬರುತ್ತಾನೆ ಎಂಬುದು ತುಳುನಾಡಿನ ಜನರ ನಂಬಿಕೆಯಾಗಿದೆ. ತುಳು ಮತ್ತು ಮಲಯಾಳಂ ಸಂಪ್ರದಾಯ ಒಂದಾದ ಪ್ರದೇಶದಲ್ಲಿ ಪೇಡ ಮತ್ತು ರ‍್ದ ಎನ್ನುವಂಥಹ ನೃತ್ಯಗಳನ್ನು ನೋಡಬಹುದು.


ನಾಟಿ ಔಷಧವು ತುಳುನಾಡಿನಲ್ಲಿ ಪ್ರಮುಖವಾದದ್ದು ಅನೇಕ ವಿಷಕಾರಿ ಹಾವಿನ ಕಡಿತವನ್ನು ಗುಣಪಡಿಸಲು ತುಳುನಾಡಿನಲ್ಲಿ ಹಲವು ಔಷಧ ಮೂಲಿಕೆ ಹಾಗೂ ತುಳು ಮಂತ್ರವನ್ನು ಉಪಯೋಗಿಸುತ್ತಾರೆ.
ವಿವಿಧ ರ‍್ಮದವರು ಹಾಗೂ ವಿವಿಧ ಸಮುದಾಯದವರು ಹಲವು ನಂಬಿಕೆಗಳೊಂದಿಗೆ ತುಳುನಾಡಿನಲ್ಲಿ ವಾಸಿಸುತ್ತಾರೆ. ದೇವಸ್ಥಾನ ಹಾಗೂ ಮೂಲಸ್ಥಾನಗಳು ಹಿಂದುಗಳ ಸಂಪ್ರದಾಯವನ್ನು ಎತ್ತಿಹಿಡಿದರೆ ರ‍್ಚ್ ಹಾಗೂ ರ‍್ಗಾಗಳು ಕ್ರಿಸ್ಚಿಯನ್ ಮತ್ತು ಮುಸ್ಲೀಮರ ಸಂಪ್ರದಾಯವನ್ನು ಎತ್ತಿಹಿಡಿಯುತ್ತದೆ. ಇದರೊಂದಿಗೆ ಅನೇಕ ಬಸದಿಗಳು ಜೈನರ ಸಂಪ್ರದಾಯದ ಪ್ರತೀಕವಾಗಿದೆ. ಇವೆಲ್ಲವೂ ಸೇರಿ ತುಳುನಾಡಿನ ಸಂಪ್ರದಾಯವು ಬೇರೆಲ್ಲಾ ಕಡೆಯ ವೈಭವಕ್ಕಿಂತ ವಿಭಿನ್ನವಾಗಿದೆ.

Right Click Disabled