ಮದುವಣಗಿತ್ತಿಯಂತೆ ಕಡಿಯಾಳಿ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾದ ಉಡುಪಿ

Spread the love

ಉಡುಪಿ: ದೇವಳಗಳ ನಗರಿ ಉಡುಪಿಯಲ್ಲಿ ಜೂನ್ 1 ರಿಂದ ಜೂನ್ 10ರ ತನಕ ನಡೆಯುವ ಕಡಿಯಾಳಿ ಬ್ರಹ್ಮಕಲಶೋತ್ಸವಕ್ಕೆ ಉಡುಪಿ ಜಿಲ್ಲಾ ಗಡಿಗಳಾದ ಹೆಜಮಾಡಿಯಿಂದ ಬೈಂದೂರು ತನಕ, ಮಲ್ಪೆ ಸಮುದ್ರ ಕಿನಾರೆಯಿಂದ ಧರ್ಮಸ್ಥಳದ ತನಕ ಉಡುಪಿ ಜಿಲ್ಲಾದ್ಯಂತ ವಿಶಿಷ್ಟರೀತಿಯ ಕೊಡೆಗಳು, ಕೇಸರಿ ದ್ವಜಗಳು, ಸ್ವಾಗತ ಕಮಾನುಗಳು,ಪತಾಕೆಯನ್ನು ಕಟ್ಟಲಾಗಿದೆ, ಹೆಚ್ಚಿನ ಎಲ್ಲಾ ದೇವಸ್ಥಾನಗಳ ಮುಂಭಾಗದಲ್ಲಿ ಮತ್ತು ರಸ್ತೆಗಳ ವಿಭಾಜಕಗಳಲ್ಲಿ ಬ್ರಹ್ಮಕಲಶೋತ್ಸವದ ಕೊಡೆಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಈ ಕೊಡೆಗಳನ್ನು ಬ್ರಹ್ಮಕಲಶೋತ್ಸವದ ನಂತರ ಸಮಾಜದ ಬಡವರಿಗೆ ಉಚಿತವಾಗಿ ನೀಡಲಾಗುವುದು ಉಡುಪಿ ನಗರದಾದ್ಯಂತ ಶುಭ ಕೋರುವ ಬ್ಯಾನರ್ ಗಳು, ಕೇಸರಿ ಧ್ವಜ ಮತ್ತು ಕೇಸರಿ ಪತಾಕೆ ಹಾಕಲಾಗಿದೆದಿನನಿತ್ಯವೂ ರಾತ್ರಿಯಾದ ಕೂಡಲೇ ಸುಮಾರು 200 ಸಂಖ್ಯೆಯಲ್ಲಿ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನಿಸ್ವಾರ್ಥ ಸ್ವಯಂಸೇವಕರು5 ತಂಡಗಳನ್ನಾಗಿ ರಚನೆ ಮಾಡಿ ಕರಸೇವಕರು ಮುಂಜಾನೆಯ ತನಕ ಅಲ್ಲಲ್ಲಿ ಕೇಸರಿ ಚಪ್ಪರ ಗಳನ್ನು ಹೋದಿಸುತ್ತಿದ್ದಾರೆ ಕಲ್ಸಂಕ ಜಂಕ್ಷನ್ ನಿಂದ ಶಾರದಾ ಕಲ್ಯಾಣ ಮಂಟಪ ತನಕ ರಾತ್ರಿ ಬೆಳಗುವಂತೆ ವಿದ್ಯುತ್ ಅಲಂಕಾರದ ಚಪ್ಪರ ಅಳವಡಿಸಲಾಗಿದೆ.

ಉಡುಪಿಗೆ ಪ್ರವೇಶಿಸುವ ಕರಾವಳಿ ಬೈಪಾಸ್ ನಿಂದ ಮಣಿಪಾಲದ ತನಕ ರಸ್ತೆಯ ನಡುವೆ ಹಾಕಿದ ಕೇಸರಿ ಬಾವುಟವಂತೂ ಹಿಂದೆಂದೂ ಉಡುಪಿ ನಗರ ಕಂಡದ್ದಿಲ್ಲಉಡುಪಿ ನಗರದಲ್ಲಿರುವ ಕೇಸರಿ ಪತಾಕೆಗಳ ವಿಶಿಷ್ಟರೀತಿಯ ಕಮಾನುಗಳು, ದೇವಳದ ಒಳಾಂಗಣದಲ್ಲಿ ಇರುವ ಸೆಣಬಿನ ಕಮಾನುಗಳು ಬಳ್ಳಾರಿ ಹೊಸಪೇಟೆಯಿಂದ ತರಿಸಲಾಗಿದೆ. ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ದಾರಿ ಉದ್ದಕ್ಕೂ ಸಾಂಪ್ರದಾಯಿಕ ಕೊಡೆಗಳ ಚಪ್ಪರ ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿದೆ. ಒಟ್ಟಾರೆ 1500 ವರ್ಷ ಇತಿಹಾಸ ಇರುವ ದೇವಳದ ಬ್ರಹ್ಮಕಲಶೋತ್ಸವಕ್ಕೆ ಲಕ್ಷಾಂತರ ಜನ ಬರುವ ನಿರೀಕ್ಷೆ ಮಾಡಲಾಗಿದೆ.


ಪಾರ್ಕಿಂಗ್ ಸೂಚನೆ: *ದೇವಳಕ್ಕೆ ಆಗಮಿಸುವ ಎಲ್ಲಾ ದ್ವಿಚಕ್ರವಾಹನವನ್ನು ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿ ಮತ್ತು ಕಾರುಗಳನ್ನು ಎಂಜಿಎಂ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಂ ಜಿ ಎಂ ಮೈದಾನದಿಂದ ದೇವಳಕ್ಕೆ ಉಚಿತ ಎಲೆಕ್ಟ್ರಿಕ್ ರಿಕ್ಷಾ ಸೇವೆ ನಡೆಯಲಿದೆ

Right Click Disabled