ಬೆಂವಿವಿ: ರವೀಂದ್ರ ಕೆ.ವಿ. ಅವರಿಗೆ ಪಿಎಚ್.ಡಿ ಪ್ರದಾನ
ಬೆಂಗಳೂರು. ಅ.13: ಬೆಂಗಳೂರು ವಿಶ್ವವಿದ್ಯಾಲಯದ 60ನೇ ವಾರ್ಷಿಕ ಘಟಿಕೋತ್ಸವದ ಪಿಎಚ್.ಡಿ ಪದವಿ ಪ್ರದಾನ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಂಬಾಲಹಳ್ಳಿ ಗ್ರಾಮದ ನಿವಾಸಿ ವೆಂಕಟರಮಣ ಮತ್ತು ಶ್ರೀಮತಿ ಮಾರಮ್ಮ ದಂಪತಿಯ ಹಿರಿಯ ಪುತ್ರ, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ರಾಮನಗರ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ಕೆ.ವಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಈ ಹಿಂದೆ ಕನ್ನಡ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ರವೀಂದ್ರ ಕೆ.ವಿ. ಅವರು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ಬಿ. ಗಂಗಾಧರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸ್ವಾತಂತ್ರ್ಯೋತ್ತರ ಕರ್ನಾಟಕದ ಚಳುವಳಿಯ ಹಾಡುಗಳು : ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಗೌರವಾನ್ವಿತ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಡಿಆರ್ ಡಿಎಲ್ ಮಾಜಿ ನಿರ್ದೇಶಕ ಡಾ. ಪ್ರಹ್ಲಾದ ರಾಮರಾವ್, ಕುಲಪತಿ ಡಾ. ಜಯಕರ ಎಸ್.ಎಂ, ಕುಲಸಚಿವೆ ಶ್ರೀಮತಿ ಕೆ.ಟಿ ಶಾಂತಲಾ, ಡಾ.ಸಿ.ಎಸ್ ಕರಿಗಾರ್. ಕುಲಸಚಿವ (ಮೌಲ್ಯಮಾಪನ), ಡಾ.ಎಂ.ಸುನೀತಾ ವಿತ್ತಾಧಿಕಾರಿಗಳು ಪಿಎಚ್.ಡಿ ಪದವಿ ಪ್ರಧಾನ ಮಾಡಿದರು. ಇದೇ ವೇಳೆ ಬೆಂವಿವಿಯ ನಾನಾ ವಿಭಾಗಗಳ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.


