ದಿನಾಂಕ 6/9/2025 ಶನಿವಾರದಂದು ಆಟಿಸಂ ಸೊಸೈಟಿ ಆಫ್ ಉಡುಪಿ,ರೋಟರಿ ಕ್ಲಬ್ ಮಣಿಪಾಲ, ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ

Spread the love

,ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಮಣಿಪಾಲದ ಆಶ್ರಿತ್ ಕಾಲೇಜ್ ಆಫ್ ನರ್ಸಿಂಗ್, ಮತ್ತು ಮಣಿಪಾಲದ ಆರೋಗ್ಯ ವೃತ್ತಿಪರರ ಕಾಲೇಜು ಸಹಯೋಗದೊಂದಿಗೆ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಗಳ ಕುರಿತು ಕಾರ್ಯಾಗಾರವನ್ನು ಉಡುಪಿಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ ನಡೆಸಲಾಯಿತು. ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂತಹ ಜಾಗ್ರತಿ ಕಾರ್ಯಕ್ರಮಗಳ ಅವಶ್ಯಕತೆ ಕುರಿತು ಮಾತನಾಡಿದರು. ರೋಟೇರಿಯನ್ ಶಶಿಕಲಾ ರಾಜವರ್ಮ ಅಧ್ಯಕ್ಷೆ ರೋಟರಿ ಕ್ಲಬ್ ಮಣಿಪಾಲ ಮತ್ತು ಶ್ರೀ ಮೆಲ್ವಿನ್ ಅತಿಥಿಗಳಾಗಿದ್ದರು. ಡಾ. ಸುಪ್ರಿಯಾ, ಡಾ. ಸುನಿಲ ಜಾನ್, ಶ್ರೀ ಕೇಶವ್ ರಾಮ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಣಿಪಾಲದ ಆಕ್ಯುಪೇಶನಲ್ ಥೆರಪಿ ವಿಧ್ಯಾರ್ಥಿಗಳಿಂದ ಆಟಿಸಂ ಕುರಿತು ಕಿರು ನಾಟಕ ಇತ್ತು.ಉಡುಪಿಯ ಆಟಿಸಂ ಸೊಸೈಟಿಯ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು ಮತ್ತು ಶ್ರೀ ಕೀರ್ತೇಶ್ ಧನ್ಯವಾದಗಳನ್ನು ಅರ್ಪಿಸಿದರು. ಬೇಬಿ ಶ್ರಾವಣಿ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು,ಶ್ರೀ ಸಫಾನ್ ಕಾರ್ಯಕ್ರಮ ನಿರೂಪಿಸಿದರು.

Right Click Disabled