ಶ್ರೀ ಭಾಮರೀ ನಾಟ್ಯಾಲಯ( ರಿ) ಅಮ್ಮುಂಜೆ ಉಡುಪಿ. ಇದರ ರಜತ ಮಹೋತ್ಸವ ಹಾಗೂ ನೃತ್ಯ ಮಂಥನ- 10 ಇದರ ಅಂಗವಾಗಿಸ್ಪಂದನ ವಿಶೇಷ ಮಕ್ಕಳ ವಸತಿ ಶಾಲೆ ಸಾಲ್ಮರ ಉಪ್ಪೂರು ಇಲ್ಲಿನ ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ಶಿಬಿರದ ಉದ್ಘಾಟನ

ಕಾರ್ಯಕ್ರಮ ನಡೆಯಿತು. ಉದ್ಘಾಟಕದಾಗಿ ಶ್ರೀಮತಿ ಭಾರತಿ ಸಿ ಸುವರ್ಣ ಉಪಸ್ಥಿತರಿದ್ದರು ಮಾನಸ ವಿಶೇಷ ಮಕ್ಕಳ ವಸತಿ ಶಾಲೆಯ ಶಿಕ್ಷಕಿ ಹೇಮಲತಾ ಹಾಗೂ ಸ್ಪಂದನ ವಿಶೇಷ ಮಕ್ಕಳ ವಸತಿ ಶಾಲೆಯ ಜನಾರ್ಧನ್ ಉಪಸ್ಥಿತರಿದ್ದರು. ವಿದುಷಿ ಕಾತ್ಯಾಯನಿ ಕಾರ್ಯಕ್ರಮವನ್ನು ನಿರೂಪಿಸಿದರು ಶ್ರೀ ಭ್ರಾಮರೀ ನಾಟ್ಯಾಲಯದ ಗುರು ವಿದ್ವಾನ್ ಕೆ ಭವಾನಿ ಶಂಕರ್ ಅವರು ಧನ್ಯವಾದ ಗೈದರು. ನಂತರ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕೂಚಿಪುಡಿ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ಜರಗಿತು.


