ಜಿಲ್ಲಾಧಿಕಾರಿ ಡಾ.ಕುಮಾರ್ ಜನಸ್ನೇಹಿ ಆಡಳಿತಗಾರ ಬಿರುದು ಪ್ರಧಾನ.

ಮಂಡ್ಯ: ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಪ್ರಗತಿಪರರಿಂದ ಜನಸ್ನೇಹಿ ಅಡಳಿತಗಾರ ಬಿರುದು ಪ್ರಧಾನ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಬೆಳಿಗ್ಗೆ 11 ಗಂಟೆಯಲ್ಲಿ ನಗರದ ಡಿ ಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀ ಕಂಠೇಗೌಡ ಬಿರುದು ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಜನರ ನಿರೀಕ್ಷೆಯಂತೆ ಇನ್ನೂ ಕೆಲಸ ಮಾಡಬೇಕು ಎಂದು ಅಶಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಡಿ ಸಿ ಡಾ.ಕುಮಾರ ಅವರು ಅಪರೂಪದ ಜಿಲ್ಲಾಧಿಕಾರಿ ಎಂದು ಬಣ್ಣಿಸಿದರು. ಜನಸ್ನೇಹಿ ಆಡಳಿತಗಾರರಾಗಿರುವ ಜೊತೆಗೆ ಉದಾತ್ತ ನಡವಳಿಕೆ ಹೊಂದಿದ್ದಾರೆ ಎಂದರು.
ಈ ವೇಳೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಭೀಮ್ ಆರ್ಮಿಯ ಜೆ.ರಾಮಯ್ಯ, ಅಂಬೇಡ್ಕರ್ ವಾರಿಯರ್ಸ್’ನ ರಾಜ್ಯಾಧ್ಯಕ್ಷ ಗಂಗಾದರ್, ಸಮಸಮಾಜದ ಸಂಘಟನೆ ನರಸಿಂಹಮೂರ್ತಿ, ಎಂ.ವಿ.ಕೃಷ್ಣ ಸೇರಿದಂತೆ ಹಲವರಿದ್ದರು. ವರದಿ: ಲೋಕೇಶ್.ವಿ