ಮಂಡ್ಯ: ಡಿ.ಕೆ ಶಿವಕುಮಾರ್ ಸಿ.ಎಂ. ಆಗಬೇಕು: ನಿಶ್ಚಲಾನಂದ ಸ್ವಾಮೀಜಿ

ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ಪರ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮಿ ಬ್ಯಾಟ್ ಬೀಸಿದ್ದಾರೆ. ಮಂಡ್ಯ ಬಿಜಿಎಸ್‌ನಲ್ಲಿ ಇಂದು ನಡೆದ ಲಕ್ಷ್ಮಿಪೂಜೆಯ ನಂತರ ಮಾಧ್ಯಮದವರ ಜತೆ ಮಾತನಾಡಿದರು. ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಹಂಬಲ ಬಹಳ ದಿನಗಳಿಂದ ಇದೆ, ಬರೀ ಒಕ್ಕಲಿಗರಲ್ಲದೆ ಅವರ ಇತರೆ ಅಭಿಮಾನಿಗಳ ಆಗ್ರಹ ಸಹ ಆಗಿದೆ.ಪಕ್ಷಕ್ಕೆ 135 ಸೀಟ್ ಬರಲು ಸಾಕಷ್ಟು ಶ್ರಮಿಸಿದ್ದಾರೆ, ಕಾಂಗ್ರೆಸ್ ಈ ಮಟ್ಟಕ್ಕೆ ಬರಲು ಅವರು ಕಾರಣಿಕರ್ತರಾಗಿದ್ದಾರೆ. ಪಕ್ಷವನ್ನು ತಾಯಿ ರೀತಿ ಪ್ರೀತಿಸಿದ್ದಾರೆ, ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತೆ ಕಾದು ನೋಡೋಣ ಎಂದರು. ವರದಿ: ಲೋಕೇಶ್.ವಿ