*”ಭೋಧನಾ ಆಸ್ಪತ್ರೆಯಲ್ಲಿ ಕೋವಿಡ್-19  ಬಿಕ್ಕಟ್ಟನ್ನು ನಿರ್ವಹಿಸುವ ಒಳನೋಟಗಳು” ಕುರಿತಾದ ಪುಸ್ತಕ ಬಿಡುಗಡೆ*

Spread the love


ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ )ಯ ಘಟಕವಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ (ಎಂಯುಪಿ) ಕಸ್ತೂರ್ಬಾ ಆಸ್ಪತ್ರೆಗಳ ಕಾರ್ಯಾಚರಣೆಗಳ ಸಹ ನಿರ್ದೇಶಕ ಶ್ರೀ ಜಿಬು ಥಾಮಸ್ ಬರೆದ  “ಭೋದನಾ ಆಸ್ಪತ್ರೆಯಲ್ಲಿ  ಕೋವಿಡ್-19    ಬಿಕ್ಕಟ್ಟನ್ನು ನಿರ್ವಹಿಸುವ ಒಳನೋಟಗಳು” ಕುರಿತಾದ ಪುಸ್ತಕ ಬಿಡುಗಡೆ ಮಾಡಿತು . ಈ ಪುಸ್ತಕವು ಕೋವಿಡ್-19 ಸಾಂಕ್ರಾಮಿಕದ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿದ ಮತ್ತು ಆಸ್ಪತ್ರೆಯು ಜಾರಿಗೆ ತಂದ  ಕಾರ್ಯತಂತ್ರಗಳ ಸಮಗ್ರ ವಿವರಣೆಯನ್ನು ಒದಗಿಸುತ್ತದೆ, ಇದು ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆ ನಡೆಸುವಲ್ಲಿ ಆರೋಗ್ಯ ನಿರ್ವಾಹಕರಿಗೆ ಅಮೂಲ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್ ಅವರು ಈ ಪುಸ್ತಕವನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದರು, ಕಸ್ತೂರ್ಬಾ ಆಸ್ಪತ್ರೆಯು ಹೇಗೆ  ಯಶಸ್ವಿ ಕೋವಿಡ್-19 ಚಿಕಿತ್ಸಾ ಕೇಂದ್ರವಾಗಿ ಮಾರ್ಪಟ್ಟಿತ್ತು ಎಂಬುದರ ದಾಖಲೆಯಾಗಿ ಅದರ ಮಹತ್ವವನ್ನು ಒತ್ತಿ ಹೇಳಿದರು. ಆರಂಭದ ಪ್ರಕರಣದಿಂದಲೂ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಮಾದರಿಯಾಯಿತು. “ಈ ಪುಸ್ತಕವು ತರ್ಸಿಯರಿ ಕೇರ್ (ತೃತೀಯ ಆರೈಕೆ )ಆಸ್ಪತ್ರೆಯನ್ನು ಯಶಸ್ವಿ ಕೋವಿಡ್-19 ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಯಾಣವನ್ನು ನಿರೂಪಿಸುವ ಪ್ರಮುಖ ಸಂಪನ್ಮೂಲವಾಗಿದೆ” ಎಂದು ಅವರು ಹೇಳಿದರು. ಇದು ಭವಿಷ್ಯದ ಸಾಂಕ್ರಾಮಿಕ ರೋಗಗಳ ನಿರ್ವಹಣೆಯಲ್ಲಿ ಆಸ್ಪತ್ರೆಗಳಿಗೆ ಉಪಯುಕ್ತ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಾಂಕ್ರಾಮಿಕ ರೋಗದ ಆಳವಾದ ಪರಿಣಾಮವನ್ನು ಪ್ರತಿಬಿಂಬಿಸಿದರು ಮತ್ತು ಆರೋಗ್ಯ ವೃತ್ತಿಪರರು ಮತ್ತು  ಆಡಳಿತ ಸಿಬ್ಬಂದಿಗಳು ತೋರಿಸಿದ ಸಮರ್ಪಣೆಯನ್ನು ಶ್ಲಾಘಿಸಿದರು. ಈ ಪುಸ್ತಕವು ಅಭೂತಪೂರ್ವ ಸಂದರ್ಭಗಳಲ್ಲಿ ಸಂಭವಿಸಿದ ಪ್ರಯತ್ನಗಳು ಮತ್ತು ನಾವೀನ್ಯತೆಗಳ ನಿರ್ಣಾಯಕ ದಾಖಲೆಯಾಗಿದ್ದು, ಭವಿಷ್ಯದ ಬಿಕ್ಕಟ್ಟಿನ ನಿರ್ವಹಣೆಗೆ ಪಾಠ ಮತ್ತು ಸ್ಫೂರ್ತಿ ಎರಡನ್ನೂ ನೀಡುತ್ತದೆ ಎಂದು ಅವರು ಬಣ್ಣಿಸಿದರು.
ಲೇಖಕ ಶ್ರೀ ಜಿಬು ಥಾಮಸ್ ಅವರು ಮಾತನಾಡಿ  ಇದು ತಮ್ಮ ಎರಡನೇ ಪುಸ್ತಕವಾಗಿದ್ದು, ಸಾಂಕ್ರಾಮಿಕ ಸಮಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮತ್ತು ಟಿಎಂಎ ಪೈ ಆಸ್ಪತ್ರೆ  ನಿರ್ವಹಿಸಿದ ಅನುಭವಗಳು, ಸವಾಲುಗಳು ಮತ್ತು ನೀತಿ ರೂಪಾಂತರಗಳ ಅಧಿಕೃತ ದಾಖಲೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ  ಎಂದರು.
ಅತಿಥಿಗಳನ್ನು ಸ್ವಾಗತಿಸಿದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ನ (ಎಂಯುಪಿ) ಮುಖ್ಯ ಸಂಪಾದಕ (ಉಸ್ತುವಾರಿ) ಡಾ. ಶ್ರೀನಿವಾಸ ಆಚಾರ್ಯ ಅವರು ಎಂಯುಪಿಯ 294 ನೇ ಪ್ರಕಟಣೆಯನ್ನು ಬಿಡುಗಡೆ ಮಾಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಶೈಕ್ಷಣಿಕ ಪ್ರಕಟಣೆಗೆ ಮಾಹೆಯ ಬದ್ಧತೆಯಲ್ಲಿ ಬೇರೂರಿರುವ  ಮಣಿಪಾಲ ಯುನಿವರ್ಸಲ್  ಪ್ರೆಸ್ 13 ವರ್ಷಗಳ ಪ್ರಯಾಣವನ್ನು ಅವರು ಅವಲೋಕಿಸಿದರು ಮತ್ತು ಹೊಸ ಪುಸ್ತಕವು ಐತಿಹಾಸಿಕ ದಾಖಲೆ ಮತ್ತು ಅಗತ್ಯ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ, ಸಾಂಕ್ರಾಮಿಕ ರೋಗದಿಂದ ಕಲಿತ ನಿರ್ಣಾಯಕ ಪಾಠಗಳನ್ನು ಸೆರೆಹಿಡಿಯುತ್ತದೆ ಮತ್ತು ಮಾಹೆಯ ಆರೋಗ್ಯ ತಂಡಗಳ ಸಹಯೋಗದ ಪ್ರಯತ್ನಗಳನ್ನು ಆಚರಿಸುತ್ತದೆ ಎಂದು ಒತ್ತಿ ಹೇಳಿದರು.
ಆರೋಗ್ಯ ವಿಜ್ಞಾನಗಳ ಸಹ ಉಪಕುಲಪತಿ ಡಾ ಶರತ್ ಕುಮಾರ್  ರಾವ್, ತಂತ್ರಜ್ಞಾನ ವಿಭಾಗದ ಸಹ ಉಪಕುಲಪತಿ ಡಾ | ನಾರಾಯಣ ಸಭಾಹಿತ್, ರಿಜಿಸ್ಟ್ರಾರ್ ಡಾ | ಪಿ. ಗಿರಿಧರ್ ಕಿಣಿ , ಮಾಹೆ ಮುಖ್ಯ  ನಿರ್ವಾಹಕ ಅಧಿಕಾರಿ ಡಾ | ರವಿರಾಜಾ ಎನ್. ಎಸ್., ಭೋದನಾ ಆಸ್ಪತ್ರೆಗಳ ಸಿ ಓ ಓ  ಡಾ | ಆನಂದ್ ವೇಣುಗೋಪಾಲ, ವೈದ್ಯಕೀಯ ಅಧೀಕ್ಷಕ  ಡಾ | ಅವಿನಾಶ್ ಶೆಟ್ಟಿ, ಆಡಳಿತ ಸಲಹೆಗಾರ ಸಿ. ಜಿ. ಮುತ್ತಣ, ಮಣಿಪಾಲ ಕೆ ಎಂ ಸಿ ಡಾ | ಪದ್ಮರಾಜ್ ಹೆಗ್ಡೆ, ಮಂಗಳೂರು ಕೆ ಎಂ ಸಿ ಡೀನ್  ಡಾ | ಬಿ. ಉನ್ನಿಕೃಷ್ಣನ್, ಮಾಧ್ಯಮ ಮತ್ತು ಸಂವಹನ ವಿಭಾಗದ ಉಪ ನಿರ್ದೇಶಕ ಶ್ರೀ ಸಚಿನ್ ಕಾರಂತ್, ಅಂಗರಚನಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ವಿಭಾಗ ಸಂಯೋಜಕಿ ಡಾ | ಬಿನ್ಸಿ ಎಂ ಜಾರ್ಜ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Right Click Disabled