ಕರಾವಳಿ ತೀರದ ಪಂಚಗಂಗಾ ವಳಿಯ ತಟದಲ್ಲಿ ಇರುವ ನಮ್ಮ ಹೆಮ್ಮೆಯ ಊರು ಉಪ್ಪಿನಕುದ್ರು
ಕರಾವಳಿ ತೀರದ ಪಂಚಗಂಗಾ ವಳಿಯ ತಟದಲ್ಲಿ ಇರುವ ನಮ್ಮ ಹೆಮ್ಮೆಯ ಊರು ಉಪ್ಪಿನಕುದ್ರು ಶ್ರೀವಾಸುದೇವ ಶ್ರೀ ಗೋಪಾಲಕೃಷ್ಣ ಲಕ್ಷ್ಮಿ ನರಸಿಂಹ ದೇವಾಲಯಗಳಲ್ಲದೆ ಅಷ್ಟಮಠಗಳು ದ್ವಿರಥೋತ್ಸವ ಹೊಂದಿರುವ ದೈವಿಕ ಕ್ಷೇತ್ರ ಇಲ್ಲಿದೆ ಗ್ರಾಮ ದೇವರಾದ ಬೋಬ್ಬರ್ಯ ದೈವ ಹಾಗೂ ಸಾಕಷ್ಟು ದೈವಗಳ ಬೀಡಾಗಿದೆ ಕುಂದಾಪುರ ತಾಲೂಕಿನಲ್ಲಿರುವ ಕುದ್ರು ಗಳ ರಾಜ ಎನ್ನಬಹುದಾದ ಉಪ್ಪಿನ ಕುದ್ರುವಿನಲ್ಲಿ ಸಾಕಷ್ಟು ಮಂದಿ ಉದ್ಯಮಿಗಳಿದ್ದಾರೆ 8ಕ್ಕೂ ಮಿಕ್ಕಿ ರಾಷ್ಟ್ರ ಪ್ರಶಸ್ತಿ ಪಡೆದ ಮಹನೀಯರನ್ನು ಹೊಂದಿದ ಊರು ನಮ್ಮೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಗೊಂಬೆಯಾಟದ ಮೂಲಕ ತನ್ನ ಹೆಸರನ್ನು ವಿಶ್ವಾದ್ಯಂತ ಪ್ರಸಾರಗೊಂಡ ಊರು ನಮ್ಮೂರು ಉಪ್ಪಿನಕುದ್ರು . ನಮ್ಮೂರಿನ ಯುವ ಉದ್ಯಮಿ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ನಮ್ಮೂರಿನ ಹೆಮ್ಮೆಯ ಕುವರ ಶ್ರೀಯುತ ರಾಜೇಶ್ ಕಾರಂತರು. ಶ್ರೀಯುತರು ದಿವಂಗತ ನರಸಿಂಹ ಕಾರಂತ್ ಮತ್ತು ಶ್ರೀಮತಿ ಶಾರದಾ ಕಾರಂತ್ ಇವರ ಸುಪುತ್ರರಾಗಿ ಜನಿಸಿ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪೊಡವಿಗೊಡೆಯ ಶ್ರೀ ಗೋಪಾಲಕೃಷ್ಣನನ್ನು ಆರಾಧಿಸುತ್ತಿರುವವರು ಹಲವು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕ್ಷೇತ್ರದ ಅನೇಕ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಶ್ರೀಯುತರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಪಿನ ಕುದ್ರು ಇದರ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿದ್ದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಕುದ್ರುವಿನಲ್ಲಿ ನೂತನವಾಗಿ ರಚನೆಗೊಂಡ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಅದಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ಎಲೆ ಮರೆಯ ಕಾಯಿಯಂತೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ ನಮ್ಮ ರಾಜ್ಯದ ಜಗತ್ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದಂತಹ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಎರಡನೇ ಬಾರಿಗೆ ಘನ ಸರಕಾರದಿಂದ ನೇಮಕಗೊಂಡು ಸದಸ್ಯತ್ವದ ಚುಕ್ಕಾಣಿಯನ್ನು ಹಿಡಿಯುವುದರ ಮೂಲಕ ನಮ್ಮೂರಿನ ಕೀರ್ತಿ ಪತಾಕೆಗೆ ಇನ್ನೊಂದು ಗರಿಯನ್ನು ಹೆಚ್ಚಿಸಿರುತ್ತೀರಿ ನಿಮ್ಮ ಈ ಸದಸ್ಯತ್ವದ ಅವಧಿಯಲ್ಲಿ ಶ್ರೀ ಕ್ಷೇತ್ರ ಕೊಲ್ಲೂರು ಇನ್ನಷ್ಟು ಗುರುತರ ಅಭಿವೃದ್ಧಿಯನ್ನು ಕಾಣಲೆಂದು ಹಾಗೂ ಇನ್ನು ಮುಂದಿನ ದಿನಗಳಲ್ಲಿ ನಿಮಗೆ ಇನ್ನಷ್ಟು ಹೆಚ್ಚಿನ ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಲಿ ಎಂದು ತಾಯಿ ಮೂಕಾಂಬಿಕೆ ಮತ್ತು ಗೋಪಾಲಕೃಷ್ಣ ನಲ್ಲಿ ಮನಸಾರೆ ಬೇಡುತ್ತೇವೆ