ಮಲ್ಪೆ : ಅಕ್ರಮ ಮರಳು ದಾಸ್ತಾನು : ಮರಳು ಸಹಿತ ಮೂವರು ವಶಕ್ಕೆ…!!

Spread the love

ಉಡುಪಿ: ಮಲ್ಪೆ ಬಳಿಯ ಪಡುತೋನ್ಸೆ ಗ್ರಾಮದ ಹೂಡೆ ಗುಡೇರಿ ಕಂಬ್ಬದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನುಲ್ಲಾ ಮುನೀರ್, ಫಜೂಲ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಸುವರ್ಣ ನದಿ ತೀರದಲ್ಲಿ ಮರಳನ್ನು ತೆಗೆದು ಸುಲೇಮಾನ್ ಅವರಿಗೆ ಸೇರಿದ ಜಾಗದಲ್ಲಿ ಶೇಖರಣೆ ಮಾಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಸುಮಾರು 10 ಸಾವಿರ ಮೌಲ್ಯದ 2 ಯೂನಿಟ್ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕುರಿತು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Right Click Disabled