ಟ್ಯಾಕ್ಸಿಗಳಿಗೆ ಸಬ್ಸಿಡಿ ಕೊಡಿ, ಸರಕಾರಕ್ಕೆ ಶ್ರೀರಾಮಸೇನೆ ಅಗ್ರಹ

Spread the love

ಪ್ರತೀ ಬಾರಿ ತೆರಿಗೆ ವಿಷಯ ಬಂದಾಗ ಮೊದಲಿಗೆ ಟ್ಯಾಕ್ಸಿ ಗಳ ಮೇಲೆ ಯಾಕೆ ಹೊರೆ ಹಾಕುತ್ತೀರಿ? ಮತ್ತು ಸರಕಾರಗಳು ಟ್ಯಾಕ್ಸಿಯವರಿಗೆ ಏನು ಮಾಡಿದೆ?

ಈಗಾಗಲೇ ರಾಜ್ಯ ಸರಕಾರದ ಕೆಲವು ತೆರಿಗೆ ನಿಯಮದಿಂದ ಟ್ಯಾಕ್ಸಿ ಮಾಲಕರು ಸತ್ತಂತಾಗಿದೆ.
ಪ್ರತೀ ಬಾರಿಯೂ ಚುನಾವಣೆ ಮತ್ತು ಇನ್ನಿತರ ಸರಕಾರದ ಕೆಲಸಕ್ಕೆ ಟ್ಯಾಕ್ಸಿಗಳು ಬೇಕು. ಆದರೆ ನಂತರ ಟ್ಯಾಕ್ಸಿಗಳನ್ನು ಕಡೆಗಣಿಸುವುದು ರಾಜ್ಯ ಸರಕಾರಕ್ಕೆ ಅದರಲ್ಲೂ ಈಗಿನ ಮುಖ್ಯಮಂತ್ರಿಗಳ ಜಾಯಮಾನವಾಗಿದೆ.

ಕರ್ನಾಟಕದ ತೆರಿಗೆ ಏರಿಸಿ, ಹೊರ ರಾಜ್ಯದ ಪ್ರವಾಸಿಗಳು ಈ ರಾಜ್ಯಕ್ಕೆ ಬರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಹೈರಾಣಗಿರುವ ಟ್ಯಾಕ್ಸಿಗಳಿಗೆ ಮತ್ತೆ ಡೀಸೆಲ್ ಪೆಟ್ರೋಲ್ ದರ 3.00/3.50 ರೂ ಏರಿಸುವ ಮೂಲಕ ಬರೆ ಎಳೆದಿದ್ದಾರೆ.
ಈ ತೈಲ ಏರಿಕೆಯಿಂದ ಜನ ಸಾಮಾನ್ಯರ ಪಾಡೇನು?
ನಿಮ್ಮ ಗ್ಯಾರಂಟಿ ಯೋಜನೆಗಳಿಗಾಗಿ ತೈಲ ಏರಿಕೆ ಮಾಡಿದ್ದೀರಿ ಎಂಬುದು ನಗ್ನ ಸತ್ಯ,

ಆದರೆ ನಿಮ್ಮ ಗ್ಯಾರಂಟಿಗಳಿಗಾಗಿ ಮತ್ತಷ್ಟು ಕುಟುಂಬಗಳನ್ನು ಬಲಿ ಕೊಡಬೇಡಿ. ನಿಮ್ಮ ಗ್ಯಾರಂಟಿಗಳಿಗೆ ಪಕ್ಷದ ಹಣವನ್ನು ಬಳಸಿ.
ಕೂಡಲೇ ಡೀಸೆಲ್ ದರ ಕಡಿಮೆ ಮಾಡಿ ಇಲ್ಲವೇ ಟ್ಯಾಕ್ಸಿಗಳಿಗೆ ಡೀಸೆಲ್ ಸಬ್ಸಿಡಿ ನೀಡಿ. ಇಲ್ಲವೇ ಯಾವುದೇ ಸರಕಾರಿ ಕಾರ್ಯಕ್ರಮಕ್ಕೆ ಟ್ಯಾಕ್ಸಿಗಳನ್ನು ಬಳಸಬೇಡಿ.

ತೈಲ ಬೆಲೆ ಏರಿಕೆ ವಿಷಯದಲ್ಲಿ ರಾಜ್ಯ ಶ್ರೀರಾಮಸೇನೆಯು ಟ್ಯಾಕ್ಸಿ ಪರವಾಗಿ ನಿಲ್ಲುತ್ತದೆ ಎಂದು ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ, ಹಾಗೂ ಉಡುಪಿ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು ಸರಕಾರಕ್ಕೆ ಅಗ್ರಹಿಸುತ್ತಾ, ಎಚ್ಚರಿಕೆ ನೀಡಿದ್ದಾರೆ

Right Click Disabled