ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿಂದ ದಿನಾಂಕ 08.11.2023 ರಂದು ಕೆಬಿಎಲ್ ಕಾರ್ ಲೋನ್’ ಮೇಳವನ್ನು ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಛೇರಿಯ ಆವರಣದಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ
ಬ್ಯಾಂಕ್ ತನ್ನ ಶತಮಾನೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ‘ಕೆಬಿಎಲ್ ಉತ್ಸವ’ವನ್ನು ಆಚರಿಸುತ್ತಿದ್ದು ಗೃಹ, ಕಾರು, ಚಿನ್ನ ಹಾಗೂ ಕೃಷಿ ಸಾಲಗಳ ಮೇಲೆ ಆಕರ್ಷಕ ಬಡ್ಡಿದರ, ತ್ವರಿತ ಮಂಜೂರಾತಿ, ಸಂಸ್ಕರಣಾ ಶುಲ್ಕ ರಿಯಾಯಿತಿ ಸೇರಿ ಹಲವು ಪ್ರಯೋಜನಗಳನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಅಭಿಯಾನದ ಅಂಗವಾಗಿ ಆಯೋಜಿಸಿದ ‘ಕೆಬಿಎಲ್ ಕಾರ್ ಲೋನ್ ಮೇಳವನ್ನು ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕರಾದ ಶ್ರೀ ರಾಜಗೋಪಾಲ,ಬಿ, ಯವರು ಉದ್ಘಾಟಿಸಿದರು.
ಗ್ರಾಹಕರು ಕಂಪೆನಿಗಳಿಂದ ಆಕರ್ಷಕ ರಿಯಾಯಿತಿಗಳ ಜೊತೆಗೆ ಬ್ಯಾಂಕ್ ಪ್ರೊಸೆಸಿಂಗ್ ವೆಚ್ಚದಲ್ಲಿ ಶೇಕಡಾ 50% ಕಡಿತ, ಮೂಲ ಬಡ್ಡಿ ಯಲ್ಲಿ ವಿನಾಯಿತಿ, ಕ್ಷಿಪ್ರ ಡಿಜಿಟಲ್ ಮಂಜೂರಾತಿ ಸಹಿತ ಸರಳ ಪ್ರಕ್ರಿಯೆಗಳ ಸದಾವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಪ್ರತಿಷ್ಟಿತ ಕಾರ್ ವಿತರಕರಾದ ಆಭರಣ ಮೋಟಾರ್, ಕಾಂಚನಾ ಹ್ಯುಂಡೈ, ಯುನೈಟೆಡ್ ಟೊಯೋಟಾ, ಆಟೋ ಮ್ಯಾಟ್ರಿಕ್ಸ್, ಟಾಟ ಮೋಟಾರ್, ಮಹಿಂದ್ರಾ ಕರ್ನಾಟಕ ಎಜೆನ್ಸಿಸ್, ಎ.ಆರ್.ಎಮ್ ಮೋಟಾರ್ ಕಿಯಾ, ತಮ್ಮ ಕಂಪೆನಿಗಳ ವಿವಿಧ ಕಾರು ಮೊಡೆಲ್‌ಗಳನ್ನು ಪ್ರದರ್ಶಿಸಿದರು.
ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕರಾದ ಶ್ರೀ ಮನೋಜ್ ಕೋಟ್ಯಾನ್ ಸ್ವಾಗತಿಸಿದರು. ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.