ಕೋಟ ಪಂಚಾಯತ್ ನಿಂದ ಹಿರಿಯ ನಾಗರಿಕರಿಗೆ ಕುಡಿಯಲು ಕಲುಷಿತ ನೀರಿನ ಭಾಗ್ಯ
ಕೋಟ: ಮಣೂರು ಬಾಳೆಬೆಟ್ಟು ನಿವಾಸಿ, ಹಿರಿಯ ನಾಗರಿಕ ಕಾಳಿಂಗ ಪೂಜಾರಿ ಇವರಿಗೆ ಕುಡಿಯಲು ಮಲಿನ, ಕಲುಷಿತ ನೀರಿನ ಭಾಗ್ಯವನ್ನು ಕೋಟ ಗ್ರಾಮ ಪಂಚಾಯತ್ ಕರುಣಿಸಿದೆ.
ಇತ್ತೀಚೆಗೆ ನಡೆದ ಅಸಮರ್ಪಕ ರಸ್ತೆ ಹಾಗೂ ಮೋರಿ, ಚರಂಡಿ ಕಾಮಗಾರಿ ಕಾಳಿಂಗ ಪೂಜಾರಿ ಹಾಗೂ ಇವರ ಮನೆಯವರಿಗೆ , ಅವರ ಕುಡಿಯುವ ನೀರಿನ ಬಾವಿಯ ನೀರು ಮಲೀನವಾಗಿದ್ದು , ಸ್ಥಳೀಯ ಆರೋಗ್ಯ ಇಲಾಖೆ ಈ ಬಾವಿ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಮಾಡಿದ್ದು, ಈ ಮನೆಯವರಿಗೆ ಕಲುಷಿತ ನೀರು ಸೇವನೆಗೆ ದಾರಿ ಮಾಡಿಕೊಟ್ಟಿದ್ದು, ಇವರ ಮನೆಯವರ ಆರೋಗ್ಯ ಕೂಡಾ ಈ ನೀರಿನ ಸೇವನೆಯಿಂದ ಹದಗೆಟ್ಟು ಹೋಗಿದೆ.
ಯಾವುದಕ್ಕೂ ಕ್ಯಾರೆ ಎನ್ನದ ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಎಲ್ಲವೂ ಕೋರ್ಟ್ ನಲ್ಲಿ ಇತ್ಯರ್ಥ ಆಗಲಿ ಎಂದು ನಿರ್ಣಯ ಮಾಡಿದ್ದೇವೆ ಎಂದಿದ್ದಾರೆ.
ಒಂದಿಷ್ಟು ಕಿಡಿಗೇಡಿಗಳ ಧಾರ್ಮಿಕ, ಮಾಟ ಮಂತ್ರದ ಭಯೋತ್ಪಾದನೆ ಹಿರಿಯ ನಾಗರಿಕರ ಕುಟುಂಬವನ್ನು ಚಿಂತಿತರಾಗುವಂತೆ ಮಾಡಿದೆ.
ಮಾಧ್ಯಮದ ಪ್ರಶ್ನೆಗೆ ಅಸಡ್ಡೆ ಹಾಗೂ ಅಗೌರವದಿಂದ ಪ್ರತಿಕ್ರಿಯೆ ನೀಡಿರುವ ಪಿ ಡಿ ಓ ಸುರೇಶ್ ಬಹುತೇಕ ಪ್ರಶ್ನೆಗಳನ್ನು ತನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬಂತೆ ಮಾತನಾಡಿದ್ದಾರೆ. ಒಟ್ಟಾರೆ ಈ ಕೋಟ ಮಣೂರು ಪರಿಸರ ಒಂದಿಷ್ಟು ಕಿಡಿಗೇಡಿಗಳ ರೋಲ್ ಕಾಲ್, ಬೆದರಿಕೆಗೆ ಅಡ್ಡೆ ಆಗಿದ್ದು, ಜನ ಪ್ರತಿನಿಧಿಗಳು ಖಾಸಗಿ ವಿಚಾರದಲ್ಲಿ ಮೂಗು ತೋರಿಸುವುದು, ಪಕ್ಷ ರಾಜಕೀಯ ಎಂಬಂತೆ ಸಂಬಂಧ ಪಡದ ಪ್ರಕರಣಗಳನ್ನು ತಿರುಚುವುದು, ಕೆಲವು ದಿಡೀರ್ ಜನಿಸಿದ ಕ್ರಿಮಿನಲ್ ಹಿನ್ನೆಲೆಯ ಗುತ್ತಿಗೆದಾರರು, ಇನ್ನು ಕೆಲವು ಜನಪ್ರತಿನಿಧಿಗಳ ಪತಿ ಪತ್ನಿ, ಹಾಗೂ ಅವರ ಕುಟುಂಬದ ಗುತ್ತಿಗೆದಾರ ಎನ್ನುವ ಸಂಬಂಧದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಶೇಕಡಾವಾರು ಪಾಲುದಾರಿಕೆಗೆ ವ್ಯವಸ್ಥೆ ಮಾಡಿದೆಯೇ ಎನ್ನುವ ಅನುಮಾನ ಬರುತ್ತಿದೆ.
ಉಡುಪಿ ಜಿಲ್ಲಾಧಿಕಾರಿಯವರು, ಕುಂದಾಪುರ ಅಸಿಸ್ಟೆಂಟ್ ಕಮಿಷನರ್, ಕೋಟ ಪೋಲೀಸ್ ಅವರು ಹಿರಿಯನಾಗರಿಕರ ಜೀವದ ಭದ್ರತೆಯ ಹೊಣೆ ಹೊತ್ತು, ಮಣೂರು ಬಾಳೆಬೆಟ್ಟು ಕೆಲವು ಕಿಡಿಗೇಡಿಗಳ ಕೈವಶವಾಗದಂತೆ ನೋಡಿಕೊಳ್ಳಬೇಕಾಗಿದೆ.