ಕನ್ನಡ ರಾಜ್ಯೋತ್ಸವ: ಬೈಂದೂರು ಆಡಳಿತ ಸೌಧ, ಗಾಂಧಿ ಮೈದಾನದಲ್ಲಿ ಕನ್ನಡ ಧ್ವಜವೇ ಇಲ್ಲ!, ಕನ್ನಡಿಗರ ಬಗ್ಗೆ ಅಸಡ್ಡೆಯೇ

ಬೈಂದೂರು ನ.1 : ಇಂದು ಕರ್ನಾಟಕಾದ್ಯಂತ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು ಕನ್ನಡಿಗರ ಮೊದಲ ಪ್ರಾಶಸ್ತ್ಯದ ಉತ್ಸವ ಇದಾಗಿದೆ. ಇದೇ ಸಮಯದಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಆಡಳಿತ ಸೌಧದಲ್ಲಿ ಕನ್ನಡ ರಾಜ್ಯೋತ್ಸವದ ಹಬ್ಬದ ವಾತಾವರಣ ಕಾಣಿಸಲಿಲ್ಲ. ತಮ್ಮ ಬೇಸರವನ್ನು ಕನ್ನಡಿಗರೊಬ್ಬರು ವಾಟ್ಸಪ್ಪ್ ಮೂಲಕ ತನ್ನ ನೋವನ್ನು ಹೊರ ಹಾಕಿರುವ ಪೋಸ್ಟ್ ಒಂದು ಸಾಕಷ್ಟು ವೈರಲ್ ಆಗಿದೆ.


ಒಂದು ಕ್ಷಣಕ್ಕೆ ಬೆಳಗಾವಿಯಲ್ಲಿ ಇದ್ದೇವೆ ಅನಿಸಿತ್ತು. ಬೈಂದೂರು ಆಡಳಿತ ಸೌಧ, ಗಾಂಧಿ ಮೈದಾನ ಎಲ್ಲಿಯೂ ಸಹ ಕನ್ನಡದ ಹಬ್ಬದ ಸಡಗರ ಕಾಣಲಿಲ್ಲ. ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಒಂದೇ ಒಂದು ಕನ್ನಡದ ಬಂಟಿಂಗ್ಸ್ ಧ್ವಜ ಕಾಣಿಸಲಿಲ್ಲ. ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀಯವರೇ ಯಾಕೆ ಕನ್ನಡ ರಾಜೋತ್ಸವ ಎಂದರೆ ಅಸಡ್ಡೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ. ಬೈಂದೂರಿನ ಕನ್ನಡಿಗರು ಮಾಧ್ಯಮದ ಎದುರಿಗೆ ತಮ್ಮ ಅಳಲನ್ನು ಹೇಳಿ ಕೊಂಡಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಇಆ ತಪ್ಪನ್ನು ಸರಿಪಡಿಸ ಬೇಕಾಗಿ ಬೈಂದೂರು ಜನತೆ ವಿನಂತಿಸಿದೆ.

