ಕಳ್ತುರು : 8ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ

ದಿನಾಂಕ 23-10-2023 ಸೋಮವಾರದಿಂದ 24-10-2023 ಮಂಗಳವಾರದವರೆಗೆ ಸ. ಕ್ರಿ. ಪ್ರಾ. ಶಾಲಾ ವಠಾರ, ಕಳ್ತುರು. ಬೆಳಿಗ್ಗೆ 9 ಗಂಟೆಗೆ ಶ್ರೀ ಶಾರದಾ ಮಾತೆಯ ಪ್ರತಿಷ್ಟಾಪನೆ ಮತ್ತು ದುರ್ಗಾಹೋಮ ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ, ಬೆಳ್ಳಿಗೆ 10.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಬೆಳಿಗ್ಗೆ 11ಕ್ಕೆ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಮಧ್ಯಾಹ್ನ 2 ರಿಂದ ಸ್ವರ ಸಂಗಮ್ ಮೆಲೋಡಿಸ್ ಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, ಸಂಜೆ 4 ರಿಂದ ಸಭಾ ಕಾರ್ಯಕ್ರಮ ಸಂಜೆ 5.30 ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ಕಳ್ತುರು ಇವರಿಂದ ಯಕ್ಷಗಾನ ಚಿತ್ರಾಕ್ಷಿ ಪರಿಣಯ, ರಾತ್ರಿ 8ರಿಂದ ಚೈತನ್ಯ ಕಲಾವಿದರು, ಬೈಲೂರು ಇವರಿಂದ ಹಾಸ್ಯಮಯ ಸಾಂಸಾರಿಕ್ ನಾಟಕ ಪವಿತ್ರ.
ದಿನಾಂಕ 24-10-2023 ಮಂಗಳವಾರ ಬೆಳಿಗ್ಗೆ 9 ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಕಳ್ತುರು ಸಂತೆಕಟ್ಟೆ. ಬೆಳಿಗ್ಗೆ 10.30 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ 3 ಘಂಟೆಗೆ ಸಂಭ್ರಮದ ಮೆರವಣಿಗೆಯ ಮೂಲಕ ಶ್ರೀ ಶಾರದ ದೇವಿಯನ್ನು ವೈಭವದ ಶೋಭಾಯಾತ್ರೆಯ ಮೂಲಕ ಜಲಸ್ಥಂಬನ ವಿಶೇಷ ಆಕರ್ಷಣೆಯಾಗಿ ಭಜನಾ ತಂಡಗಳು , ಆಕರ್ಷಕ ಸಿಡಿಮದ್ದು ಪ್ರದರ್ಶನ, ಡಿಜೆ ಸೌಂಡ್ಸ್, ವಿಶೇಷ ಚಂಡೆವಾದನ ( ಶಿವದುರ್ಗ ಚಂಡೆ ಬಳಗ, ಬೆಳ್ಳಂಪಳ್ಳಿ ಕುಕ್ಕಿ ಕಟ್ಟೆ) ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
