.ಆರ್.ಪೇಟೆ : ವಿಶ್ವಕರ್ಮ ಜಯಂತಿ ಆಚರಣೆ,

Spread the love

ಕೆ.ಆರ್.ಪೇಟೆ : ವಿಶ್ವಕರ್ಮ ಜಯಂತಿ ಆಚರಣೆ,

ಕೆ.ಆರ್.ಪೇಟೆ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ(ಕೆರೆಶಾಲೆ)ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಲೋಕೇಶ್.ವಿ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಲಾಯಿತು,

ನಂತರ ಮಾತನಾಡಿದ ವಿಶ್ವಕರ್ಮ ಯುವಮಿಲನ್ ಸಂಘದ ಜಿಲ್ಲಾಧ್ಯಕ್ಷರಾದ ಮೋಹನ್ ಕುಮಾರ್ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರು ಇತಿಹಾಸ ಪುಟದಲ್ಲಿ ಅಜರಾಮರವಾಗಿ ಉಳಿದಿದ್ದಾರೆ, ಸಮುದಾಯದ ಜನತೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು,ಅನ್ನದಾತನಿಗೆ ನೇಗಿಲು ತಯಾರು ಮಾಡುವವರು ವಿಶ್ವಕರ್ಮರೇ ಆಗಿದ್ದಾರೆ. ಪುರಾತನ ಕಾಲದಿಂದಲ್ಲಿ ಗುರುಕುಲಗಳು ಬದುಕಿನ ಪರಂಪರೆಯನ್ನು ತೋರಿಸಿಕೊಡುತ್ತಿದ್ದವು. ಮನೆಯಲ್ಲಿ ತಾಯಿ ಹಾಗೂ ಗುರುಹಿರಿಯರ ಮಾರ್ಗದರ್ಶನದಿಂದಲೇ ಪ್ರತಿಯೊಬ್ಬರೂ ಯಶಸ್ಸನ್ನು ಕಾಣುತ್ತಿದ್ದರು. ಕೃಷಿಗೆ ಅನ್ನದಾತನೇ ಬೆನ್ನೆಲುಬಾದರೆ, ಅನ್ನದಾತನಿಗೆ ನೇಗಿಲು, ಕೃಷಿ ಸಲಕರಣೆಗಳನ್ನು ತಯಾರು ಮಾಡಿಕೊಡುವ ಹೆಮ್ಮೆ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಲೋಕೇಶ್.ವಿ, ಶಾಲೆಯ ಮುಖ್ಯಶಿಕ್ಷಕರಾದ ರವಿಕುಮಾರ್, ವಿಶ್ವಕರ್ಮ ಯುವಮಿಲನ್ ಜಿಲ್ಲಾಧ್ಯಕ್ಷರಾದ ಮೋಹನ್ ಕುಮಾರ್, ಜಿಲ್ಲಾ ಖಜಾಂಚಿ ಶರತ್ ಕುಮಾರ್, ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್,ಶಾಲಾ ಶಿಕ್ಷಕರಾದ ಮಹೇಶ್,ಕಾಂತಮ್ಮ ಮತ್ತಿತರರು ಉಪಸ್ಥಿತರಿದ್ದರು,

ವರದಿ: ಲೋಕೇಶ್.ವಿ

Right Click Disabled