ಬೈಂದೂರು: ಗಂಗೊಳ್ಳಿ ವಿದ್ಯಾಗಣಪತಿ ಉತ್ಸವ,ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ವಿತರಣೆ

Spread the love

ಬೈಂದೂರು : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಿಲ್ಲವರ ಸಮಾಜ ಸೇವಾ ಸಂಘ ಗಂಗೊಳ್ಳಿ ವತಿಯಿಂದ 13ನೇ ವರ್ಷದ ವಿದ್ಯಾಗಣಪತಿ ಉತ್ಸವ,, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಶ್ರೀ ವೀರೇಶ ಮಾಂಗಲ್ಯ ಮಂದಿರ ಗಂಗೊಳ್ಳಿಯಲ್ಲಿ ಜರುಗಿತು, ಹಾಗೂ
ಶ್ರೀ ವಿದ್ಯಾಗಣಪತಿ ದೇವರ ಭವ್ಯ ಮೆರವಣಿಗೆ ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ಪುರ ಮೆರವಣಿಗೆ ಮೂಲಕ ಗಣೇಶ ವಿಗ್ರಹವನ್ನು ಜಲ ಸ್ತಂಭನ ಮಾಡಲಾಯಿತು

ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆನಂದ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಸಂಘಟಣೆಗಳನ್ನು ಹುಟ್ಟು ಹಾಕುವುದು ಸುಲಭ ಮುಂದುವರೆಸಿಕೊಂಡು ಹೋಗುವುದು ಕಷ್ಟ, ,ಸಂಘಗಳ ಬೆಳವಣಿಗೆಗೆ ಸಮಾಜ ಬಾಂಧವರು ಹೆಚ್ಚಿನ ಕೊಡುಗೆಗಳನ್ನು ನೀಡಿದಾಗ ಮಾತ್ರ ಸಂಘವು ಸದೃಢವಾಗಿ ಬೆಳೆಯಲು ಸಾಧ್ಯವಿದೆ. ಸ್ವಜಾತಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ನಿಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.

ಬಿಲ್ಲವ ಸಮಾಜ ಸೇವಾ ಸಂಘ ಗಂಗೊಳ್ಳಿ ಮಾಜಿ ಅಧ್ಯಕ್ಷ ಮುತ್ತ ಬಿಲ್ಲವ ಮಾತನಾಡಿ,ಸ್ವಜಾತಿ ಬಾಂಧವರ ಸಹಕಾರ ಮತ್ತು ಹಿರಿಯರ ಆರ್ಶೀವಾದದಿಂದ ವಿದ್ಯಾಗಣಪತಿ ಉತ್ಸವ ನಡೆಯುತ್ತಾ ಬಂದಿದೆ.ವಿದ್ಯಾರ್ಥಿ ವೇತನ ಮತ್ತು ಪುರಸ್ಕಾರವನ್ನು ಪಡೆದಂತಹ ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮ ಕೊಡುಗೆ ನೀಡುವಂತೆ ಆಗಬೇಕು ಎಂದರು.

ಗಂಗೊಳ್ಳಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಹಾಗೂ ಸಂಘದ ಕಾರ್ಯದರ್ಶಿ ನಾರಾಯಣ ಪೂಜಾರಿ ಗಣೇಶ್ಹೋತ್ಸವಕ್ಕೆ ಆಗಮಿಸಿದಂತ ಭಕ್ತಾದಿಗಳಿಗೆ ಶುಭ ಹಾರೈಸಿದರು ಹಾಗೂ
ವಿದ್ಯಾಗಣಪತಿ ಸಂಸ್ಥಾಪಕ ಅಧ್ಯಕ್ಷ ಗಣೇಶ ಪೂಜಾರಿ ಉದ್ಘಾಟಿಸಿ ಶುಭಹಾರೈಸಿದಿರು.

ಈ ಸಂದರ್ಭ ಸಮಾಜದ ಗರಡಿ ಮತ್ತು ದೈವದ 11 ಪಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್‍ಎಸ್‍ಎಲ್‍ಸಿ ಮತ್ತು ಪಿ.ಯು.ಸಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ,ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಮಹೇಶ ಬಿ ಪೂಜಾರಿ ಬಾವಿಹಿತ್ಲು ಗಂಗೊಳ್ಳಿ ವಿದ್ಯಾರ್ಥಿವೇತನ ವಿತರಣೆ ಮಾಡಿದರು.ಗುಜ್ಜಾಡಿ ಸಂಘದ ಕೋಶಾಧಿಕಾರಿ ಪ್ರದೀಪ್ ಪೂಜಾರಿ ಬಹುಮಾನ ವಿತರಿಸಿದರು.
ರಘುರಾಮ ಪೂಜಾರಿ,ಸುರೇಶ್ ಪೂಜಾರಿ ಕೋಟೆಬಾಗಿಲು ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ಕೃಷ್ಣ ಪೂಜಾರಿ ಮತ್ತು ಉಪನ್ಯಾಸಕಿ ಸುಮತಿ ಬಿಲ್ಲವ ನಿರೂಪಿಸಿದರು.ಪ್ರೇಮಾ ಸಿ ಪೂಜಾರಿ ವಾಚಿಸಿದರು. ರಾಧ. ಬಿ.ಪೂಜಾರಿ ವಂದಿಸಿದರು.

Right Click Disabled