ಅಲೆವೂರು-ರಾಂಪುರದಲ್ಲಿ 18ನೇ ವರ್ಶದ ಮುದ್ದು ಕೃಷ್ಣ ಸ್ಪರ್ಧೆ

Spread the love

ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ರಾಂಪುರ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 07.09.23 ರ ಗುರುವಾರದಂದು ರಾಂಪುರ ಅಮಿತ್ ಇಂಡಸ್ಟ್ರೀಸ್ ಕಾಂಪೌಂಡ್ ವಠಾರದಲ್ಲಿ ಬೆಳಿಗ್ಗೆ 09.15ರಿಂದ 18ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವಯಸ್ಸು 2 ರಿಂದ 3, 3ರಿಂದ 4, 4 ರಿಂದ 6 ವಯಸ್ಸಿನವರಿಗೆ ಮಾತ್ರ. ಪ್ರಥಮ ವಿಜೇತರಿಗೆ ಶ್ರೀಕೃಷ್ಣನ ವಿಗ್ರಹದೊಂದಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ, ದ್ವಿತೀಯ ವಿಜೇತರಿಗೆ ಶ್ರೀಕೃಷ್ಣನ ವಿಗ್ರಹದೊಂದಿಗೆ ಬೆಳ್ಳಿಯ ಪದಕ ಹಾಗೂ ನಗದು ಬಹುಮಾನ, ಜೊತೆಗೆ ಅದೃಷ್ಟದ ಅಭಿಮಾನದ ಮುದ್ದುಕಂದ ವಿಶೇಷ ಪ್ರಶಸ್ತಿಯೊಂದಿಗೆ ಭಾಗವಹಿಸಿದ ಎಲ್ಲರಿಗೂ ಬಹುಮಾನವಿದೆ.
ಹೆಚ್ಚಿನ ಮಾಹಿತಿಗಾಗಿ 9901724846, 8549908944, 9964348716 ಸಂಪರ್ಕಿಸಬಹುದೆಂದು ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ (ರಿ) ರಾಂಪುರ ಇದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Right Click Disabled