ಅನಾರೋಗ್ಯ ಪೀಡಿತ ಮೂರು ತಿಂಗಳ ಹಸುಗೂಸಿಗಾಗಿ ಗ್ರಾಮಸ್ಥರಿಂದ ನಿಧಿ ಸಂಗ್ರಹ

Spread the love

ಬೈಂದೂರು

ವರದಿ : ದಾಮೋದರ ಮೊಗವೀರ ನಾಯಕವಾಡಿ ಪಬ್ಲಿಕ್ ನೆಕ್ಸ್ಟ್ ಬೈಂದೂರು,

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕವ್ರಾಡಿ ಗ್ರಾಮದ ನಾಗರಾಜ್ ಎಂಬವರ ಮಗ ಆದಿತ್ಯ ಮೂರು ತಿಂಗಳ ಕಂದಮ್ಮ. ಈತ ಅನಾರೋಗ್ಯದಿಂದ ಬಳಲುತ್ತಿದ್ದು ಊರಿನ ಗ್ರಾಮಸ್ಥರು ನಿನ್ನೆ ನಡೆದ ಕಂಡ್ಲೂರು ಶ್ರೀ ಮಾರಿಕಾಂಬಾ ದೇವಸ್ಥಾನದ ಜಾತ್ರೆಯಲ್ಲಿ ಆದಿತ್ಯನ ಮುಂದಿನ ಭವಿಷ್ಯಕ್ಕಾಗಿ ನಿಧಿ ಸಂಗ್ರಹ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅನಿತಾ ನಾಗರಾಜ್ ದಂಪತಿ ಕುಟುಂಬದಲ್ಲಿ ದೇವರ ಆಟವೇ ಕ್ರೂರಿ ಆಗಿದ್ದಂತೂ ಸತ್ಯ. ಆದಿತ್ಯ ಹುಟ್ಟಿ ಕೇಬಲ15 ದಿನದೊಳಗೆ ತಾಯಿಯನ್ನು ಕಳೆದುಕೊಂಡ! ಹುಟ್ಟಿದ ಒಂದೇ ವಾರದಲ್ಲಿ ತಂದೆ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮನೆಯ ಹಾಸಿಗೆ ಹಿಡಿದು ಬಿಟ್ಟರು! ವಿಧಿಯ ಕ್ರೂರ ಸಾಲದೆಂಬಂತೆ ಈ ಕಂದಮ್ಮನ ಆರೋಗ್ಯದಲ್ಲೂ ಏರುಪೇರಾಗಿ ಆಸ್ಪತ್ರೆಯಲ್ಲಿ ಬಳಲುತ್ತಿರುವುದು ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತದೆ.

ಕಂಡ್ಲೂರು ಸಮೀಪ ಕವ್ರಾಡಿ ಜನತಾ ಕಾಲೋನಿಯಲ್ಲಿ ವಾಸಿಸುವ ನಾಗರಾಜ್ ಕುಟುಂಬ ಕಡು ಬಡತದಲ್ಲಿದ್ದು ಒಂದು ಹೊತ್ತಿನ ಊಟಕ್ಕೂ ಪರೆದಾಡುವ ಸ್ಥಿತಿ ಇದೆ. ಊರಿನ ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳು ಅಲ್ಪಸ್ವಲ್ಪ ಸಹಾಯ ಮಾಡುತ್ತಾ ಬಂದಿದೆ. ಗೋಪಾಲ್ ಮೊಗವೀರ ಹಾಗೂ ಸ್ನೇಹಿತರು ಸೇರಿ ನಿನ್ನೆ ನಡೆದ ಕಂಡ್ಲೂರು ಶ್ರೀ ಮಾರಿಕಾಂಬ ಜಾತ್ರೆಯಲ್ಲಿ ಮಗುವಿನ ಭವಿಷ್ಯಕ್ಕಾಗಿ 20,000 ರೂ .ನಿಧಿ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಮಾನವೀಯ ಪುಣ್ಯದ ಕಾರ್ಯದಲ್ಲಿ ಗೋಪಾಲ್ ಮೊಗವೀರ, ಬಾಬಣ್ಣ, ನಾಗರಾಜ್ ಮೊಗವೀರ, ಕೃಷ್ಣಾನಂದ್ ಶೇಟ್, ಜಗದೀಶ್ ಶೆರುಗಾರ್, ಈಶ್ವರ್ ಕವ್ರಾಡಿ ಮತ್ತು ಗ್ರಾಮಸ್ಥರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

Right Click Disabled