ಶ್ರೀರಾಮ ಸೇನೆಯ “ರಾಜ್ಯ ಅಭ್ಯಾಸ ವರ್ಗ ಹಾವೇರಿಯಲ್ಲಿ ಉಡುಪಿಯಿಂದ 20 ಕ್ಕೂ ಹೆಚ್ಚು ಪದಾಧಿಕಾರಿಗಳು
ಇದೇ ದಿನಾಂಕ 28/29/30 ಜುಲೈ 2023 ರಂದು ಶ್ರೀರಾಮಸೇನೆಯ ಅಭ್ಯಾಸ ವರ್ಗ ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನ ಐತಿಹಾಸಿಕ,ಧಾರ್ಮಿಕ, ಜಾಗ್ರತ ಶ್ರೀ ಕ್ಷೇತ್ರ ಕಾರಡಗಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆಯಲಿದೆ. ಈ ಅಭ್ಯಾಸ ವರ್ಗದಲ್ಲಿ ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಸುಮಾರು 20 ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರತೀ ದಿನವೂ ರಾಜ್ಯ ಅಧ್ಯಕ್ಷ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಮೋದಜಿ ಮುತಾಲಿಕ್ ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಇತಿಹಾಸತಜ್ಞರು, ವಕೀಲರು, ಹೋರಾಟಗಾರರು, ಹಿಂದೂ ಮುಖಂಡರು ಭಾಗವಹಿಸಿ ಮಾಹಿತಿ ನೀಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.