ಸಂಪಾಜೆ ಘಾಟಿ ಕುಸಿತ ವಾಗುವ ಮೊದಲು ಎಚ್ಚತ್ತುಕೊಳ್ಳಿ ಸರಕಾರಕ್ಕೆ ಜಯರಾಂ ಅಂಬೆಕಲ್ಲು ಅಗ್ರಹ.

Spread the love

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯು ಮಂಗಳೂರು – ಮಡಿಕೇರಿ -ಮೈಸೂರು ವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ. ಕಳೆದ ಕೆಲವು ಬಾರಿ ಕೊಡಗು ಜಿಲ್ಲೆಯಲ್ಲಿ ತೀವ್ರವಾದ ಮಳೆಯಿಂದ ಗುಡ್ಡ ಕುಸಿತ, ಹಾಗೂ ರಸ್ತೆ ಕುಸಿತದಿಂದ ಅದೆಷ್ಟೋ ಮಂದಿ ಜೇವ, ಮನೆ ಕಳೆದುಕೊಂಡು, ಪುನರ್ವಸತಿ ಕೇಂದ್ರದಲ್ಲಿ ವಾಸಿಸಿರುವುದು ನಗ್ನ ಸತ್ಯ, ಆಗ ಸಂಪಾಜೆ ಘಾಟಿ ಕುಸಿತಗೊಂಡು ಸುಮಾರು ತಿಂಗಳುಗಳ ಕಾಲ ಸ್ತಬ್ದವಾಯಿತು. ಇದರಿಂದ ಪ್ರಮುಖ ಪ್ರವಾಸಿ ಕೇಂದ್ರವಾದ ಕೊಡಗು ಹಾಗೂ ಮೈಸೂರಿಗೆ ಹೋಗುವ ಪ್ರವಾಸಿಗಳು ಪರದಾಡಿರುವುದು ನಮ್ಮ ಕಣ್ಣ ಮುಂದೆ ಇದೆ.

ಈಗ ಮತ್ತೆ ಮಳೆ ಆರ್ಭಟ ಪ್ರಾರಂಭವಾಗಿದೆ. ಮಡಿಕೇರಿ ರಸ್ತೆಯ ಸಂಪಾಜೆ- ಕೊಯಾನಾಡು ಮದ್ಯೆ ರಸ್ತೆ ಕುಸಿತ ಉಂಟಾಗಿದೆ. ಈ ಕೂಡಲೇ ಸರಕಾರ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಮಡಿಕೇರಿ ಸಂಪರ್ಕ ಕಡಿದುಕೊಳ್ಳಬೇಕಾಗುತ್ತದೆ. ಹಾಗಾಗಿ ಜನರು ಮತ್ತು ಪ್ರವಾಸಿಗಳ ಹಿತದ್ರಿಷ್ಟಿಯಿಂದ ಕೂಡಲೇ ಸರಕಾರ ಸಂಪಾಜೆ ಘಾಟಿಯತ್ತ ಚಿತ್ತ ಹರಿಸಬೇಕೆಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಮುಖಂಡ, ಮೂಲತ ಸಂಪಾಜೆಯವರಾದ ಜಯರಾಂ ಅಂಬೆಕಲ್ಲು ಸರಕಾರವನ್ನು ಅಗ್ರಹಿಸಿದ್ದಾರೆ.

Right Click Disabled