ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ರಾಚನಬೆಟ್ಟು ಜನ್ನಾಡಿ. ಇವರ ವತಿಯಿಂದ ತಂಡದಲ್ಲಿರುವ ಹತ್ತನೇ ತರಗತಿ

Spread the love

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಯಿತು. 2022-20230 ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡ 85ಕ್ಕೂ ಅಧಿಕ ಅಂಕ ಗಳಿಸಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ವಿದ್ಯಾರ್ಥಿಗಳಾದ ತೃಪ್ತಿ ಕೆಬಿ, ಸೌಮ್ಯ, ನಿಶಾ, ಶ್ರಾವ್ಯ, ಸುದರ್ಶನ್, ವಿನಯ. ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು 🙏 ತಾಲೂಕು ಭಜನಾ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಶ್ರೀ ಜೈಕರ್ ಪೂಜಾರಿ ಗುಲ್ವಾಡಿ ಇವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಜಗದೀಶ್ ಶಿಕ್ಷಕರು ಶುಭ ಹಾರೈಸಿದರು. ತಂಡದ ಭಜನಾ ಗುರುಗಳಾದ ಶ್ರೀ ರಾಘವೇಂದ್ರ ಆಶೀರ್ವದಿಸಿದರು. ಶ್ರೀನಿಧಿ ಹಾಗುವ ಅನನ್ಯ ಪ್ರಾರ್ಥಿಸಿದರು. ಪುಟಾಣಿ ಪ್ರಣಮ್ಯ ಸ್ವಾಗತಿಸಿದರು. ಶ್ರೀಮತಿ ಸುಶೀಲಾ ಪ್ರಾಸ್ತಾವಿಕ ಮಾತುಗಳ ನಾಡಿದರು .ಕುಮಾರಿ ಪ್ರತೀಕ್ಷಾ ಪುರಸ್ಕರಿಸಲ್ಪಡುವ ವಿದ್ಯಾರ್ಥಿಗಳ ಪರಿಚಯ ಮಾಡಿಕೊಟ್ಟರು. ಅತುಲ್ ಕುಮಾರ್ ಶೆಟ್ಟಿ ಹಾಗೂ ತಂಡದ ಎಲ್ಲಾ ಮಕ್ಕಳು, ಪೋಷಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀಮತಿ ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು 🙏

Right Click Disabled