ಚುನಾವಣಾ ಕರ್ತ್ಯವ್ಯಕ್ಕೆ ತೆರಳುವ ಸಿಬ್ಬಂದಿಗೆ ಬಸ್ ವ್ಯವಸ್ಥೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಧಿಕಾರಿ/ಸಿಬ್ಬಂದಿಗಳನ್ನು PRO, APRO, PO ಆಗಿ ನಿಯೋಜಿಸಿ ಆದೇಶಿಸ ಲಾಗಿದೆ. ನಿಯೋಜಿತ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ತಮಗೆ ನಿಯೋಜಿಸಿದ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ದಿನಾಂಕ: 09-05-2023 ರಂದು ಹಾಜರಾಗಬೇಕಾಗಿದೆ.
ವಿವಿಧ ತಾಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ಹೊರಡುವ PRO, APRO, PO ಗಳನ್ನು ಸದ್ರಿಯವರ ತಾಲೂಕು ಕೇಂದ್ರಗಳಿಂದ ಸದ್ರಿಯವರನ್ನು ನಿಯೋಜಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಬಸ್ಸುಗಳ ವ್ಯವಸ್ಥೆಯನ್ನು ಈ ಕೆಳಗಿನ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ಮಾಡಲಾಗಿದೆ. ಬಸ್ಸುಗಳು ದಿನಾಂಕ: 09-05-2023 ರ ಪೂರ್ವಾಹ್ನ 6.30 ಗಂಟೆಗೆ ಹೊರಡಲಿದ್ದು, ನಂತರ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಹಾಗೂ ಚುನಾವಣೆ ಮುಗಿದು ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ. ಮತಯಂತ್ರಗಳನ್ನು ಹಸ್ತಾಂತರಿಸಿದ ನಂತರ ವಾಪಸ್ಸು ಕೇಂದ್ರಸ್ಥಾನಗಳಿಗೆ ಹೋಗಲು ಬಸ್ಸಿನ ವ್ಯವಸ್ಥೆ ಡಿಮಸ್ಟರಿಂಗ್ ಕೇಂದ್ರದಲ್ಲಿ ಮಾಡಲಾಗಿದೆ. ಇದನ್ನು ಗಮನಿಸಿಕೊಂಡು ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಇದರ ಉಪಯೋಗವನ್ನು ಪಡೆಯಬೇಕಾಗಿ ತಿಳಿಸಿದೆ.
ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ ಕೆಳಗಿನಂತಿವೆ.
ಬೈಂದೂರು ತಾಲೂಕು ಆಡಳಿತ ಸೌಧದ ಬಳಿ :
1). ಭೀಮಪ್ಪ, ಉಪತಹಶೀಲ್ದಾರರು,
ಮೊ: 8105025695
2).ಕಾಂತರಾಜು, ಗ್ರಾಮ ಆಡಳಿತ ಅದಿಕಾರಿ ಮೊ: 9482036207
3).ಶಶಿಕಾಂತ್ ದ್ವಿ.ದ.ಸ. ಮೊ:9620428828
ಕುಂದಾಪುರ ತಾಲೂಕು ಗಾಂಧಿ ಮೈದಾನದಲ್ಲಿ.
1.ಭಾಗ್ಯಲಕ್ಷ್ಮಿ , ಉಪತಹಶೀಲ್ದಾರರು
ಮೊ:9481144043
2.ವಾಲೇಕರ್ , ತಾಲೂಕು ಮೋಜಣಿದಾರರು ಮೊ: 9341049161
3.ರಂಗರಾಜು ಪ್ರ.ದ.ಸ.
ಮೊ: 8197809032
ಉಡುಪಿ ಸರ್ವಿಸ್ ಬಸ್ ನಿಲ್ದಾಣ, ಬೋರ್ಡ್ ಹೈಸ್ಕೂಲು ಬಳಿ.
1).ಅಶ್ವಥ್, ಉಪತಹಶೀಲ್ದಾರರು: 9113042711
2) .ಪುನೀತ್ ಗ್ರಾಮ ಆಡಳಿತ ಅಧಿಕಾರಿ
ಮೊ:9036681599
3).ಜಗಧೀಶ್ ಮುರನಾಳ ಗ್ರಾಮ ಆಡಳಿತ ಅಧಿಕಾರಿ ಮೊ: 8310498064
ಕಾಪು ಸರ್ವಿಸ್ ಬಸ್ ನಿಲ್ದಾಣದ ಬಳಿ.
1.ಸುಧೀರ್ ಕುಮಾರ್ ಶೆಟ್ಟಿ, ಕಂದಾಯ ನಿರೀಕ್ಷಕರು, ಕಾಪು ಮೊ:9008922727
2.ವಿಜಯ, ಗ್ರಾಮ ಆಡಳಿತ ಅಧಿಕಾರಿ
ಮೊ: 9845162068
3.ಕ್ಲಾರೆನ್ಸ್ ಲೆಸ್ಟಾನ್, ಗ್ರಾಮ ಆಡಳಿತ ಅಧಿಕಾರಿ, ಮೊ: 8095101024
ಕಾರ್ಕಳ ಬಂಡಿಮಠ ಬಳಿ.
1).ಮಹೇಶ್ ಕುಮಾರ್, ಪ್ರ.ದ.ಸ .
ಮೊ: 9741560924
2)ಆನಂದ ಬಿ. ಗ್ರಾಮ ಆಡಳಿತ ಆದಿಕಾರಿ,
ಮೊ: 9844111931
3)ರವಿಚಂದ್ರ ಪಾಟೀಲ್, ಗ್ರಾಮ ಆಡಳಿತ ಆದಿಕಾರಿ.