ಕಾರ್ಕಳ ವಿಧಾನಸಭಾ ಕ್ಷೆತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಕದಂತೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ಅಗ್ರಹ.

Spread the love

ಕಳೆದ 47 ವರ್ಷಗಳಿಂದ ಮನೆ,ಮಠ ಬಿಟ್ಟು, ಬ್ರಹ್ಮಚಾರಿ ಆಗಿ ಸಮಾಜವೇ ನನ್ನ ಕುಟುಂಬ , ದೇಶವೇ ನನ್ನ ಮನೆ ಎಂದು ಶ್ರೀ ಪ್ರಮೋದ್ ಮುತಾಲಿಕರು ದೇಶ, ಧರ್ಮಕ್ಕಾಗಿ ಹಗಲಿರುಳು ಹೋರಾಡುತ್ತಿದ್ದಾರೆ. ಈ ಹಿಂದೆ ಸಾಕಷ್ಟು ರಾಜಕೀಯ ಅವಕಾಶಗಳು ಇದ್ದಾಗಲೂ ಸಾರಾಸಗಟಾಗಿ ತಿರಸ್ಕರಿಸಿ ಸಂಘಟನೆ ಮಾಡ್ತಾ ಸಮಾಜ ಬಡೆದೆಬ್ಬಿಸುವ ಕಾರ್ಯ ಮಾಡುತ್ತಾ ಬಂದಿರುವುದು ಗೊತ್ತಿರುವ ಸಂಗತಿ.
ಆದ್ರೆ ಪ್ರಸಕ್ತ ಸನ್ನಿವೇಶದಲ್ಲಿ ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ,ಹಿಂದೂ ನಾಯಕರ, ಹಿಂದೂ ಕಾರ್ಯಕರ್ತರ ಕಡೆಗಣನೆ, ಅನವಶ್ಯಕ ಕೇಸ್, ಮುಂತಾದ ರೀತಿಗಳಲ್ಲಿ ವ್ಯವಸ್ಥೆ ಕುಲಗೆಟ್ಟಿದ್ದು ಇಡೀ ಸಮಾಜ ರೋಷಿಹೋಗಿದೆ. ಪ್ರಾಮಾಣಿಕ, ಬದ್ಧತೆಯ ಜನಪ್ರತಿನಿಧಿಗಳು ಇಂದು ಸಮಾಜ ನಿರೀಕ್ಷಿಸುತ್ತಿದ್ದು ಶ್ರೀ ಪ್ರಮೋದ ಮುತಾಲಿಕರು ಸೂಕ್ತ ವ್ಯಕ್ತಿ ಎಂದು ಒಪ್ಪಿ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷೇತರ ಸ್ಪರ್ಧೆಗೆ ನಿರ್ಧಾರವಾಗಿದ್ದು ಅಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ಹಾಕದೇ ಪ್ರಮೋದ್ ಮುತಾಲಿಕರಿಗೆ ಬೆಂಬಲಿಸಲು ಆಗ್ರಹಿಸುತ್ತೇವೆ. ಅಕಸ್ಮಾತ್ ಅಭ್ಯರ್ಥಿ ಹಾಕಿದ್ರೆ ನಮ್ಮ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಹಿಂದೂ ಸಂಘಟನೆಗಳು ಗಂಭೀರವಾದ ನಿಲುವು ತೆಗೆದುಕೊಳ್ಳುವ ಸಂದರ್ಭ ಬರುತ್ತೆ ಅಂತ ಈ ಮೂಲಕ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಗಮನಕ್ಕೆ ತರುತ್ತಿದ್ದೇವೆ. ಬಿಜೆಪಿ ಪಕ್ಷದ ಬೆಳವಣಿಗೆಗೆ ಮುತಾಲೀಕರ ಮಹತ್ತರ ಪಾತ್ರವಿರುವುದು ಜಗಜ್ಜಾಹಿರು. ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಿಜೆಪಿ ನೆಲೆಯೂರಲು ಕಾರಣಿಕರ್ತರೇ ಮುತಾಲಿಕರು. ಆ ಹಿನ್ನೆಲೆಯಲ್ಲಿ ಬಿಜೆಪಿ ಯು ಮುತಾಲಿಕರಿಗೆ ಬೆಂಬಲಿಸಲು ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಆಗ್ರಹಿಸಿದೆ.

Right Click Disabled