ಶ್ರೀ ಶಕ್ತಿ ಪೀಠ ಕಬ್ಬಾಳಮ್ಮ ದೇವಿ ನೂತನ ದೇವಾಲಯದ ಭೂಮಿ ಪೂಜೆ ನೆರವೇರಿತು.
ನಾಗಮಂಗಲ: ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಶುಕ್ರವಾರ ಶ್ರೀ ಶಕ್ತಿ ಪೀಠ ಕಬ್ಬಾಳಮ್ಮ ದೇವಿ ಜೀರ್ಣೋದ್ಧಾರ ಸೇವಾ ಸಮಿತಿ ರಿ. ವತಿಯಿಂದ ಶ್ರೀ ಶಕ್ತಿಪೀಠ ಕಬ್ಬಾಳಮ್ಮ ದೇವಿಯ ನೂತನ ದೇವಾಲಯ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಕ್ತಿ ಬಾಲಮ್ಮ ನಾಗದುರ್ಗಪೀಠ ಇವರ ಅನುಪಸ್ಥಿತಿಯಲ್ಲಿ ಶ್ರೀ ಚರಣ್ ಭಾರದ್ವಾಜ್ ಗುರೂಜಿಯವರ ನೇತೃತ್ವದಲ್ಲಿ ಸಾಂಪ್ರದಾಯಕ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು ಮತ್ತು ಸಮಾಜ ಸೇವಕರಾದ ಬಿ.ಜಿ.ಎಸ್ ಮಠದ ಶ್ರೀರಾಮಕೃಷ್ಣೇಗೌಡರು ದೇವಾಲಯದ ಧರ್ಮ ಕಾರ್ಯಕ್ಕೆ ಧನಸಹಾಯ ಮಾಡುವ ಮೂಲಕ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಶಿವಯ್ಯ. ಖಜಾಂಚಿ ಲಲಿತ್ ಚೌದ್ರಿ. ಕಾರ್ಯದರ್ಶಿ ನವೀನ್. ಸಿದ್ದರಾಜು. ಚೇತನ್.ರಾಜು. ಚಂದ್ರಶೇಖರ್. ಮಾಯಣ್ಣಗೌಡ. ನಾರಾಯಣ್ ಹಾಗೂ ಮುಂತಾದ ಸದಸ್ಯರುಗಳು,
ಹಿರಿಯ ಮುಖಂಡರಾದ ಮೂಡಪ್ಪ.ನಾಗರಾಜು. ನರಸಿಂಹ ಮೂರ್ತಿ.ಗೋವಿಂದಯ್ಯ. ಮುತ್ತಣ್ಣ.ನರಸಿಂಹಮೂರ್ತಿ. ಮಂಜುನಾಥ್ .ಗ್ರಾಮದ ಗ್ರಾಮಸ್ಥರು, ಯುವಕರು, ಮುಖಂಡರುಗಳು, ಭಕ್ತಾದಿಗಳು, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ- ಸಚಿನ್ ಮಾಯಸಂದ್ರ.