ಮಿಥುನ್ ರೈ ಶ್ರೀಕೃಷ್ಣ ಮುಖ್ಯಪ್ರಾಣರ ಕ್ಷಮೆ ಕೇಳಲಿ. ಉಡುಪಿ ಜಿಲ್ಲಾ ಶ್ರೀರಾಮಸೇನೆ.

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಜಾಗವನ್ನು ಮುಸ್ಲಿಮರು ಕೊಟ್ಟದ್ದು ಎಂದು ಮಿಥುನ್ ರೈ ಹೇಳಿಕೆ ಅತ್ಯಂತ ಬಾಲಿಶವಾಗಿದೆ.
ಸುಳ್ಳು ಹೇಳೋದಕ್ಕೂ ಒಂದು ಸಾಕ್ಷಿ ಇರಬೇಕು. ಪ್ರಖ್ಯಾತ ಜ್ಯೋತಿಷಿ ಅಮ್ಮಣ್ಣರಾಯರ ಪ್ರಖಾರ ಏಳನೆಯ ಶತಮಾನದಲ್ಲಿ ಅರಬ್ ರಾಷ್ಟ್ರದಲ್ಲಿ ಇಸ್ಲಾಂ ಮತ ಶುರುವಾಯ್ತು.13 ನೇ ಶತಮಾನದಲ್ಲಿ ಕೃಷ್ಣ ಮಠವನ್ನು ಸ್ಥಾಪಿಸಲಾಯ್ತು. ಕೇವಲ ಆರುನೂರು ವರ್ಷಗಳಲ್ಲಿ ಮುಸ್ಲಿಮರು ಅದರಲ್ಲೂ ಉಡುಪಿಗೆ ಬಂದು ಜಾಗ ಮಾಡಿದರೋ? ಅರ್ಥ ಇಲ್ಲದ ಮಾತನ್ನು ಆಡಬಾರದು. ಅನಂತೇಶ್ವರವು ಎಷ್ಟು ವರ್ಷ ಹಳೆಯದ್ದೋ ಗೊತ್ತಿಲ್ಲ. 9ನೇ ಶತಮಾನದಲ್ಲಿ ಅನಂತೆಶ್ವರ ದೇವಸ್ಥಾನ ಪುನರ್ನಿಮಾಣ ಆಗಿದೆ ಎಂಬುದು ಇತಿಹಾಸವಿದೆ. ಅಂತಹ ದೇವಸ್ಥಾನದ ಸಮೀಪವೇ ಮುಸ್ಲಿಮರು ಜಾಗ ಮಾಡಿದ್ರಾ? ಏನು ಮಾತನಾಡ್ತಾರೆ ಮಿಥುನ್ ರವರು?
ಕೇವಲ ರಾಜಕೀಯಕ್ಕಾಗಿ ಧರ್ಮದ ಒಳಗೆ ಕಂದಕವನ್ನು ಸೃಷ್ಟಿಸುವ ಇಂತಹ ನಾಯಕರನ್ನು ರಾಜಕೀಯೇತರವಾಗಿ ಹಿಂದೂ ಸಮಾಜ ದೂರವಿಡಬೇಕಾಗಿದೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಅದರದೇ ಆದ ಇತಿಹಾಸವಿದೆ ಐತಿಹ ಇದೆ, ವಿಶ್ವದಲ್ಲೇ ಅತ್ಯಂತ ಹೆಚ್ಚು ಆರಾಧನೆ ಮಾಡುವ ದೇವರೆಂದರೆ ಅದು ಉಡುಪಿಯ ಶ್ರೀ ಕೃಷ್ಣ.
ಇಷ್ಟಾಗಿಯೂ ಉಡುಪಿಯ ಶ್ರೀ ಕೃಷ್ಣನ ಜಾಗದ ವಿಚಾರದಲ್ಲಿ ಮಿಥುನ್ ರೈ ಎತ್ತಿದ ವಿಷಯ ನಿಜಕ್ಕೂ ಅವರ ಮತೀಯ ಬುದ್ಧಿ ಬ್ರಮಣೆಗೆ ಸಾಕ್ಷಿಯಾಗಿದೆ.
ವಿಜಯನಗರ ಸಾಮಂತ ರಾಮಭೋಜ ಅರಸ ಅನಂತೇಶ್ವರ ದೇವಸ್ಥಾನಕ್ಕೆ ಉಂಬಳಿ ನೀಡಿದ ಜಾಗದಲ್ಲಿ ಉಡುಪಿ ಶ್ರೀಕೃಷ್ಣ ಮಠ ನಿರ್ಮಿಸಲಾಯಿತು ಎಂಬುದು ಶ್ರೀಕೃಷ್ಣ ಮಠದಲ್ಲಿ ಶಿಲಾಶಾಸನಗಳಿವೆ, ಮಧ್ವಸರೋವರದಲ್ಲಿ 9 ಶಾಸನಗಳಿವೆ. ಜಾಗ ಅನ್ಯ ಧರ್ಮೀಯರು ಕೊಟ್ಟಿದ್ದಾರೆ ಎಂದು ರೋಧಿಸುವವರು ಶಾಸನಗಳನ್ನು ಇತಿಹಾಸ ತಜ್ಞ ಪ್ರಾಜ್ಞರಿಂದ ಓದಿಸಿಕೊಳ್ಳಬಹುದು.
ಬ್ರಿಟಿಷರು ಬಂದ ಬಳಿಕ ಮದ್ರಾಸ್ ಪ್ರಾಂತ್ಯ ಆಡಳಿತದ ಸಂದರ್ಭ ಇದು ಶ್ರೀಕೃಷ್ಣ ಮಠಕ್ಕೆ ಸೇರಿದೆ ಎನ್ನುವುದಕ್ಕೆ ಲಿಖಿತ ದಾಖಲೆಗಳೂ ಇದೆ.
ಶಿಲಾಶಾಸನ, ದಾಖಲೆ, ಐತಿಹ್ಯಗಳ ಆಧರಿಸಿ ಮಾಧ್ವ ವಿದ್ವಾಂಸರು ಹೇಳುವಂತೆ…
ಇದು ಕುಂಜರ ವಂಶದ ಕುಂಜಿತ್ತಾಯರ ಮನೆತನಕ್ಕೆ ಸೇರಿದ ಜಾಗ. ರಾಜನ ಕುದುರೆಗಾಡಿ ಅಡಿಗೆ ಹಾವು ಬಿದ್ದು ಸತ್ತಾಗ ರಾಜ ಕುಂಜಿತ್ತಾಯರ ಬಳಿ ಬಂದರು. ಪಾಪ ಪ್ರಾಯಶ್ಚಿತ್ತಕ್ಕಾಗಿ ಉಡುಪಿಯಲ್ಲಿ ನಾಲ್ಕು ಸ್ಕಂದಾಲಯ, ನಾಲ್ಕು ದುರ್ಗಾಲಯ ಮಾಡಿಸುತ್ತಾರೆ.
ಉಡುಪಿಯಿಂದ ಸುಳ್ಯ, ಸುಬ್ರಹ್ಮಣ್ಯ ವರೆಗೆ ದೇವಸ್ಥಾನ ನಿರ್ಮಿಸಲು ಕುಂಜಿತ್ತಾಯ ವಂಶಸ್ಥರಿಗೆ ಅವಕಾಶವನ್ನು ನೀಡಲಾಗಿತ್ತು.
ಇಷ್ಟೆಲ್ಲ ದಾಖಲೆಗಳಿದ್ದರೂ ಮಿಥುನ್ ರವರು, ಅವರಿಗೆ ಕೇವಲ ರಾಜಕೀಯ ಉದ್ದೇಶಕ್ಕೆ ಹಾಗೂ ರಾಜಕೀಯವಾಗಿ ಬೆಳೆಯಲು ಜಗದ್ದೋರಾಕ ಶ್ರೀ ಕೃಷ್ಣ ಮಠದ ಇತಿಹಾಸ ಗೊತ್ತಿಲ್ಲದೆ ಹಿಂದುಗಳಲ್ಲಿಯೇ ಶ್ರೀ ಕೃಷ್ಣ ಮಠದ ಬಗ್ಗೆ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿರುವುದು ಉಡುಪಿ ಜಿಲ್ಲಾ ಶ್ರೀರಾಮಸೇನೆ ತೀವ್ರವಾಗಿ ಖಂಡಿಸುತ್ತದೆ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಕ್ಷಮೆಯಾಚಿಸಬೇಕೆಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ