ಜ.20ರಂದು ಬಡವರ ಬಂಧು ಬಾಣಸಂದ್ರ ಹುಚ್ಚೇಗೌಡ ಕೃತಿ ಲೋಕಾರ್ಪಣೆ

Spread the love

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಾಣಸಂದ್ರದಲ್ಲಿ ವಿದ್ಯಾವರ್ಧಕ ಸಹಕಾರ ಸಂಘ, ವಿ.ಎಸ್.ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗು ಬಾಣಸಂದ್ರ ಹುಚ್ಚೇಗೌಡರ ಸ್ಮಾರಕ ಪ್ರತಿಷ್ಠಾನ ವತಿಯಿಂದ ‘ಬಡವರ ಬಂಧು ಬಾಣಸಂದ್ರ ಹುಚ್ಚೇಗೌಡ’ ಕೃತಿ ಲೋಕಾರ್ಪಣೆ ಹಾಗು ಪ್ರತಿಭಾಪುರಸ್ಕಾರ ಸಮಾರಂಭವು ಜ.20ರಂದು ನಡೆಯಲಿದೆ.

ಗ್ರಾಮದ ಹುಚ್ಚೇಗೌಡರ ಸಮುದಾಯಭವನದಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸಂಘದ ಅಧ್ಯಕ್ಷ ರಾಗಿನಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಪ್ರಾಂಶುಪಾಲ ಸುರೇಶ್.ಎಚ್.ಎನ್ ಪ್ರಾಸ್ತಾವಿಕ ನುಡಿ ನುಡಿಯಲಿದ್ದಾರೆ.

ತುಮಕೂರು ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಉದ್ಘಾಟನೆ ನೆರವೇರಿಸಲಿದ್ದು, ‘ಬಡವರ ಬಂಧು ಬಾಣಸಂದ್ರ ಹುಚ್ಚೇಗೌಡರ ಕೃತಿಯ ಕುರಿತು ಸಾಹಿತಿ ಪ್ರೊ.ಎಂ.ಜಿ.ಚಂದ್ರಶೇಖರ್ ಮಾತನಾಡಲಿದ್ದಾರೆ.

ಕೃತಿ ರಚನೆಕಾರ ಪ್ರೊ.ಪುಟ್ಟರಂಗಪ್ಪ ಪ್ರತಿಭಾಪುರಸ್ಕಾರ ನಡೆಸಿಕೊಡಲಿದ್ದಾರೆ. ಬಾಣಸಂದ್ರ ಹುಚ್ಚೇಗೌಡರ ಸ್ಮಾರಕ ಪ್ರತಿಷ್ಠಾನ ವತಿಯಿಂದ ಸಂಘದ ಕಾರ್ಯಪಾಲಕ ನಿರ್ದೇಶಕ ಸತ್ಯನಾರಾಯಣ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಪಾಂಡುರಂಗೇಗೌಡ ಅವರನ್ನು ಸನ್ಮಾನಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕಿ ತಿಮ್ಮಮ್ಮ, ಸಂಘದ ಉಪಾಧ್ಯಕ್ಷ ರಂಗೇಗೌಡ, ನಿರ್ದೇಶಕರುಗಳಾದ ಕೃಷ್ಣೇಗೌಡ, ರಂಗಸ್ವಾಮಿ ಎಚ್.ಟಿ, ಬಿ.ಆರ್.ರಾಜು, ರಾಧಾಕೃಷ್ಣ, ಲಕ್ಷ್ಮೀದೇವಿ, ಮಂಜುಳ ಎ.ಎಚ್, ರಮೇಶ್.ಬಿ.ಎಂ ಭಾಗವಹಿಸಲಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ್ ತಿಳಿಸಿದರು.

ವರದಿ- ಸಚಿನ್ ಮಾಯಸಂದ್ರ.

Right Click Disabled