ಅಂತರಾಷ್ಟ್ರೀಯ ಮಟ್ಟದ ಪದಕ-ಪ್ರಶಸ್ತಿಗಳನ್ನು ಪಡೆದ: ಮಾಯಸಂದ್ರ ಸೌರಭ ಕಾನ್ವೆಂಟ್ ವಿದ್ಯಾರ್ಥಿಗಳು.

Spread the love

ತುರುವೇಕೆರೆ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವಿಶ್ವದ ಪ್ರಥಮ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022-23 ಸಾಲಿನ ವೈಭವಯುತ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ನಗರದಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ ಕರ್ನಾಟಕದ ಮುಖ್ಯ ಆಯುಕ್ತರಾದಂತಹ ಶ್ರೀಯುತ ಪಿ ಜಿ ಆರ್ ಸಿಂಧ್ಯಾ ರವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ಕೌಟ್ ಅಂಡ್ ಗೈಡ್ ಆಯುಕ್ತರದಂತಹ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರುಗಳಾದಂತಹ ಮೋಹನ್ ಆಳ್ವಾರ್ ಅವರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಜರುಗಿತು.

ಕರ್ನಾಟಕ ರಾಜ್ಯಪಾಲರಾದಂತ ಶ್ರೀಯುತ ತಾವರ್ ಚಂದ್ ಗೆಹಲೋಟ್ ಹಾಗೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತಹ ಶ್ರೀಯುತ ಬಸವರಾಜ ಬೊಮ್ಮಾಯಿ ರವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು…

ಪ್ರಪಂಚದ ವಿವಿಧ ದೇಶಗಳನ್ನು ಒಳಗೊಂಡಂತೆ ನಮ್ಮ ಭಾರತ ದೇಶದಿಂದ ಸುಮಾರು 25000 ಸ್ಕೌಟ್ ಅಂಡ್ ಗೈಡ್ ರೇಂಜರ್ಸ್ ರೋವರ್ಸ್ ಹಾಗೂ ನಮ್ಮ ಕರ್ನಾಟಕ ರಾಜ್ಯದಿಂದ ಸುಮಾರು 35,000 ವಿದ್ಯಾರ್ಥಿಗಳನ್ನು ಒಳಗೊಂಡಂತೆ ತುಮಕೂರು ಜಿಲ್ಲೆಯಿಂದ ಸುಮಾರು 1150 ವಿದ್ಯಾರ್ಥಿಗಳು ಹಾಗೆ ಮತ್ತು ತುರುವೇಕೆರೆ ತಾಲೂಕಿನಿಂದ ಸುಮಾರು 151 ವಿದ್ಯಾರ್ಥಿಗಳು ಭಾಗವಹಿಸಿ ಅದರಲ್ಲಿ ನೆಹರು ವಿದ್ಯಾ ಪದವಿ ಪೂರ್ವ ಕಾಲೇಜು ನಿಂದ 36 ದೊಂಬರಹಳ್ಳಿ ಪ್ರೌಢಶಾಲೆ 40 ಎಸ್ ಬಿಜಿ ವಿದ್ಯಾಲಯ 25 ಅಂಚಿಹಳ್ಳಿ ಪ್ರೌಢಶಾಲೆ 7 ನೆಹರು ಬಾಲಕಿಯರ ಪ್ರೌಢಶಾಲೆ 7 ಕೊಡಗಿಹಳ್ಳಿ ಪ್ರೌಢಶಾಲೆ ತುರುವೇಕೆರೆಯಿಂದ 12 ಹಾಗೂ ಸೌರಭ ಕಾನ್ವೆಂಟ್ ಮಾಯಸಂದ್ರ ಶಾಲೆಯಿಂದ 7 ವಿದ್ಯಾರ್ಥಿಗಳು ಒಳಗೊಂಡಂತೆ ಎಲ್‌ಟಿ ಗಂಗಾಧರ್ ರವರು ಮುಂದಾಳತ್ವದಲ್ಲಿ ಗಿರಿಧರ್ ತಾಲೂಕು ಮೇಲುಸ್ತುವಾರಿ ಹಾಗೆ ವಹಿಸಿಕೊಂಡು ಸಹಾಯಕರಾಗಿ ಮುನಿರಾಜ್ ಸೌರಭ ಕಾನ್ವೆಂಟ್ ಸ್ಕೌಟ್ ಮಾಸ್ಟರ್ ರಂಗಸ್ವಾಮಿ ರವರು ವಿಜಯಾನಂದ್ ರವರು ಶ್ರೀಮತಿ ಗೀತಾ ರವರು ವಿದ್ಯಾರ್ಥಿಗಳು ಕೀರ್ತಿರವರು ಶೋಭ ರಾಣಿ ರವರು ಓಬಳ ನಾಯಕ್ ರವರು ಪ್ರಕಾಶ್ ಸಿಪಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳು ಸಾಹಸಮಯ ಚಟುವಟಿಕೆಗಳು ಫನ್ ಗೇಮ್ಸ್ ಆಹಾರಮೇಳ ಕೃಷಿ ಮೇಳ ವಿಜ್ಞಾನ ವಸ್ತು ಪ್ರದರ್ಶನ ಪುಷ್ಪ ಪ್ರದರ್ಶನ ಕಾಡುಗಳ ಸಫಾರಿ ಹೊರ ಸಂಚಾರ ಏಕ್ ಭಾರತ್ ಶ್ರೇಷ್ಠ ಭಾರತ್ ಎಸ್‍ಡಿಜಿ ವಿಲೇಜ್ ಕಾರ್ಯಕ್ರಮಗಳು ಮ್ಯಾಜಿಕ್ ಶೋಗಳು ವಿವಿಧ ರೀತಿಯ ಕರಕುಶಲ ತರಗತಿಗಳು ಪಿಲಿ ಕುಳ ನಿಸರ್ಗಧಾಮ ಭೇಟಿ ಸಮುದ್ರ ಹೊರಸಂಚಾರ ಭೇಟಿ ಹಾಗೆ ಒಂದೇ ವೇದಿಕೆಯಲ್ಲಿ ಸುಮಾರು 60,000 ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗ ಮತ್ತು ಧ್ಯಾನವಾದ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ದೇಶದ ಹೆಸರಾಂತ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮಗಳಲ್ಲಿ ಶಂಕರ್ ಮಹದೇವನ್ ತಂಡ ರಾಜೇಶ್ ಕೃಷ್ಣನ್ ತಂಡ ವಿಜಯ ಪ್ರಕಾಶ್ ತಂಡ ಬಾಲಮುರಳಿ ಕೃಷ್ಣ ತಂಡ ಹಾಗೂ ಅಭಿಲಾಶ್ ಪಾಂಡೆ ತಂಡ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ನುಡಿಸಿರಿ ನೃತ್ಯ ಪ್ರದರ್ಶನ ಏಳು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.

ಈ ವೇಳೆ ಮಾಯಸಂದ್ರ ಸೌರಭ ಕಾನ್ವೆಂಟ್ ನ ವಿದ್ಯಾರ್ಥಿಗಳು ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರತಿಯೊಬ್ಬರೂ ಸುಮಾರು 10 ಅಂತರರಾಷ್ಟ್ರೀಯ ಮಟ್ಟದ ಪದಕಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನ ಪಡೆದು ಜಿಲ್ಲೆಗೆ ಮತ್ತು ತಾಲೂಕಿಗೆ ಹೆಸರು ತಂದಿದ್ದಾರೆ.

ವಿದ್ಯಾರ್ಥಿಗಳ ವೈಯಕ್ತಿಕ ಕೌಶಲ್ಯಗಳನ್ನು ಹೊರ ತೆಗೆಯಲು ಸಹಕಾರಿಯಾದ ಶಾಲೆಯ ಎಲ್ಲ ಏಳು ವಿದ್ಯಾರ್ಥಿಗಳಿಗೆ ಪೋಷಕರಿಗೂ ಹಾಗೂ ಸ್ಕೌಟ್ ಮಾಸ್ಟರ್ ಮುನಿರಾಜುರವರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದಂತಹ ಶ್ರೀಮತಿ ಕಲ್ಪನಾ ಮುನಿರಾಜು ರವರು ಅಭಿನಂದಿಸಿ ಗೌರವಿಸಿದ್ದಾರೆ.

ವರದಿ- ಸಚಿನ್ ಮಾಯಸಂದ್ರ.

Right Click Disabled