ಅನಾಥ ಮಹಿಳಗೆ ಅಂತ್ಯ ಸಂಸ್ಕಾರ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ಉಮೇಶ ಕಾಮತ ಕಾರವಾರ
ಅನಾಥ ಮಹಿಳಗೆ ಅಂತ್ಯ ಸಂಸ್ಕಾರ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ಉಮೇಶ ಕಾಮತ ಕಾರವಾರ : ಉತ್ತರ ಕನ್ನಡ ಜಿಲ್ಲೆಯ. ಹೊನ್ನಾವರ ತಾಲ್ಲೂಕಿನ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಅನಾಥ ವೃದ್ದೆ ಯಾದ ಕಮಲಬಾಯಿ ಈಕೆ ಆರು ತಿಂಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು,ಸೆಂಟ್ ಇಗ್ಲೇಷಿಯಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ರಾದ ಡಾ: ವಿಶ್ವಾಸ ಪೈ ಹಾಗೂ ಡಾ: ಅಶೋಕ ಯರಗುಡ್ಡಿಯವರು. ಚಿಕಿತ್ಸೆನೀಡುತ್ತಿದ್ದರು,ಕಮಲಬಾಯಿಯವರಿಗೆ ಆರೈಕೆ ಮಾಡಲು ಯಾರು ಇರಲಿಲ್ಲ ಆಸ್ಪತ್ರೆ ಸಿಬ್ಬಂದಿ ಗಳು ಆರೈಕೆ ಮಾಡುತ್ತಿದ್ದರು,ತಾನು ನಿಧನರಾದರೆ,ಶವ ಸಂಸ್ಕಾರ ವನ್ನು ನೀವೆ ಮಾಡಿ ನನ್ನ ಆಸ್ತಿಯನ್ನು ನೀವೇ ತೆಗೆದುಕೊಳ್ಳಿ ಎಂದು ಹೇಳಿದ್ದರು .ಕಮಲಬಾಯಿ ನಿನ್ನೆ ನಿದನರಾದರು. ಶವಸಂಸ್ಕಾರಕ್ಕೆ ಯಾರು ಬರದ ಕಾರಣ ಆಸ್ಪತ್ರೆಯ ಸಿಬ್ಬಂದಿ ಹಾಗೂ ಹೊನ್ನಾವರದಲ್ಲಿ ಯಾರಿಗಾದರು ಸಮಸ್ಯೆ ಆದರೆ ಅಥವಾ ಕಷ್ಟದಲ್ಲಿ ಇದ್ದರೆ ತನ್ನ ಕೈಲಾದ ಸಹಾಯ ಮಾಡಿ ಅನಾಥವಾದ ಶವಗಳಿಗೆ ತಾನೆ ಮುಂದು ನಿಂತು.ಶವ ಸಂಸ್ಕಾರ ಮಾಡುತ್ತಾರೆ. ಇಂತಹ ಹಲವು ಕಾರ್ಯಗಳನ್ನು ಮಾಡಿ ಸಾರ್ವಜನಿಕ ರಲ್ಲಿ ಮೆಚ್ಚುಗೆ ಪಡೆದ ಉಮೇಶ ಕಾಮತರವರ ಸಹಾಯದಿಂದ ಕಮಲಾಬಾಯಿಯವರ ಶವಸಂಸ್ಕಾರ ಕೂಡ ಉಮೇಶ ಕಾಮತರವರು ಮುಂದೆನಿಂತು ಆಸ್ಪತ್ರೆ ಸಿಬ್ಬಂದಿಯವರ ಜೊತೆ ಶವಸಂಸ್ಕಾರ ನೇರೆವೇರಿಸಿದರು,ಮೃತರ ಆಸ್ತಿ ನಮಗೆ ಬೇಡಾ ಅದನ್ನು ಅವರ ಅಧಿಕೃತ ವಾರಿಸದಾರರು.ಪಡೆದುಕೊಳ್ಳಿ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಂಟೋನಿ ಲೋಪಿಸ್ ರವರು ತಿಳಿಸಿದ್ದಾರೆ,ಮಾನಿವತೆ ಮೇರೆದ ಸೆಂಟ್ ಇಗ್ಲೇಷಿಯಸ್ ಆಸ್ಪತ್ರೆಯ ಸಿಬ್ಬಂದಿ ಗಳಿಗು ಹಾಗೂ ಉಮೇಶ ಕಾಮತ ರವರಿಗೆ ಸಾರ್ವಜನಿಕ ರಿಂದ ಮೆಚ್ಚುಗೆ ಪಾತ್ರರಾಗಿದ್ದಾರೆ,