ವಿಜಯಪುರ ಜಿಲ್ಲೆಯ ಬರಟಗಿ ಗ್ರಾಮದ ಶಿವಾಜಿನಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ನೀಡಬೇಕಾಗಿದ್ದ ಪುಸ್ತಕ ನೋಟು ಬುಕ್ಕು ಇತರೆಗಳನ್ನು ನೀಡಿ ಆ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ಜೊತೆ ಸಂತೋಷ ಹಂಚಿಕೊಂಡರು.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಹಿಂದುಳಿದ ಮಕ್ಕಳ ಶೈಕ್ಷಣಿಕ ಮಾಸಿಕ ದೈಹಿಕ ಸರ್ವತೋಮುಖ ಬೆಳವಣಿಗೆಗೆ ಮೂಲಭೂತ ಸೌಕರ್ಯ ನೀಡುತ್ತಿರುವ ಯುಕೆ ರೇಷ್ಮಾ ಕೊಟ್ನಾಳ
ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ತುಂಬಾ ಕಡಿಮೆ ಯಾಕೆಂದರೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿ ಕೊಡುವುದು ಒಂದಾದರೆ ಬಡತನ ಇನ್ನೂ ಒಂದು ಕಡೆ ಕಾಡುತ್ತದೆ. ಹಳ್ಳಿಗಳಲ್ಲಿ ದುಡಿದು ಸಂಸಾರ ಸಾಗಿಸುವುದು ಹೆಚ್ಚಾಗಿರುತ್ತದೆ ಇನ್ನೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ತುಂಬಾ ತೊಂದರೆ ಆಗುತ್ತದೆ ಎಂದು ಅಂದುಕೊಂಡು ಈ ಒಂದು ಸರಕಾರಿ ಶಾಲೆಗಳನ್ನು ಉಳಿಸಿ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಕನ್ನಡವನ್ನು ಉಳಿಸಬೇಕು ಎಂಬ ಸಂದೇಶ ಸಾರುತ್ತಿರುವ ನಮ್ಮ ನಿಮ್ಮ ಉತ್ತರ ಕರ್ನಾಟಕದ (ಯುಕೆ) ಹೆಣ್ಣು ಮಗಳು ರೇಷ್ಮಾ ಕೊಟ್ನಾಳ.
ಇವರು ಶಾಲಾ ಕಾಲೇಜಿನಲ್ಲಿ ಬಡವರ ಮಕ್ಕಳಿಗೆ ನೋಟ್ ಬುಕ್, ಪುಸ್ತಕ, ಪೆನ್ನುಗಳನ್ನು ನೀಡುತ್ತಾ ಅದೇ ರೀತಿ ತನ್ನ ಗೆಳೆಯರಲ್ಲಿ ಯಾರಿಗಾದರೂ ಅಡ್ಮಿಶನ್ ಮಾಡಲು ಅಥವಾ ಪರೀಕ್ಷೆ ವೇಳೆಯಲ್ಲಿ ಹಾಲ್ ಟಿಕೆಟ್ ಪಡೆದುಕೊಳ್ಳಬೇಕಾದರೆ ಹಣ ಇಲ್ಲದೆ ಇರುವವರಿಗೆ ಇವರು ಸ್ವಂತ ಅಮ್ಮನ ಕಡೆಯಿಂದ ಹಣ ಪಡೆದುಕೊಂಡು ಆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡುವಂತ ಸ್ವಭಾವ ಕಾಲೇಜ್ ದಿನಗಳಿಂದಲೇ ಬಂದಿದೆ ಅನ್ಸುತ್ತೆ.
(ಯುಕೆ) ರೇಷ್ಮಾ ಕೊಟ್ನಾಳ ರಾಜಧಾನಿ ಬೆಂಗಳೂರಿನಲ್ಲಿ
ಬಿಎಂಟಿಸಿ ಯಲ್ಲಿ ಕಂಡಕ್ಟರ್ ಕೆಲಸ ಮಾಡುತ್ತಾ ಬಿಡುವಿನ ಸಮಯದಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡಿಕೊಳ್ಳುತ್ತಾ ಬಂದಿರುತ್ತಾರೆ ಮೊದಲು ಉತ್ತರ ಕನ್ನಡ ದಲ್ಲಿ ಹೊನ್ನಾವರ ಹಾಗೂ ಮಡಿಕೇರಿ ಎರಡು ಕಡೆ ಇವರು ಹಾಗೂ ಇವರ ಜೊತೆ ಇರುವ ಕೆಲವೊಂದು ಗೆಳತಿಯರೊಂದಿಗೆ ಖುದ್ದಾಗಿ ಗ್ರಾಮೀಣ ಪ್ರದೇಶಕ್ಕೆ ಹೋಗಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಕನ್ನಡ ಭಾಷೆಯನ್ನು ಬೆಳೆಸಬೇಕು ಅದೇ ರೀತಿ ಬಡ ಕುಟುಂಬದ ಮಕ್ಕಳಿಗೆ ಸ್ಟಡಿ ಟೇಬಲ್, ಸ್ಕೂಲ್ ಬ್ಯಾಗ್, ಚಾಪೆ ,ತ್ರೀ ಲೈನ್ ನೋಟ್ ಬುಕ್ 100 ಪುಟ, ಫೋರ್ ಲೈನ್ ನೋಟ್ ಬುಕ್ 100 ಪುಟ, ಬ್ಲೂ ಪೆನ್ ,ರೆಡ್ ಪೆನ್ ,ಸಿಸ್ ಪೆನ್ಸಿಲ್, ರಬ್ಬರ್, ಮೆಂಡರ್, ಕಂಪಾಸ್ ಪೌಚ್, ಎಕ್ಸಾಮ್ ಪ್ಯಾಡ್, ಸ್ಕೇಲ್, ವಾಟರ್ ಬ್ಯಾಗ್, ಎಕ್ಸಾಮ್ ಸೀಟ್, ಗಳನ್ನು ಕೊಡುತ್ತಾ ಬರುತ್ತಿದ್ದಾರೆ ಅದೇ ರೀತಿ ನೆರೆ ಸಂತ್ರತೆಗೆ ಉತ್ತರ ಕರ್ನಾಟಕದ ಜಮಖಂಡಿ ತಾಲೂಕಿನಲ್ಲಿ ಕೂಡ ಅವರಿಗೆ ತಿನ್ನಲು ಆಹಾರ ಹಾಗೂ ಮಲಗಲು ಬೆಡ್ ಶೀಟ್ ಅದೇ ರೀತಿ ಕೆಲವರಿಗೆ ಬಟ್ಟೆಗಳನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಇದೇ ಸಂದರ್ಭದಲ್ಲಿ ರೇಷ್ಮಾ ಅವರ ತಾಯಿ ಮನೆಯಿಂದ ಬಾಳೆಹಣ್ಣು ಚುರುಮುರಿ ಹಾರ ಮಾಡಿ ಕೊಟ್ಟಿದ್ದು ಇಲ್ಲಿ ಸ್ಮರಿಸಬಹುದು.
ಇಂತಹ ಇವರು ಮಾಡಿದ ಕಾರ್ಯಕ್ರಮಗಳನ್ನು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಹಾಕುತ್ತಿದ್ದರು ಇಂತಹ ಕೆಲಸ ಮಾಡಲು ಹಣ ಎಲ್ಲಿಂದ ಬರುತ್ತದೆ ಇವರು ಕೆಲಸ ಯಾವಾಗ ಮಾಡುತ್ತಾರೆ ಇಂತಹ ಆ ಮಾತಿಕ ಚಟುವಟಿಕೆಗಳಲ್ಲಿ ಯಾವಾಗ ಕೆಲಸ ಮಾಡುತ್ತಾರೆ ಅಂತ ಎಲ್ಲರಿಗೆ ಪ್ರಶ್ನೆ ಕಾಡುವುದು ಸಹಜ .
ಇವರು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಪೋಸ್ಟ ಹಾಕಿದ ಮೇಲೆ ಎಷ್ಟು ಬಡ ಕುಟುಂಬದವರು ನೋಡಿದ ಮೇಲೆ ಇವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ, ಬಸ್ ಡ್ರೈವರ್, ಕಂಡಕ್ಟರ್ ಗಳು ,ಲಾರಿ ಡ್ರೈವರ್ ಗಳು, ಆಟೋ ಚಾಲಕರು, ನಾವು ಬಡತನದಲ್ಲಿ ಏನು ಸಾಧಿಸಲು ಆಗಲಿಲ್ಲ ನಮ್ಮಿಂದ ಬಡವರ ಮಕ್ಕಳಿಗೆ ಸಹಾಯ ಆಗಲಿ ಅವರ ವಿದ್ಯಾಭ್ಯಾಸ ಚೆನ್ನಾಗಿ ಆದರೆ ಈ ಸಮಾಜದಲ್ಲಿ ಒಳ್ಳೆಯ ಅಧಿಕಾರಿಯಾಗಿ ಕೆಲಸ ಮಾಡಲಿ ಎಂದು ಉದ್ದೇಶದಿಂದ ಇಂತಹ ಕಾರ್ಯಕ್ರಮ ಮಾಡಲು ಉಮ್ಮಸ್ಸು ಬರುತ್ತಿದೆ.ಪೋಲಿಸ್ ಅಧಿಕಾರಿಗಳು, ಫಾರೆಸ್ಟ್ ಅಧಿಕಾರಿಗಳು ಅಲ್ಪಸ್ವಲ್ಪ ಸಹಾಯ ಮಾಡುತ್ತಿದ್ದು ಅದೇ ರೀತಿ ನಾಇರುವ ಹಾಸ್ಟೆಲ್ ನಲ್ಲಿರುವ ಕಾಲೇಜು ಹುಡುಗಿಯರು ತಮಗೆ ಕೈಲಾದಷ್ಟು ಸಹಾಯ ಸಹಕಾರ ಮಾಡುತ್ತಾ ಇದ್ದಾರೆ ಎಂದು ಯುಕೆ ರೇಷ್ಮಾ ಕೊಟ್ನಾಳ ಹೇಳಿದರು.
ಇವರು ಮಾಡಿದ ಇಂತಹ ಕಾರ್ಯಕ್ರಮಗಳನ್ನು ಅವರ ಊರಿನಲ್ಲಿ ಇರುವಂತ ಒಬ್ಬ ವ್ಯಕ್ತಿ ಇವರಿಗೆ ಫೇಸ್ಬುಕ್ ನಲ್ಲಿ ಸಂದೇಶ ಕಳಿಸುತ್ತಾರೆ ಎಲ್ಲಾ ಬಡವರ ಮಕ್ಕಳಿಗೆ ಹೋಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದೀರಿ ಒಳ್ಳೆಯದು ಆದರೆ ನೀ ಕಲಿತ ಬೆಳೆದ ಊರಲ್ಲಿ ಏನಾದರೂ ಮಾಡಿ ತೋರಿಸು ಅಂತ ಸಂದೇಶ ಹೋದಾಗ ಖುಷಿಯಿಂದ ಅವರ ಕೆಲಸಕ್ಕೆ ಎರಡು ದಿನ ರಜೆ ಹಾಕಿ
ಅವರ ಕೆಲಸದಲ್ಲಿ ಬಿಡು ಮಾಡಿಕೊಂಡು ಇಂತಹ ಒಂದು ಸಮಾಜ ಸೇವೆ ಮಾಡುತ್ತಿರುವುದು ಕಂಡು ನಮಗೆಲ್ಲರಿಗೂ ಖುಷಿ ಆಗುತ್ತೆ. ನಮ್ಮ ವಿಜಯಪುರ ಜಿಲ್ಲೆಯ ಹೆಣ್ಣುಮಗಳು ಇಂತಹ ಒಂದು ಕೆಲಸ ಮಾಡುತ್ತಿದ್ದಾರೆ ಅಂದರೆ ಅದು ವಿಜಯಪುರ ಜಿಲ್ಲೆಗೆ ಮುಂದಿನ ದಿನಮಾನಗಳಲ್ಲಿ ಒಂದು ಒಳ್ಳೆಯ ಹೆಸರು ಬಂದೆ ಬರುತ್ತೆ. ಈಗಾಗಲೇ ಕೆಲವು ಗ್ರಾಮೀಣ ಪ್ರದೇಶದಲ್ಲಿರುವ ಬಡ ಮಕ್ಕಳ ಭೇಟಿ ನೀಡಿ ಅಲ್ಲಿ ಕಾಯಕ ಸಂಕಲ್ಪ ಮಾಡಿದ್ದಾರೆ ಬರುವ ದಿನಗಳಲ್ಲಿ ಇನ್ನಷ್ಟು ದಾನಿಗಳು ಇವರಿಗೆ ಕೈಜೋಡಿಸಿ ಮತ್ತಷ್ಟು ಗ್ರಾಮೀಣ ಪ್ರದೇಶದಲ್ಲಿ ಓದುವ ಬಡ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಆಕರ್ಷೇನೆ ದೊಂದಿಗೆ ಜೊತೆಗೆ ಕನ್ನಡ ಭಾಷೆಯನ್ನು ಉಳಿಸುವಂತೆ ಆಗಲಿ ಎಂದು ಯುಕೆ ರೇಷ್ಮಾ ಕೊಟ್ನಾಳ ಹೇಳಿದರು.

“ಮಲ್ಲಿಕಾರ್ಜುನ ಮ ಬುರ್ಲಿ”
ವಿಜಯಪುರ