ಜನಪ್ರತಿನಿಧಿಗಳಿಗೆ 5ವರ್ಷ, ದಕ್ಷ ಅಧಿಕಾರಿಗಳಿಗೆ 1.5 ವರ್ಷ.!!! ಜಯರಾo ಅಂಬೆಕಲ್ಲು

Spread the love

ದಕ್ಷ, ಪ್ರಾಮಾಣಿಕ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ರವರು ಉಡುಪಿ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೇವಲ 1.5 ವರ್ಷ ಆಯಿತು. ಭ್ರಷ್ಟರಿಗೆ (ಜನಪ್ರತಿನಿಧಿಗಳು ಸೇರಿ) ಸಿಂಹ ಸ್ವಪ್ನರಾಗಿದ್ದ, ಬಡವರಿಗೆ ಹಾಗೂ ಕಾನೂನು ಪ್ರಕಾರ ನಡೆದುಕೊಳ್ಳುವವರಿಗೆ ಪ್ರೀತಿ ಪಾತ್ರರಾಗಿದ್ದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಪ್ರಮೋದ್ ರವರನ್ನು ರಾಜಕೀಯ ಪ್ರತಿನಿಧಿಗಳು ಹಲವಾರು ಬಾರಿ ವರ್ಗಾವಣೆ ಮಾಡಲು ಪ್ರಯತ್ನ ಮಾಡಿದ್ದರೂ, ಜನರ ಪ್ರೀತಿಯ ಸಿಂಹಾಸನದಲ್ಲಿದ್ದ ಪ್ರಮೋದ್ ಸರ್ ರವರನ್ನು ವರ್ಗಾವಣೆ ಮಾಡಲು ಆಗಲಿಲ್ಲ. ಆದರೆ ಈಗ ಸರಕಾರವು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಜನಸಾಮಾನ್ಯರಲ್ಲಿ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ಚುನಾಯಿತ ಪ್ರತಿನಿಧಿಗಳಿಗೆ ಐದು ವರ್ಷದ ಅಧಿಕಾರ ಮಾಡುವ ಹಕ್ಕಿದ್ದರೆ, ತನ್ನ ಕಠಿಣ ಪರಿಶ್ರಮದಿಂದ ಬಂದು ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವವರಿಗೆ ಕೇವಲ ಒಂದುವರೆ ವರ್ಷ ಮಾತ್ರವೇ? ಇದು ಸರಕಾರದ ಯಾವ ನ್ಯಾಯವೆಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ರವರು ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Right Click Disabled