ಕರಾವಳಿಯ ಹಿಂದೂ ಹುಲಿ ಕಾರ್ಕಳ ಕ್ಷೇತ್ರದಲ್ಲಿ ಅಭ್ಯರ್ಥಿ..!!!

Spread the love

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರ ಅತ್ಯಂತ ಮಹತ್ವ ಪಡೆದಿದ್ದು, ಹಾಲಿ ಇಂಧನ ಸಚಿವ ಸುನಿಲ್ ಕುಮಾರ್ ಎದುರು ಶ್ರೀರಾಮ ಸೇನೆಯ ನಾಯಕ ಮುತಾಲಿಕ್ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಮುತಾಲಿಕ್ ರವರು ಯಾವುದೇ ಸಂಘಟನೆಯ ಪ್ರಮುಖರಲ್ಲಿ ಮಾತನಾಡದೆ, ಏಕಾಏಕಿಯಾಗಿ ಕಾರ್ಕಳದ ಉದ್ಯಮಿಯೊಬ್ಬರ ನಕ್ಷೆಯಂತೆ ನಡೆದಾಡಿಕೊಳ್ಳುವುದರಿಂದ ಬೇಸತ್ತಹಲವು ಹಿಂದೂ ಸಂಘಟನೆಯ ಕಾರ್ಯಕರ್ತರ ಒತ್ತಾಸೆ ಮೇರೆಗೆ ಕರಾವಳಿಯ ಹಿಂದೂ ಹುಲಿ, ಕರ್ನಾಟಕದಲ್ಲಿ ಬಜರಂಗದಳವನ್ನು ಕಟ್ಟಿದ, ಮಂತ್ರಿ ಮಹೋದಯರು ಆದ ತನ್ನೆಲ್ಲ ಶಿಷ್ಯರನ್ನು ಬೆಂಬಲಿಸಿದ ಕಟ್ಟರ್ ಹಿಂದುತ್ವವಾದಿ ಪ್ರವೀಣ್ ವಾಲ್ಕೆ ಯವರನ್ನು ಅಕಾಡಕ್ಕೆ ಇಳಿಸಲು ಹಲವು ಹಿಂದೂ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ. ಇದು ನಿಜವೇ ವಾದಲ್ಲಿ ಕಾರ್ಕಳದ ಚುನಾವಣೆ ದೇಶದಲ್ಲಿಯೇ ಮಹತ್ತರ ಪಾತ್ರ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

Right Click Disabled