ರಾಷ್ಟ್ರೀಯ ಅಂಗಾಗದಾನ ದಿನದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆಯಿಂದ ಅಂಗಾಗದಾನ ಜಾಗೃತಿ ವಾಕಥಾನ್

Spread the love

ಮಣಿಪಾಲ, 28ನೇ ನವೆಂಬರ್ 2022: ಭಾರತದಲ್ಲಿ, ನವೆಂಬರ್ 27 ರಂದು ರಾಷ್ಟ್ರೀಯ ಅಂಗಾಗದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಮೋಹನ್ ಫೌಂಡೇಶನ್ ಸಹಯೋಗದೊಂದಿಗೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು 28 ನೇ ನವೆಂಬರ್ 2022 ರಂದು ವಾಕಥಾನ್ ಅನ್ನು ಆಯೋಜಿಸಿತ್ತು. ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಲ್ ಮತ್ತು ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ)ಎಂ ಡಿ ವೆಂಕಟೇಶ್ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. ಮಾಹೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತಣ್ಣ , ಕೆಎಂಸಿ ಡೀನ್ ಡಾ ಶರತ್‌ಕುಮಾರ್ ರಾವ್, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ಉಪಸ್ಥತರಿದ್ದರು.

ಈ ಸಂದರ್ಭದಲ್ಲಿ ಡಾ ಎಚ್.ಎಸ್.ಬಲ್ಲಾಲ್ ಅವರು, ಅಂಗಾಂಗ ದಾನದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಾಕಥಾನ್ ಆಯೋಜಿಸಿದ್ದಕ್ಕಾಗಿ ಶ್ಲಾಘಿಸಿದರು.

ಡಾ ಎಂ ಡಿ ವೆಂಕಟೇಶ್ ಅವರು ಮಾತಾನಾಡುತ್ತಾ ” ಲಕ್ಷಾಂತರ ಜನರು ಅಂಗಾಂಗಕ್ಕಾಗಿ ಕಾಯುತ್ತಿದ್ದಾರೆ ಆದರೆ ಅರಿವಿನ ಕೊರತೆಯಿಂದ ಪಡೆಯಲಾಗುತ್ತಿಲ್ಲ. ಮೋಹನ್ ಫೌಂಡೇಶನ್ ನೋಂದಣಿಯಿಂದ ಇಡಿದು ಅಂಗಾಂಗ ಕಸಿ ತನಕ ಮಾಡುತ್ತೀರುವ ಕಾರ್ಯವನ್ನು ಶ್ಲಾಘಿಸಿದರು.

ಡಾ ಅವಿನಾಶ್ ಶೆಟ್ಟಿ ಸ್ವಾಗತಿಸಿದರು ಮತ್ತು ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಅರುಣ್ ಚಾವ್ಳ ಅವಲೋಕನ ನೀಡಿದರು. ಮಾಹೆ ಮಣಿಪಾಲದ ಎದುರಿನಿಂದ ಆರಂಭಗೊಂಡ ವಾಕಥಾನ್ ಟೈಗರ್ ವೃತ್ತ, ಎಂ ಐ ಟಿ ವೃತ್ತ , ಮತ್ತೆ ಟೈಗರ್ ವೃತ್ತ ಮತ್ತು ಸಿಂಡಿಕೇಟ್ ವೃತ್ತದ ಮೂಲಕ ಸಾಗಿ ಮಾಹೆ ಮಣಿಪಾಲದಲ್ಲಿ ಕೊನೆಗೊಂಡಿತು. ಕಾಯಕ್ರಮದಲ್ಲಿ ವೈದ್ಯರು, ವಿದ್ಯಾರ್ಥಿಗಳು, ಮೋಹನ್ ಫೌಂಡೇಶನ್ ಸಿಬ್ಬಂದಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ 1000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Right Click Disabled