ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಮೂಡಿಸಲು ಸೈಕಲ್ ಜಾಥಾ

Spread the love

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದ ಮುಂಭಾಗದಲ್ಲಿ ಮಾಹೆ ಮಣಿಪಾಲದ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ.ವೆಂಕಟೇಶ್ ಅವರು ಚಾಲನೆ ನೀಡಿದರು. ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ನಾಶಿಕ್ ಇಲ್ಲಿನ ಉಪಕುಲಪತಿ ಲೆ. ಜ. (ಡಾ ) ಮಾಧುರಿ ಕಾನಿಟ್ಕರ್, ಕೆ ಎಂ ಸಿ ಡೀನ್ ಡಾ ಶರತ್ ಕುಮಾರ್ ರಾವ್, ಸಹ ಡೀನ್ ಡಾ ಚಿರೊಂಜೋಯ್ ಮುಖ್ಯಪಾಧ್ಯಾಯ್, ಡಾ ಟಿ ಎಂ ಎ ಪೈ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ. ಶಶಿಕಿರಣ್, ಡಾ ವಂದನಾ, ಡಾ ಮುರಳಿಧರ್ ವರ್ಮ ಮತ್ತಿತರರು ಉಪಸ್ಥಿತರಿದ್ದರು. ಜಾಥಾ ದಲ್ಲಿ 100 ಕ್ಕೂ ಹೆಚ್ಚು ಜನರು ಸೈಕಲ್ ನೊಂದಿಗೆ ಭಾಗವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯಿಂದ ಆರಂಭಗೊಂಡು ಡಾ ಟಿ ಎಂ ಎ ಪೈ ಆಸ್ಪತ್ರೆ ಮೂಲಕ ಐ ಎಂ ಎ ಭವನ ತಲುಪಿತು.

Right Click Disabled