ಪ್ರಥಮ ಚಿಕಿತ್ಸೆ ಹಾಗೂ ಜೀವರಕ್ಷಣೆ ತರಬೇತಿ ಕಾರ್ಯಾಗಾರ :

Spread the love

ಅಗ್ನಿ ಅವಘಡಗಳನ್ನು ತಪ್ಪಿಸಲು ಮಾರ್ಗೋಪಾಯಗಳ ತಿಳಿವಳಿಕೆ ಅಗತ್ಯ – ತಜ್ಞರ ಅಭಿಮತ

ಬೆಂಗಳೂರು; ಅಪಘಾತ, ಅನಾರೋಗ್ಯಕರ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ಜೀವ ರಕ್ಷಣೆಗೆ ಸೂಕ್ತ ತಿಳಿವಳಿಕೆ ಅಗತ್ಯ. ಇಲ್ಲವಾದಲ್ಲಿ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಯನಗರದ ಯುನೈಟೆಡ್ ಆಸ್ಪತ್ರೆ ಹಾಗೂ ಸುರಕ್ಷಿತ ಲಿಫ್ಟ್ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಕ್ರಿಯೇಟಿವ್ ಡಿವೈಸೆಸ್ ಸಂಸ್ಥೆಗಳಿಂದ ಬೆಂಗಳೂರಿನಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಜೀವರಕ್ಷಣೆ ಮಾಡುವ ಕುರಿತು ತರಬೇತಿ ಕಾರ್ಯಾಗಾರದಲ್ಲಿ ತಜ್ಞರು ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ಕ್ರಿಯೇಟಿವ್ ಡಿವೈಸಸ್ ಚೇರ್ಮನ್ ಡಾ.ಬಿ.ಎಂ.ಉಮೇಶ್ ಕುಮಾರ್ ಮಾತನಾಡಿ, ಜೀವಮಾನದಲ್ಲಿ ಎಂದಾದರೊಮ್ಮೆ ಅನಾರೋಗ್ಯಕರ ಪರಿಸ್ಥಿತಿ, ಅಘಾತ, ಅಪಘಾತಗಳು ಸಂಭವಿಸಬಹುದು. ಕೆಲವೊಮ್ಮೆ ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ತೊಂದರೆಗಳೂ ಅನಾರೋಗ್ಯಕ್ಕೆ ಕಾರಣವಾಗಬಹುದು, ಅಪಘಾತ ಸಂಭವಿಸಿದಾಗ ತಕ್ಷಣವೇ ನೆರವು ಸಿಗದಿದ್ದರೆ ಅನೇಕ ವೇಳೆ ಮರಣವೂ ಸಂಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಕ್ಷಣವೂ ಅತ್ಯಮೂಲ್ಯವಾಗಿದ್ದು, ಸೂಕ್ತ ಮತ್ತು ವೈಜ್ಞಾನಿಕ ವಿಧಾನದಲ್ಲಿ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.

ಯುನೈಟೆಡ್ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ, ಶಿವಕುಮಾರ್ ಮಾತನಾಡಿ, ಅಪಘಾತ, ಅಗ್ನಿಅವಘಡ, ವಿಷಪೂರಿತ ಪ್ರಾಣಿಗಳು ಕಚ್ಚಿದ ಸಂದರ್ಭ, ಹೃದಯಘಾತ ಹಾಗೂ ಹಠಾತ್ತನೇ ಪಾರ್ಶ್ವವಾಯು ಪೀಡಿತರಾದ ಸಂದರ್ಭದಲ್ಲಿ ಅತ್ಯಂತ ಕಾಳಜಿ ಮತ್ತು ಪ್ರಥಮ ಚಿಕಿತ್ಸೆ ನೀಡಬೇಕಾಗುತ್ತದೆ. ಅಂತೆಯೇ ವಯಸ್ಕರ ಮತ್ತು ಮಕ್ಕಳಲ್ಲಿ ಕಾರ್ಡಿಯೋಪಲ್ಮನರಿ ರೆಸಿಸ್ಟೇಶನ್(ಸಿಪಿಆರ್) ಪತ್ತೆ ಹಚ್ಚುವ ವಿಧಾನಗಳ ಬಗ್ಗೆಯೂ ತಿಳಿವಳಿಕೆ ಹೊಂದಿರಬೇಕು. ಹೀಗಾಗಿ ಆಸ್ಪತ್ರೆಯಿಂದ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

Right Click Disabled