ಹಿಂದೂ ಸಂಘಟನೆಯಿಂದ 25 ಅಭ್ಯರ್ಥಿಗಳು ಸ್ಪರ್ದೇ ಮುತಾಲಿಕ್
ದತ್ತಾಪೀಠಕ್ಕಾಗಿ ಕಳೆದ 27 ವರ್ಷದಿಂದ ಹೋರಾಟ ಮಾಡುತ್ತಿರುವ ಪ್ರಮೋದ್ ಮುತಾಲಿಕ್ ರವರು, ತಮ್ಮ ಶಿಷ್ಯರು ಹಾಗೂ ದತ್ತಾಪೀಠ ಹೆಸರಲ್ಲಿ ಅಧಿಕಾರ ಪಡೆದವರು ಇಲ್ಲಿಯವರೆಗೆ ಪೀಠ ಮುಕ್ತಿಗಾಗಿ ಸ್ಪಂದನೆ ನೀಡದಿರುವುದರಿಂದ ಹಾಗೂ ಹಿಂದೂ ಕಾರ್ಯಕರ್ತರ ಅವಗಣನೆ ಯಿಂದ ಬೇಸತ್ತು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪ್ರಖರ ಹಿಂದುತ್ವವಾದಿಗಳನ್ನು ಚುನಾವಣೆಗೆ ಸ್ಪರ್ದಿಸಲು ಉತ್ಸುಕಾರಾಗಿದ್ದಾರೆ. ರಾಜ್ಯದ ಸರಿ ಸುಮಾರು 25 ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಶಿಷ್ಯರನ್ನೇ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಮಾಹಿತಿಗಳು ಹೌದಾದರೆ ಕರಾವಳಿಯಲ್ಲಿ ಬಿಜೆಪಿಗೆ ಹೊಡೆತ ಬೀಳುವುದು ನಗ್ನ ಸತ್ಯ. ಮುತಾಲಿಕ್ ರವರ ಶಿಷ್ಯಂದರು ಚುನಾವಣೆಗೆ ಸ್ಪರ್ಧಿಸುವುದಾದರೆ ಕಾಪು ವಿಧಾನಸಭಾ ಕ್ಷೇತ್ರದಿಂದ ಶ್ರೀರಾಮ್ ಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಶ್ರೀ ಮೋಹನ್ ಭಟ್, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುತ್ವ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಜಯರಾಮ್ ಅಂಬೆಕಲ್ಲು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಮುತಾಲಿಕರ ಆಶಯದಂತೆ ಇವರಿಬ್ಬರು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿಗಳು ಸೋಲುವುದು ಖಚಿತ ಎಂದು ಪ್ರಕರ ಹಿಂದುತ್ವವಾದಿಗಳು ಚರ್ಚಿಸುತ್ತಿದ್ದಾರೆ.