ಪೀಣ್ಯಾ ಕೈಗಾರಿಕಾ ಸಂಘದಿಂದ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಬೃಹತ್ ಉದ್ಯೋಗ ಮೇಳ ; 100 ಕ್ಕೂ ಹೆಚ್ಚು ಕಂಪೆನಿಗಳು ಭಾಗಿ
ಬೆಂಗಳೂರು, ನ, 11; ರೋಟರಿ ಬೆಂಗಳೂರು ಉದ್ಯೋಗ್ ಮತ್ತು ಬೆಂಗಳೂರಿನ ಮೆಸಸ್ ಡೆವಲಪ್ ಸಂಸ್ಥೆಗಳ ಸಹಯೋಗದಲ್ಲಿ ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ನಿಂದ [ನ.12] ಶನಿವಾರ ಪಿಐಎ ಭವನದಲ್ಲಿ ಬೃಹತ್ ಉದ್ಯೋಗ ಮೇಳ – ಜಾಬ್ ಫೆಸ್ಟ್ ಆಯೋಜಿಸಿದ್ದು, ನೂರಕ್ಕೂ ಹೆಚ್ಚು ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ.
ಶೇ 50 ರಷ್ಟು ಮಧ್ಯಮ ಗಾತ್ರದ ಕಂಪನಿಗಳು ಮತ್ತು ಉಳಿದಂತೆ ಸಣ್ಣ ಮತ್ತು ಸೂಕ್ಷ್ಮ ಕಂಪನಿಗಳು ಮೇಳದಲ್ಲಿ ಉದ್ಯೋಗ ನೀಡಲಿವೆ. ಸುಮಾರು 7000 ಅಭ್ಯರ್ಥಿಗಳು ಈಗಾಗಲೇ ವಿವಿಧ ಹುದ್ದೆಗಳಿಗಾಗಿ ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷ ಮಂಜುನಾಥ ಎಚ್ ತಿಳಿಸಿದ್ದಾರೆ.
ಬೆಳಿಗ್ಗೆ 9:30 ರಿಂದ ಜಾಬ್ ಫೆಸ್ಟ್ ಆರಂಭವಾಗಲಿದ್ದು, ದಾಸರಹಳ್ಳಿ ಆರ್. ಮಂಜುನಾಥ್, ಮೇಳವನ್ನು ಉದ್ಘಾಟಿಸಲಿದ್ದಾರೆ.
ಕಾರ್ಮಿಕ ಇಲಾಖೆ ಹೆಚ್ಚುವರಿ ಆಯುಕ್ತ ಡಾ ಮಂಜುನಾಥ್ ಜಿ. ಕಾರ್ಮಿಕ ಆಯುಕ್ತರಾದ ಅಶ್ವಿನ್ ಗೌಡ, ಉಪ ಕಾರ್ಮಿಕ ಆಯುಕ್ತರಾದ ಎ.ಎಸ್. ಉಮೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸ್ಥಳ: ಪಿಐಎ ಭವನ; ನಂ. 18/ಬಿ, 1ನೇ ಕ್ರಾಸ್, 1ನೇ ಹಂತ, ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು
ಹೆಚ್ಚಿನ ಮಾಹಿತಿಗೆ ಆರಿಫ್, ಪಿಐಎ ಹಿರಿಯ ಉಪಾಧ್ಯಕ್ಷ, ದೂ; 98451 10259
ಚಂದ್ರಶೇಖರ್ ಎಂ ಪಿಐಎ ಕಾರ್ಯದರ್ಶಿ, 98453 77061