ದತ್ತಮಾಲಾ ಅಭಿಯಾನಕ್ಕೆ ಉಡುಪಿಯಿಂದ ಸಾವಿರಾರು ಕಾರ್ಯಕರ್ತರು
ಚಿಕ್ಕಮಗಳೂರಿನ ಚಂದ್ರ – ದ್ರೋಣ ಪರ್ವತದಲ್ಲಿರುವ ಗುರು ದತ್ತಾತ್ರೇಯರ ಮುಕ್ತಿಗಾಗಿ ನಿರಂತರ ಕಳೆದ 17 ವರ್ಷದಿಂದ ಪ್ರಖರ ಹಿಂದೂ ಸಂಘಟನೆಯಾದ ಶ್ರೀ ರಾಮಸೇನೆಯಿಂದ ಹೋರಾಟ ನಡೆಯುತ್ತಿದೆ. ದತ್ತಾತ್ರೇಯರ ಹೆಸರಿನಲ್ಲಿ ಅಧಿಕಾರ ಪಡೆದ ರಾಜಕಾರಣಿಗಳು ಇಲ್ಲಿಯವರೆಗೆ ಅದಕ್ಕೆ ಮುಕ್ತಿ ಕೊಡದಿರುವುದು ವಿಪರ್ಯಾಸವಾಗಿದೆ.
ದತ್ತಾಪೀಠಕ್ಕಾಗಿ ನಿರಂತರ ಹೋರಾಟ ಮಾಡುತ್ತಿರುವ ಪ್ರಮೋದ್ ಮುತಾಲಿಕ್ ರವರ ನೇತೃತ್ವದಲ್ಲಿ ನವಂಬರ್ 13 ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ *”ದತ್ತಾಪೀಠ ಚಲೋ”* ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ 1000 ಕ್ಕೂ ಮಿಕ್ಕಿ ಹಿಂದೂಭಾಂದವರು ಭಾಗವಹಿಸಲಿದ್ದಾರೆ.ಹಾಗೂ ಸಂಘಟನೆಯ ಸುಮಾರು 11 ಗುರಿಗಳ ಸಲುವಾಗಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ನಿಶ್ಚಿತ ಹಾಗೂ ರಾಜ್ಯ ಸರಕಾರ ದತ್ತಾಪೀಠಕ್ಕೆ ಮುಕ್ತಿ ಕೊಡದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸರಕಾರಕ್ಕೆ ಮುಳುವಾಗಲಿದೆ ಎಂದು ಉಡುಪಿ ಜಿಲ್ಲಾ ಶ್ರೀ ರಾಮಸೇನೆಯ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.