ಶಿಲ್ಪ ಗುರುಕುಲದಲ್ಲಿ ಮರ ಕೆತ್ತನೆ, ಕಲ್ಲು ಕೆತ್ತನೆ ತರಬೇತಿಗೆ ಚಾಲನೆ

ಬೆಂಗಳೂರು: ಸಾಗರದ ಶಿಲ್ಪ ಗುರುಕುಲ ದ 2022-23 ಸಾಲಿನ ಮರ ಕೆತ್ತನೆ, ಕಲ್ಲು ಕೆತ್ತನೆ ತರಬೇತಿ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಈ ಬಾರಿಯ ವಿಶೇಷ ಎಂದರೆ ಮೊಟ್ಟ ಮೊದಲ ಬಾರಿಗೆ ಇಬ್ಬರು ದಿವ್ಯ ಚೇತನರನ್ನು ತರಬೇತಿಗೆ ದಾಖಲು ಮಾಡಿಕೊಳ್ಳಲಾಗಿದೆ. ಕರಕುಶಲ ನಿಗಮದ ಒಟ್ಟು 20 ವಿದ್ಯಾರ್ಥಿಗಳ ಈ ಶಾಲೆಯಲ್ಲಿ ತರಬೇತಿ, ಊಟ, ವಸತಿ, ಸಲಕರಣೆಗಳು, ಶೈಕ್ಷಣಿಕ ಪ್ರವಾಸ ಎಲ್ಲವೂ ಉಚಿತವಿದ್ದು, ಕರ್ನಾಟಕದ ಬೀದರ್ ನಿಂದ ಹಿಡಿದು ಕೊಡಗುವರೆಗೆ, ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಸಕ ಹರತಾಳು ಹಾಲಪ್ಪ, ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಐಪಿಎಸ್, ಕೈಗಾರಿಕಾ ಇಲಾಖೆಯ ಜಂಟಿ ಹಾಗೂ ಉಪ ನಿರ್ದೇಶಕರು, ಕೌನ್ಸಿಲರ್ ಶಂಕರ್ ಭಾಗವಹಿಸಿದ್ದರು