ಕವಲೋಡಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಮನವಿ

Spread the love

ಕುಮಟಾ ತಾಲೂಕಿನ ಕಣಕಲೆ ಹಾಗೂ ಕವಲೋಡಿ ಗ್ರಾಮಸ್ಥರು ಇಂದು ಶಾಸಕರ ನಿವಾಸಕ್ಕೆ ಆಗಮಿಸಿ, ಕವಲೋಡಿಯಿಂದ ಕಣಕಲೆ ಮಾರ್ಗವಾಗಿ ಹೊಲವಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಮಾನ್ಯ ದಿನಕರ ಶೆಟ್ಟಿಯವರು ಕವಲೋಡಿಯಿಂದ ಕಣಕಲೆ ಮಾರ್ಗವಾಗಿ ಹೊಲವಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶಾಶ್ವತ ರಸ್ತೆಯನ್ನಾಗಿಸಿ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿಕೊಡಲು ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಸಂತೆಗುಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಾಗಿರುವ ಶ್ರೀ ವಿನಾಯಕ ಭಟ್, ಸೊಪ್ಪಿನಹೊಸಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ಅಬ್ದುಲ್ ಖಾದರ್ ಹಾಗೂ ಸದಸ್ಯ ಶ್ರೀ ಈಶ್ವರ ಮರಾಠಿ, ಕವಲೋಡಿ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಶ್ರೀ ಜಟ್ಟಪ್ಪ ಗೌಡ, ಹಾಗೂ ಆ ಭಾಗದ ಪ್ರಮುಖರಾಗಿರುವ ಶ್ರೀ ಮಂಜುನಾಥ ಗೌಡ, ಶ್ರೀ ಜನಾರ್ಧನ ಮುಕ್ರಿ, ಶ್ರೀ ಮಹಾದೇವ ನಾಯ್ಕ, ಶ್ರೀ ಉಸ್ಮಾನ ಸಾಬ ಮತ್ತಿತರರು ಇದ್ದರು.

Right Click Disabled