ಆರು ಕೊಟಿ ವೆಚ್ಚದಲ್ಲಿ ನಿರ್ಮಾಣ ವಾದ ಭವ್ಯ ನಾಮದಾರಿ ಸಭಾಭವನ ಹಾಗೂ ವಿದ್ಯಾರ್ಥಿ ನಿಲಯ
ನಾಮದಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನ ಉದ್ಘಾಟನಾ ಸಮಾರಂಭವು ಧರ್ಮದರ್ಶಿಗಳ ಆರ್ಶಿವಾದದೊಂದಿಗೆ ನಡೆಯಿತು. ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಜಿಲ್ಲಾ ನಾಮದಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಭವನ ವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಯಾದ ಪರಮ ಪೂಜ್ಯರಾದ ಶ್ರೀ ಶ್ರೀ ಡಾ: ವೀರೇಂದ್ರ ಹೆಗ್ಗಡೆಯವರ ಸಾನಿದ್ಯದಲ್ಲಿ ಹಾಗೂ ನಾಮದಾರಿ ಸಮಜಾದ ಶ್ರೀ ಬೃಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅಮೃತ ಹಸ್ತದಿಂದ ಲೋಕಾರ್ಪಣೆ ಗೊಂಡಿತು,ಈ ಕಾರ್ಯಕ್ರಮದಲ್ಲಿ ಮಾನ್ಯ ಉಸ್ತವಾರಿ ಸಚಿವರಾದ ಶ್ರೀ ಕೋಟಾ ಶ್ರೀ ನಿವಾಸ ಪೂಜಾರಿ,ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಸುನೀಲ್ ನಾಯ್ಕ, ಹೊನ್ನಾವರ ಹಾಗೂ ಕುಮಟಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ದಿನಕರ ಶೆಟ್ಟಿ,ಮಾಜಿ ಶಾಸಕರಾದ ಮಂಕಾಳ ವೈದ್ಯ,ಜೆ.ಡಿ.ನಾಯ್ಕ, ಆರ್ ಎನ್ ನಾಯ್ಕ,ಮಾಜಿ ಸಚಿವರಾದ ಶಿವಾನಂದ ನಾಯ್ಕ ,ಮಾಜಿ ಸದಸ್ಯರಾದ ಪುಷ್ಪಾ ನಾಯ್ಕ, ದೀಪಕ ನಾಯ್ಕ, ಪಟ್ಟಣ ಪಂಚಾಯತ್ ಅದ್ಯಕ್ಷರಾದ ಶ್ರೀ ಶಿವರಾಜ್ ಮೆಸ್ತ,ಹಾಗೂ ನಾಮಧಾರಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು.ಹಾಗೂ 1500ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.