ನಾ ಕಂಡ ಕಲಿಯುಗದ ಶ್ರವಣ ಕುಮಾರ ಟಿ. ಪಿ. ಮಂಜುನಾಥ್

ತಾಯಿ ಜಗತ್ತಿನಲ್ಲಿ ದೇವರ ಮತ್ತೊಂದು ರೂಪ. ದೇವರು ತಾಯಿಯ ಮೂಲಕ ಇಡೀ ಸೃಷ್ಟಿಯನ್ನುಸೃಷ್ಟಿಸಿದ್ದಾನೆ. ತಾಯಿಯ ಮಡಿಲು ಮಗುವಿನ ಮೊದಲ ಜಗತ್ತು. ಅವಳ ಮಡಿಲಲ್ಲಿ ಕೂತು ಪ್ರಪಂಚದಲ್ಲಿ ಹೊಸ ಬಣ್ಣಗಳನ್ನು ಕಾಣುತ್ತೇವೆ. ತಾಯಿಯು ಮೊದಲ ಶಾಲೆ ಮತ್ತು ಮೊದಲ ಶಿಕ್ಷಕ, ಮತ್ತು ಮಗು ತನ್ನ ಜೀವನದಲ್ಲಿ ಹೇಳುವ ಮೊದಲ ಪದವೂ ಸಹ “ತಾಯಿ ಅಥವಾ ಅಮ್ಮ”.
ತಾಯಿಯೇ ತನ್ನ ಜಗತ್ತು, ತನ್ನ ಸರ್ವಸ್ವ, ತಾಯಿ ದೇವರಿಗಾಗಿ ಸರಿಸುಮಾರು 11 ತಿಂಗಳು ರಾತ್ರಿ ಹಗಲನ್ನದೆ , ತನ್ನೆಲ್ಲ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಾ, ಎಲ್ಲಿಯೂ ಧೃತಿಗೆಡದೆ ತ್ರಿವಿಕ್ರಮನಂತೆ ತನ್ನ ತಾಯಿಯ ಆರೈಕೆ ಮಾಡುತ್ತ, ತಾಯಿಯನ್ನು ಮಗುವಿನಂತೆ ನೋಡಿಕೊಂಡರು. ಇಂದಿನ ಕಾಲಘಟ್ಟದಲ್ಲಿ ಸಹ ಇಂತಹ ಮಗನಿದ್ದಾನೆ ಎನ್ನುವುದನ್ನು ಹೇಳುವುದಕ್ಕೆ ಪದಗಳೇ ಸಿಗುತ್ತಿಲ್ಲ ಇವರೇ ಕುಂದಾಪುರದ ಹಿರಿಯ ಪತ್ರಕರ್ತರಾದ ಟಿ.ಪಿ.ಮಂಜುನಾಥ್ “ಕುಂದಾಪುರ ಮಿತ್ರ” ಪತ್ರಿಕೆ ಸಂಪಾದಕರು.
ಟಿ. ಪಿ. ಮಂಜುನಾಥ್ ಮೊದಲಿನಿಂದಲೂ ಯಾರೇ ಸಮಸ್ಯ ಎಂದು ಹೇಳಿಕೊಂಡರೆ ಅವರಿಗೆ ಸಾಂತ್ವಾನ ಹೇಳಿ ಅವರಿಗೆ ಆತ್ಮಸ್ಥೈರ್ಯ ತುಂಬಿಸಿ ಅವರಿಂದಾದ ಸಹಾಯ ಮಾಡುತ್ತಿದ್ದರು. ಸಾರ್ವಜನಿಕ ವಲಯದಲ್ಲಿ ಕಂಡು ಬರುವ ಸನಸ್ಯೆಗಳಿಗೆ ಅವರು ಕೂಡಲೇ ಸ್ಪಂದಿಸಿ ತನ್ನ ಲೇಖನಿಯಿಂದ ಅದೆಷ್ಟೋ ಜನರಿಗೆ ನ್ಯಾಯ ಕೊಡಿಸಿದ ವ್ಯಕ್ತಿ, ಗೆಳೆಯರೆಂದರೇ ಜೀವಕ್ಕೆ ಜೀವ ಕೊಡುವ ಜಾಯಮಾನ ಇರುವಂತಹ ವ್ಯಕ್ತಿತ್ವ. ಇದೆಲ್ಲ ಗುಣಗಳು ಇವರ ತಂದೆ ತಾಯಿಯಿಂದಲೇ ಬಂದ ಸಂಸ್ಕಾರ.
ಇಂದಿನ ಕಾಲಘಟ್ಟದಲ್ಲಿ ಅದೆಷ್ಟೋ ಮಕ್ಕಳು ತಂದೆ ತಾಯಿ ಅನಾರೋಗ್ಯ ಪೀಡಿತರಾದರೆ ಅವರ ಆರೈಕೆ ಮಾಡುವವರು ಬೆರಳೆಣಿಕೆಯಷ್ಟೇ ಮಂದಿ. ಅಂತಹದರಲ್ಲಿ ತನ್ನ ತಾಯಿಗಾಗಿ ಹನ್ನೊಂದು ತಿಂಗಳು ಹಗಲು ರಾತ್ರಿ ಎನ್ನದೇ ಅವರ ಆರೈಕೆ ಮಾಡುತ್ತ, ತನ್ನ ವೃತ್ತಿಯನ್ನು ನಿಭಾಯಿಸುತ್ತ ಟಿ.ಪಿ ಯವರು ಅದನ್ನೆ ಸವಾಲಾಗಿ ಸ್ವೀಕರಿಸಿ ಪ್ರತಿನಿತ್ಯ ಅಮ್ಮನ ಆರೈಕಯಲ್ಲೇ ಕಳೆದರು. ಇಂದು ತನ್ನ ತಾಯಿಗಾಗಿ ಸ್ವತಃ ನಿಂತು ಸೇವೆ ಮಾಡೋರು ವಿರಳ. ಅದರಲ್ಲೂ ಹನ್ನೊಂದು ತಿಂಗಳು ಹಲವಾರು ಆಸ್ಪತ್ರೆಗಳ ಓಡಾಟ, ಎಲ್ಲೂ ವಿಚಲಿತರಾಗದೆ ತಾಯಿಯ ಸೇವೆಗೈದರು. ಶನಿವಾರ ತಡರಾತ್ರಿ ತಾಯಿ ಗಿರಿಜಮ್ಮ ದೈವಾಧೀನರಾದರು.
ಜನ್ಮ ನೀಡಿದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡು ಅವರಿಗೆ ತಕ್ಕ ಮಕ್ಕಳು ಎಣಿಸಿಕೊಳ್ಳುವಾ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಆದರೆ ಇಲ್ಲಿ ಟಿ. ಪಿ ಮಂಜುನಾಥ್ ರವರು ಇಂದಿನ ಪೀಳಿಗೆಗೆ ಹನ್ನೊಂದು ತಿಂಗಳು ತಾಯಿ ಸೇವೆ ಮಾಡಿ ಇನ್ನೊಂದು ಬಾರಿ ಶ್ರವಣ ಕುಮಾರನನ್ನು ನೆನಪಿಸಿ, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಕೇವಲ ಮದರ್ಸ್ ಡೇ ದಿನ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಡಿಪಿ ಹಾಕಿ ಶೋಕಿ ಮಾಡುದರಿಂದ ಪ್ರಯೋಜನವಿಲ್ಲ. ತಂದೆ ತಾಯಿ ಇರುವವಷ್ಟು ದಿನ ಅವರ ಮನಸ್ಸು ನೋಯಿಸದೆ ಅವರ ಜೊತೆ ಪ್ರೀತಿಯಿಂದ ನಡೆದುಕೊಂಡು ಸೇವೆ ಮಾಡಿ ಪುಣ್ಯ ಕಟ್ಟಿಕೊಳ್ಳಿ.
ಟಿ.ಪಿ.ಯವರಿಗೆ ಟಿ.ಪಿಯವರೇ ಸಾಟಿ! “ತಾಯಿಗೆ ತಕ್ಕ ಮಗ” ನಾ ಕಂಡ ಕಲಿಯುಗದ ಶ್ರವಣ ಕುಮಾರ ಟಿ. ಪಿ. ಮಂಜುನಾಥ್, ಟಿ.ಪಿಯವರ ಈ ಹೋರಾಟ ನಿಜವಾಗಲೂ ಪ್ರಶಂಸನೀಯ! ತಾಯಿಯವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತ, ಭಗವಂತ ಟಿ.ಪಿ. ಮಂಜುನಾಥ್ ರವರ ಕುಂಟುಬಕ್ಕೆ ತಾಯಿಯ ಅಗಲುವಿಕೆಯ ದುಃಖ ಭರಿಸುವ ಶಕ್ತಿ ನೀಡಲಿ.