ಮೈಸೂರು ದಸರಾದಲ್ಲಿ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯಿಂದ ಶ್ರೀನಿವಾಸ ಕಲ್ಯಾಣ ದಶಾವತಾರ ನೃತ್ಯ ರೂಪಕ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2022 ಸಾಂಸ್ಕೃತಿಕ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯ ಗುರು ಬಿ. ನಾಗೇಶ್ ಮತ್ತು ಶಿಷ್ಯವೃಂದದ ಮಕ್ಕಳು ಸೇರಿದಂತೆ 20 ಕಲಾವಿದರಿಂದ ಶ್ರೀನಿವಾಸ ಕಲ್ಯಾಣ ದಶಾವತಾರ ನೃತ್ಯ ರೂಪಕ ಭರತನಾಟ್ಯ ಮತ್ತು ಶಕ್ತಿ ಸ್ವರೂಪ ಮಾತೆ ದುರ್ಗೆಯ ಒಂಬತ್ತು ರೂಪಗಳ ಆರಾಧನೆಯ ನವರಾತ್ರಿ ವೈಭವ ಭರತನಾಟ್ಯ ಪ್ರದರ್ಶನ ಮೈಸೂರು ಕರ್ನಾಟಕ ಕಲಾಮಂದಿರ ವೇದಿಕೆಯಲ್ಲಿ ನಡೆಯಿತು
ಶ್ರೀನಿವಾಸ ಕಲ್ಯಾಣ ಹಾಗು ದಶಾವತಾರ, ಈ ವಿಷೇಶವಾದ ನೃತ್ಯ ರೂಪಕದಲ್ಲಿ ಸಾಕ್ಷಾತ್ ಕಅಯುಗದ ಅವತಾರ ಪುರುಷನಾದ ಶ್ರೀ ವಿಷ್ಣುವಿವು ದುಷ್ಟ ಸಂಹಾರಕ್ಕಾಗಿ ಮತ್ತು ಶಿಷ್ಟ ರಕ್ಷಣಿಗೆ ಬೇಕಾಗಿ ತಾಳದಂತಹ ಹತ್ತು ಅವತಾರಗಳ ಬಗ್ಗೆ ವರ್ಣಿಸಲಾಗಿದೆ ಹಾಗೂ ಶ್ರೀ. ವಿಷ್ಣುವು ಧರೆಗವತರಿಸಿ ಲೋಕ ಕಲ್ಯಾಣಕ್ಕಾಗಿ ಪದ್ಯಾಮತಿಯನ್ನು ಕಲ್ಯಾಣವಾಗುತ್ತಾನೆ. ಈ ಕಥಾಭಾಗವನ್ನು ನಾಟ್ಯಾಂಕುರ ಫರ್ಫಾಮಿಂಗ್ ಆಟ್ಸ್ ತಂಡದ 20 ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು. ಮೈಸೂರು ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಬಿ.ಎನ್ ಗಿರೀಶ್ ಅವರು ಕಲಾವಿದರನ್ನು ಸನ್ಮಾನಿಸಿದರು.
ನಾಟ್ಯಾಂಕುರ ಫರ್ಫಾಮಿಂಗ್ ಆರ್ಟ್ಸ್ ಸಂಸ್ಥೆಯ ಅಧ್ಯಕ್ಷರಾದ ಗುರು. ಬಿ. ನಾಗೇಶ್ ರವರು 5ನೇ ವಯಸ್ಸಿನಿಂದ ನೃತ್ಯವನ್ನು ಕಡೆಯಲು ಪ್ರಾರಂಬಿಸಿ ಗುರು, ಕರ್ನಾಟಕ ಕಲಾಶ್ರೀ ಕೆ. ಬೃಂದಾರವ ಶಿಷ್ಯನಾಗಿ ಭರತನಾಟ್ಯವನ್ನು ಅಭ್ಯಾಸ ಮಾಡಿ ಭರತನಾಟ್ಯದಲ್ಲಿ ವಿದ್ವತ್, ಬಿ.ಎಸ್.ಎಸ್. ಡಿಪ್ಲೊಮಾ ಹಾಗು ವಿಶಾರದ ವನ್ನು ಪೂರ್ಣಮಾಡಿರುತ್ತಾರೆ. ಸುಮಾರು 18 ವರ್ಷಗಳಿಂದ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸುಮಾರು 600 ಕ್ಕೂ ಹೆಚ್ಚು ಭರತನಾಟ್ಯ ನೃತ್ಯಗಳನ್ನು ಪ್ರದರ್ಶಿಸಿ ಗುರು ಗೌರವ, ಗುರು ರತ್ನ ನಾಟ್ಯ ಕುಸುಮ, ನಾಟ್ಯ ರತ್ನ, ನಾಟ್ಯ ಚೇತನ ಮುಂತಾದ ನೂರಾರು ಪ್ರಶಸ್ತಿ ಪುರಸ್ಥಾರಗಳನ್ನು ಪಡೆದಿರುತ್ತಾರೆ.
2015 ರಿಂದ ಬೆಂಗಳೂರಿನಲ್ಲಿ ನಾಟ್ಯಾಂಕುರ ಫರ್ಫಾಮಿಂಗ್ ಆಟ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನುರಿತ ಅಧ್ಯಾಪಕರೊಂದಿಗೆ ಭರತನಾಟ್ಯ, ಸಂಗೀತ, ಯೋಗ, ಚಿತ್ರಕಲೆ, ನಾಟಕ ಹೀಗೆ ಹಲವಾರು ಕಲೆಗಳಿಗೆ ತರಗತಿಗಳನ್ನು ನಡೆಸುತ್ತಿದ್ದು ತನ್ನ ಸಂಸ್ಥೆಯ ಕಲಾವಿದರಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸು ಅವಕಾಶವನ್ನು ಕಲ್ಪಸಿಕೊಟ್ಟು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ.